ಪ್ರಶಾಂತ್ ಸಂಬರಗಿ ವಿರುದ್ಧ ಕಮಿಷನರ್​ಗೆ ದೂರು ಕೊಟ್ಟ ಚಂದ್ರಚೂಡ್.. ದೂರಿನಲ್ಲಿ ಏನಿದೆ..?

ಪ್ರಶಾಂತ್ ಸಂಬರಗಿ ವಿರುದ್ಧ ಕಮಿಷನರ್​ಗೆ ದೂರು ಕೊಟ್ಟ ಚಂದ್ರಚೂಡ್.. ದೂರಿನಲ್ಲಿ ಏನಿದೆ..?

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಗರ ಪೊಲೀಸ್ ಕಮಿಷನರ್​ಗೆ ಚಕ್ರವರ್ತಿ ಚಂದ್ರಚೂಡ್ ದೂರು ನೀಡಿದ್ದಾರೆ. ಸಿನಿಮಾ ನಟ- ನಟಿಯರು ಹಾಗೂ ರಾಜಕೀಯ ನಾಯಕರನ್ನ ಟಾರ್ಗೆಟ್ ಮಾಡಿ ಅವರ ಮೇಲೆ ಸುಳ್ಳು ಆರೋಪ ಮಾಡ್ತಿರುವ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರಮುಖ ಅಂಶಗಳು ಹೀಗಿವೆ..

  1. ಯಾವುದೇ ಆಧಾರ ಇಲ್ಲದೆ ನಟ- ನಟಿಯರನ್ನು ಪ್ರಶಾಂತ್ ಸಂಬರಗಿ ಟಾರ್ಗೆಟ್ ಮಾಡ್ತಾ ಇದ್ದಾರೆ.
  2. 3 ವರ್ಷಗಳ ಹಿಂದೆ ಮೀಟೂ ಪ್ರಕರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದಿದ್ದ.
  3. ಶೃತಿ ಹರಿಹರನ್ ಗೆ ಕ್ರೈಸ್ತ ಮಿಷನರಿಯಿಂದ ಕೋಟ್ಯಾಂತರ ಹಣ ಸಂದಾಯವಾಗಿದೆ ಅಂತೇಳಿದ್ದ.. ಆದ್ರೆ ಯಾವುದೇ ದಾಖಲೆ ಕೊಟ್ಟಿಲ್ಲ.
  4. ಜಮೀರ್ ಅಹ್ಮದ್ ತೆರಿಗೆ ಹಣದಲ್ಲಿ ಶ್ರೀಲಂಕಾ ಕ್ಯಾಸಿನೋಗೆ ಹೋಗಿ ಮೋಜು ಮಸ್ತಿ ಅಂತ ಆರೋಪ ಮಾಡಿ ಅದಕ್ಕೂ ದಾಖಲೆಗಳು ನೀಡದೆ ಬ್ಲಾಕ್ ಮೇಲ್ ಮಾಡಿದ್ದಾರೆ.
  5. ಡ್ರಗ್ಸ್ ಪ್ರಕರಣದಲ್ಲಿ ನಟಿಯರು ಡ್ರಗ್ಸ್​ನಿಂದಲೇ ಹಣ ಸಂಪಾದನೆ, ಅದ್ರ ಮೂಲ ಗೊತ್ತು ಅಂದಿದ್ದ.. ಅದ್ರ ಬಗ್ಗೆಯೂ ದಾಖಲೆ ಕೊಟ್ಟಿಲ್ಲ.
  6. ಇದ್ರಿಂದ ಕನ್ನಡ ಸಿನಿಮಾ ರಂಗದ ಮಾನವನ್ನು ದೇಶ್ಯಾದ್ಯಂತ ಹರಾಜು ಹಾಕಿದ ಹಾಗೆ ಆಗಿದೆ.
  7. ಇದುವರೆಗೂ ಮಾಧ್ಯಮ ಮುಂದೆ ಹೇಳಿದ ಹೇಳಿಕೆಗೆ ದಾಖಲೆಗಳನ್ನು ಕೊಟ್ಟಿಲ್ಲ.
  8. ನಿರೂಪಕಿ ಅನುಶ್ರೀ ವಿರುದ್ಧ ಕೋಟ್ಯಾಂತರ ರೂಪಾಯಿ ಮನೆ ಕಟ್ಟಿದ್ದಾರೆ ಅಂತ ಹೇಳಿದ್ರು.. ಅದ್ರ ಕುರಿತಾಗಿಯೂ ದಾಖಲೆಗಳನ್ನು ಕೊಟ್ಟಿಲ್ಲ.
  9. ಶುಗರ್ ಡ್ಯಾಡಿ ಬಗ್ಗೆಯೂ ದಾಖಲೆಗಳನ್ನು ಯಾವೊಬ್ಬ ಅಧಿಕಾರಿಗಳಿಗೂ ನೀಡಿಲ್ಲ.
  10. ಈ ಎಲ್ಲಾ ಪ್ರಕರಣ ಗಮನಿಸಿದಾಗ ಬ್ಲಾಕ್ ಮೇಲ್ ದಂಧೆಯಲ್ಲಿ ತೊಡಗಿದ್ದಾರೆ ಅಂತ ಅನುಮಾನ ವ್ಯಕ್ತವಾಗಿದೆ. ಈ ಕಾರಣಕ್ಕೆ ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

Source: newsfirstlive.com Source link