ಸರ್ಕಾರಿ ಕಾರಿನಲ್ಲಿ ಶಾಸಕರ ಮಗನ ಖಾಸಗಿ ದರ್ಬಾರ್

ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುತ್ತಿದ್ದರೆ ಮತ್ತೊಂದು ಕಡೆ ಶಾಸಕರಿಗೆ ನೀಡಿದ ಸರ್ಕಾರಿ ಕಾರಿನಲ್ಲಿ ಅವರ ಮಕ್ಕಳು ಅಂಧಾ ದರ್ಬಾರ್ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಂದ ಸರ್ಕಾರಿ ವಾಹನ ದುರ್ಬಳಕೆಯಾಗುತ್ತಿದ್ದು, ಪುತ್ರ ಅರುಣ್ ಶಾಸಕರಿಗೆ ನೀಡಿದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಈ ಮೂಲಕ ಸರ್ಕಾರದಿಂದ ನೀಡಿದ ಕಾರನ್ನು ಶಾಸಕರ ಪುತ್ರ ದುರಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಖಾಸಗಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಜನರ ಭಾವನೆಗಳನ್ನ ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ: ಯು.ಟಿ.ಖಾದರ್

ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಹಿನ್ನೆಲೆ ಸರ್ಕಾರದಿಂದ ಕಾರು ಮಂಜೂರಾಗಿದೆ. ಆದರೆ ಜನರ ತೆರಿಗೆ ಹಣದಲ್ಲಿ ಸರ್ಕಾರದಿಂದ ಭರಿಸುವ ಡಿಸೇಲ್ ಹಾಕಿಕೊಂಡು ಕ್ಷೇತ್ರದಲ್ಲಿ ಅವರ ಪುತ್ರ ಓಡಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

blank

ಶಾಸಕರ ಹಿರಿಯ ಪುತ್ರ ಅರುಣ್ ಐಹೊಳೆ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವ ನಿಗಮದ ಅಧ್ಯಕ್ಷರು ಮಾತ್ರ ಸರ್ಕಾರದ ಕಾರು ಬಳಕೆ ಮಾಡಬೇಕು ಎಂಬ ನಿಯಮವಿದೆ. ನಿಯಮವಿದ್ದರೂ ಡೋಂಟ್ ಕೇರ್ ಎಂದು ಸರ್ಕಾರಿ ವಾಹನವನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುವ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Source: publictv.in Source link