ಸೂನ್​ ಸೂದ್​ಗೆ ಸೇರಿದ ನಿವಾಸ, ಕಚೇರಿ ಸೇರಿ 6 ಜಾಗಗಳಲ್ಲಿ ಮೇಲೆ ಇನ್​ಕಮ್​ ಟ್ಯಾಕ್ಸ್ ದಾಳಿ

ಸೂನ್​ ಸೂದ್​ಗೆ ಸೇರಿದ ನಿವಾಸ, ಕಚೇರಿ ಸೇರಿ 6 ಜಾಗಗಳಲ್ಲಿ ಮೇಲೆ ಇನ್​ಕಮ್​ ಟ್ಯಾಕ್ಸ್ ದಾಳಿ

ನವದೆಹಲಿ: ಬಾಲಿವುಡ್ ನಟ, ಕೊಡುಗೈ ದಾನಿ ಎಂದೇ ಖ್ಯಾತಿ ಗಳಿಸಿದ ಸೋನು ಸೂದ್​​ಗೆ ಸಂಬಂಧಿಸಿದ 6 ಪ್ರತ್ಯೇಕ ಜಾಗಗಳಲ್ಲಿ ಇನ್​ಕಮ್ ಟ್ಯಾಕ್ಸ್ ಇಲಾಖೆ ಶೋಧಕಾರ್ಯ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ದೆಹಲಿ ಸರ್ಕಾರದ ಮೆಂಟರ್​ಷಿಪ್​ ಪ್ರೋಗ್ರಾಮ್ ಫಾರ್ ಸ್ಕೂಲ್ ಸ್ಟೂಡೆಂಟ್ಸ್​ ಕಾರ್ಯಕ್ರಮಕ್ಕೆ ಸೋನು ಸೂದ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: 10 ಲಕ್ಷ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಕೇಜ್ರಿವಾಲ್​ಗೆ​ ಜೊತೆಯಾದ ಸೋನುಸೂದ್

ಇತ್ತೀಚೆಗೆ ಸೋನುಸೂದ್ ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂಬ ಚರ್ಚೆಯಾಗಿತ್ತು. ಈ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೋನುಸೂದ್ ನಿರಾಕರಿಸಿದ್ದರು. ಸೋನು ಸೂದ್ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಅದ್ರಲ್ಲೂ ವಲಸಿಗ ಕಾರ್ಮಿಕರ ಪ್ರಯಾಣಕ್ಕಾಗಿ ವಿಶೇಷ ವಿಮಾನ ವ್ಯವಸ್ಥೆಯನ್ನ ಮಾಡಿದ್ದ ಸೋನುಸೂದ್​ ಬಗ್ಗೆ ದೇಶದಾದ್ಯಂತ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿಗೆ ಮರುಗಿದ ಸೋನುಸೂದ್.. ಅವರಿಗೆ ನಮ್ಮ ನೆರವು ಬೇಕಿದೆ ಎಂದ ನಟ

Source: newsfirstlive.com Source link