ಬಂಧನಕ್ಕೊಳಗಾದ ಮೋಸ್ಟ್ ಡೇಂಜರಸ್ ಪೈಕಿ ಓರ್ವ ಧಾರಾವಿಯವನು.. ಮಾಹಿತಿ ಬಿಚ್ಚಿಟ್ಟ ATS​ ಮುಖ್ಯಸ್ಥ

ಬಂಧನಕ್ಕೊಳಗಾದ ಮೋಸ್ಟ್ ಡೇಂಜರಸ್ ಪೈಕಿ ಓರ್ವ ಧಾರಾವಿಯವನು.. ಮಾಹಿತಿ ಬಿಚ್ಚಿಟ್ಟ ATS​ ಮುಖ್ಯಸ್ಥ

ಮುಂಬೈ: ದೆಹಲಿ ಪೊಲೀಸರು ಮಹಾ ಸಂಚನ್ನೇ ಹೂಡಿದ್ದ 6 ಮಂದಿ ಭಯೋತ್ಪಾದಕರನ್ನ ಬಂಧಿಸಿದ್ದಾರೆ. ಈ ಪೈಕಿ ಓರ್ವ ಮುಂಬೈನ ಧಾರಾವಿಯವನು. ಆತನ ಹೆಸರು ಜನ್ ಮೊಹಮ್ಮದ್. ಈತ ಕಳೆದ 29 ವರ್ಷಗಳ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಟೀಂನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಸದ್ಯ ಜನ್ ಮೊಹಮ್ಮದ್ ಬಂಧನ ಕುರಿತಂತೆ ಮಹಾರಾಷ್ಟ್ರ ಎಟಿಎಸ್​ ಮುಖ್ಯಸ್ಥ ವಿನೀತ್ ಅಗರ್​ವಾಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ ದಾವೂದ್, ಪಾಕ್ ಖತರ್ನಾಕ್ ಸ್ಕೆಚ್​; ಬಗೆದಷ್ಟೂ ಬಿಚ್ಚಿಕೊಳ್ತಿದೆ ಬಂಧಿತ ಉಗ್ರರ ಬ್ಲಾಸ್ಟ್​ ಪ್ಲಾನ್​

ಜನ್ ಮೊಹಮ್ಮದ್ ದೆಹಲಿಗೆ ತೆರಳಲು ಸೆಪ್ಟೆಂಬರ್ 9 ರಂದು ಪ್ಲಾನ್ ಮಾಡಿದ್ದ. ಜನ್ ಮೊಹಮ್ಮದ್ ಯಾವ ಕಾರಣಕ್ಕೆ ದೆಹಲಿಗೆ ತೆರಳಲು ಮುಂದಾಗಿದ್ದ ಎಂಬುದು ರಹಸ್ಯವಾಗಿದೆ. ಆತ ತತ್ಕಾಲ್ ಟ್ರೈನ್​ನಲ್ಲಿ ಟಿಕೆಟ್ ಬುಕ್ ಮಾಡಿದ್ದ. ಅವನಿಗೂ ಡಿ ಕಂಪನಿಗೂ ನಡುವೆ ಲಿಂಕ್ ಇದೆ. ಆತನ ಮೂಲ ಮುಂಬೈನ ಧಾರಾವಿ. ತತ್ಕಾಲ್ ಟ್ರೈನ್ ಮೂಲಕ ಮುಂಬೈನಿಂದ ದೆಹಲಿಗೆ ಆಗಮಿಸುವ ವೇಳೆ ಕೋಟಾ ಬಳಿ ಆತನನ್ನ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಎಟಿಎಸ್​ ಮುಖ್ಯಸ್ಥ ವಿನೀತ್ ಅಗರ್​​ವಾಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸರಿಂದ 6 ಮಂದಿ ಉಗ್ರರು ಸೆರೆ; ಪಾಕ್​ನಲ್ಲಿ ಟ್ರೈನಿಂಗ್ ಪಡೆದಿದ್ದರಂತೆ ಇಬ್ಬರು

ಜನ್ ಮೊಹಮ್ಮದ್​ನಿಂದ ಯಾವುದೇ ಸ್ಫೋಟಕ ಅಥವಾ ಆಯುಧಗಳನ್ನು ವಶಪಡಿಸಿಕೊಂಡಿಲ್ಲ. ದೆಹಲಿ ಮತ್ತು ಮುಂಬೈ ಪೊಲೀಸ್ ಈ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಮ್ಮ ಟೀಮ್ ದೆಹಲಿಗೆ ತೆರಳಲಿದೆ ಎಂದರು.

ಇದನ್ನೂ ಓದಿ: ಮುಂಬೈ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಸ್ಫೋಟದ ಸಂಚು ರೂಪಿಸಿದ್ದ 6 ಉಗ್ರರ ಬಂಧನ

ಇನ್ನು ನಿಮ್ಮ ಕಣ್ಣಿಗೆ ಉಗ್ರ ಬೀಳದೇ ಇರುವುದು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿನೀತ್ ಅಗರ್​ವಾಲ್.. ಕೇಂದ್ರದ ಏಜೆನ್ಸಿ ಈ ವಿಚಾರದ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿಲ್ಲ. ಇದು ನಮ್ಮ ಫೇಲ್ಯೂಲ್ ಅಲ್ಲ.. ನಮ್ಮ ಕಣ್ಗಾವಲಿನಲ್ಲಿ 1000ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂದು ಹೇಳಿದ್ದಾರೆ.

ಮೊಹಮ್ಮದ್ ಮಹಾರಾಷ್ಟ್ರದವನು ಆದರೆ ಆತನನ್ನ ಕೋಟಾದಲ್ಲಿ ಬಂಧಿಸಲಾಗಿದೆ

ನಮಗೆ ಉಗ್ರರ ಕೃತ್ಯಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಸದ್ಯ ಮುಂಬೈ ಅಥವಾ ಮಹಾರಾಷ್ಟ್ರಕ್ಕೆ ಉಗ್ರರಿಂದ ಯಾವುದೇ ಭೀತಿಯಿಲ್ಲ. ನಮಗೆ ಜನ್ ಮೊಹಮ್ಮದ್​ಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ತಿಳಿದುಬಂದಿದೆ. ಆ ಮಾಹಿತಿಯನ್ನ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಈ ಕೇಸ್ ದೆಹಲಿ ಪೊಲೀಸರ ಕೈಲಿದೆ. ಮೊಹಮ್ಮದ್​​ನನ್ನ ಅರೆಸ್ಟ್ ಮಾಡಲು ದೆಹಲಿ ಪೊಲೀಸರಿಗೆ ಸಂಪೂರ್ಣ ಹಕ್ಕಿದೆ. ಮೊಹಮ್ಮದ್ ಮಹಾರಾಷ್ಟ್ರದವನು ಆದರೆ ಆತನನ್ನ ಕೋಟಾದಲ್ಲಿ ಬಂಧಿಸಲಾಗಿದೆ ಎಂದಿದ್ದಾರೆ.

ಇತ್ತೀಚೆಗೆ ಜನ್ ಮೊಹಮ್ಮದ್ ಹಣಕಾಸು ತೊಂದರೆಗೆ ಒಳಗಾಗಿದ್ದ..
20 ವರ್ಷಗಳ ಹಿಂದೆ ಈತ ದಾವೂದ್ ಗ್ಯಾಂಗ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ. ಆತ ದಾವೂದ್ ಗ್ಯಾಂಗ್ ಜೊತೆಗೆ ಲಿಂಕ್ ಇಟ್ಟುಕೊಂಡಿದ್ದರಿಂದಲೇ ನಮ್ಮ ಕಣ್ಗಾವಲಿನಲ್ಲಿದ್ದ.. ಈಗ ಮುಂಬೈನಲ್ಲಿ ದಾವೂದ್ ಗ್ಯಾಂಗ್​ನ ಪ್ರಭಾವ ಇಲ್ಲ. ಎಟಿಎಸ್​ ಸಂಪೂರ್ಣ ಕಂಟ್ರೋಲ್​ನಲ್ಲಿದೆ. 2001 ರಲ್ಲಿ ವಿದ್ಯುತ್ ಕಳ್ಳತನ ಸೇರಿದಂತೆ ಜನ್ ಮೊಹಮ್ಮದ್ ಮೇಲೆ ಒಂದಿಷ್ಟು ಕೇಸ್​ಗಳಿವೆ. ಇತ್ತೀಚೆಗೆ ಜನ್ ಮೊಹಮ್ಮದ್ ಹಣಕಾಸು ತೊಂದರೆಗೆ ಒಳಗಾಗಿದ್ದ. ನಮಗೆ ಆತನ ಬಗ್ಗೆ ಮಾಹಿತಿ ಇದ್ದರೆ ಅದನ್ನ ದೆಹಲಿ ಪೊಲೀಸರೊಂದಿಗೆ ಹಂಚಿಕೊಳ್ತೇವೆ. ನಮಗೆ ಇನ್ನೂ ಎಫ್​ಐಆರ್ ಲಭ್ಯವಾಗಿಲ್ಲ.. ಇಂದು ಸಂಜೆ ಮುಂಬೈ ಪೊಲೀಸರು ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Source: newsfirstlive.com Source link