ಅಮ್ಮನ ಜೊತೆ ಇರೋ ಫೋಟೋ ಶೇರ್​ ಮಾಡಿ ರಾಧಿಕಾ ಪಂಡಿತ್​ ಹೇಳಿದ್ದೆನು ಗೊತ್ತಾ?

ಅಮ್ಮನ ಜೊತೆ ಇರೋ ಫೋಟೋ ಶೇರ್​ ಮಾಡಿ ರಾಧಿಕಾ ಪಂಡಿತ್​ ಹೇಳಿದ್ದೆನು ಗೊತ್ತಾ?

ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿ ಇರ್ತಾರೆ. ಆಗಾಗ ತಮ್ಮ ಮುದ್ದು ಮಕ್ಕಳಾದ ಐರಾ ಮತ್ತು ಯರ್ಥವ್​ರ ವಿಡಿಯೋ ಫೋಟೋಗನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುತ್ತಾರೆ. ಇದೀಗ ರಾಧಿಕಾ ಪಂಡಿತ್​ ತಮ್ಮ ಅಮ್ಮನ ಜೊತೆಗಿರುವ ಸುಂದರವಾದ ಫೋಟೋಗಳನ್ನು ಆಭಿಮಾನಿಗಳ ಜೊತೆ ಶೇರ್​ ಮಾಡಿದ್ದಾರೆ.

ಇದನ್ನೂ ಓದಿ: 51 ನೇ ವಸಂತಕ್ಕೆ ಕಾಲಿಟ್ಟ ರಮ್ಯಾ ಕೃಷ್ಣನ್..ಜೀವದ ಗೆಳತಿ ಜೊತೆ ಸ್ಟೆಪ್​ ಹಾಕಿ ಸಂಭ್ರಮಿಸಿದ ಮಧುಬಾಲ

ಹೌದು, ನಟಿ ರಾಧಿಕಾ ಪಂಡಿತ್​ ತಮ್ಮ ಅಮ್ಮನ ಜೊತೆಗಿರುವ ಫೋಟೋವನ್ನು ಶೇರ್​ ಮಾಡಿ ” ನನ್ನ ಅಮ್ಮನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತೆ ಅವರು ಹೇಗೆ ಎಲ್ಲಾ ಕೆಲಸವನ್ನು ಒಟ್ಟಿಗೆ ನಿರ್ವಹಿಸುತ್ತಾರೆ ಅಂತ, ಇನ್ನು ಮನೆ ಕೆಲಸ, ಅಡುಗೆ, ನನ್ನ ಮಕ್ಕಳನ್ನು ಮಾತ್ರವಲ್ಲದೇ ನನ್ನನು ಮತ್ತು ನನ್ನ ತಂದೆಯನ್ನು ಸಹ ನೋಡಿಕೊಳ್ಳುತ್ತಾರೆ. ನನ್ನ ಅಮ್ಮನ ವಯಸ್ಸಿನಲ್ಲಿ ನಾನು ಅವರಂತೆ ಇರಬಹದೇ? ನನ್ನ ಸೂಪರ್​ ವುಮೆನ್​ ನನ್ನ ಅಮ್ಮ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

 

Source: newsfirstlive.com Source link