ಮಹಾತ್ಮಾ ಗಾಂಧಿ ಜೊತೆ 3/4 ಮಹಿಳೆಯರು ಇರ್ತಿದ್ರು, RSS ಭಾಗವತ್ ಜೊತೆ ಇರ್ತಾರಾ? -ರಾಹುಲ್ ಪ್ರಶ್ನೆ

ಮಹಾತ್ಮಾ ಗಾಂಧಿ ಜೊತೆ 3/4 ಮಹಿಳೆಯರು ಇರ್ತಿದ್ರು, RSS ಭಾಗವತ್ ಜೊತೆ ಇರ್ತಾರಾ? -ರಾಹುಲ್ ಪ್ರಶ್ನೆ

ನವದೆಹಲಿ: ಅಖಿಲಭಾರತ ಮಹಿಳಾ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀವು ಮಹಾತ್ಮಾ ಗಾಂಧಿಯವರ ಯಾವುದೇ ಫೋಟೋ ನೋಡಿ. ಅದ್ರಲ್ಲಿ ಅವರೊಂದಿಗೆ 3-4 ಜನ ಮಹಿಳೆಯರು ಇದ್ದೇ ಇರ್ತಿದ್ರು. ನೀವು ಎಂದಾದ್ರೂ ಆರ್​​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ಮಹಿಳೆಯುರು ಇರೋದನ್ನ ಕಂಡಿದ್ದೀರಾ? ಅಂತಾ ಪ್ರಶ್ನಿಸಿದ್ದಾರೆ.

blank

ಕಾಂಗ್ರೆಸ್ ಬಿಜೆಪಿ ಮತ್ತು ಆರ್​ಎಸ್​ಎಸ್​ಗಿಂತಲೂ ವಿಭಿನ್ನವಾದ ಸಿದ್ಧಾಂತವನ್ನು ಹೊಂದಿದೆ. ಕಾಂಗ್ರೆಸ್​ನ ವರ್ಕರ್ ಆಗಿ ನಾನು ನಾನು ಬೇರೆ ಸಿದ್ಧಾಂತಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಲ್ಲೆ.. ಆದರೆ ಆರ್​ಎಸ್​ಎಸ್​ ಮತ್ತು ಬಿಜೆಪಿ ಜೊತೆಗೆ ಎಂದಿಗೂ ಸಾಧ್ಯವಿಲ್ಲ. ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ನಾವು ಹಿಂದೂ ಪಾರ್ಟಿ ಎಂದು ಹೇಳ್ತಾರೆ. ಕಳೆದ 100-200 ವರ್ಷಗಳಲ್ಲಿ ಮಹಾತ್ಮಾಗಾಂಧಿ ಹಿಂದೂ ಧರ್ಮವನ್ನು ಅರ್ಥೈಸಿಕೊಂಡಿದ್ದಾರೆ ಮತ್ತು ಅನುಕರಿಸಿದ್ದಾರೆ.

ಮಹಾತ್ಮಾ ಗಾಂಧಿ ತಮ್ಮ ಇಡೀ ಜೀವನವನ್ನು ಹಿಂದೂ ಧರ್ಮವನ್ನು ಅರ್ಥೈಸಿಕೊಳ್ಳಲು ಮುಡಿಪಾಗಿಟ್ಟಿದ್ದರೆ ಗೋಡ್ಸೆ ಯಾಕೆ ಅವರನ್ನು ಕೊಂದರು? ಈ ವಿರೋಧಾಭಾಸದ ಜೊತೆಗೆ ಜನರು ಚಿಂತನೆ ಮಾಡಬೇಕಿದೆ ಎಂದೂ ರಾಹುಲ್ ಹೇಳಿದ್ರು.

blank

ಅಷ್ಟೇ ಅಲ್ಲ ನೀವು ಗಾಂಧಿ ಭಾವಚಿತ್ರವನ್ನು ನೋಡಿದಾಗ ನಿಮಗೆ ಅವರ ಜೊತೆಯಲ್ಲಿ ಇಬ್ಬರು ಅಥವಾ ಮೂವರು ಮಹಿಳೆಯರಿರೋದನ್ನ ಕಾಣ್ತೀರಿ. ನೀವು ಎಂದಾದ್ರೂ ಮೋಹನ್ ಭಾಗವತ್ ಪಕ್ಕದಲ್ಲಿ ಮಹಿಳೆಯರು ಇರೋದನ್ನ ನೋಡಿದ್ದೀರಾ? ಯಾಕಂದ್ರೆ ಅವರ ಸಂಘಟನೆ ಹೆಣ್ಣುಮಕ್ಕಳನ್ನ ಹತ್ತಿಕ್ಕುತ್ತದೆ ಮತ್ತು ನಮ್ಮ ಸಂಘಟನೆ ಮಹಿಳೆಯರಿಗೆ ವೇದಿಕೆ ನೀಡುತ್ತದೆ. ಮೋದಿ ಮತ್ತು ಆರ್​ಎಸ್​ಎಸ್​ ಎಂದಿಗೂ ಮಹಿಳೆಯನ್ನ ದೇಶದ ಪ್ರಧಾನಿಯನ್ನಾಗಿ ಮಾಡಿಲ್ಲ. ಆದರೆ ಕಾಂಗ್ರೆಸ್ ಮಾಡಿದೆ ಎಂದು ಹೇಳಿದ್ದಾರೆ. ಸದ್ಯ ರಾಹುಲ್ ಗಾಂಧಿಯವರ ಈ ಹೇಳಿಕೆ ಸಾಕಷ್ಟು ವೈರಲ್ ಆಗಿದೆ.

Source: newsfirstlive.com Source link