ಪ್ರೀತಿ ಹೆಸರಲ್ಲಿ ಬೀಸುತ್ತಿದ್ದ ‘ಮೋಸದ ಬಲೆ’ -ಯುವತಿಯರ ಪಾಲಿನ ಬ್ಲ್ಯಾಕ್​ ಮೇಲ್ ಕಿರಾತಕ ಅರೆಸ್ಟ್

ಪ್ರೀತಿ ಹೆಸರಲ್ಲಿ ಬೀಸುತ್ತಿದ್ದ ‘ಮೋಸದ ಬಲೆ’ -ಯುವತಿಯರ ಪಾಲಿನ ಬ್ಲ್ಯಾಕ್​ ಮೇಲ್ ಕಿರಾತಕ ಅರೆಸ್ಟ್

ಬೆಂಗಳೂರು: ಪ್ರೀತಿಯ ಹೆಸರಲ್ಲಿ ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡ್ತಿದ್ದ ಅಸಾಮಿಯನ್ನ ಬ್ಯಾಡರಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಾಕೇಶ್ ಬಂಧಿತ ಆರೋಪಿ. ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ ತೀವ್ರ ವಿಚಾರಣೆ ನಡೆಸಿರುವ ಪೊಲೀಸರು, ಒಂದೊಂದೇ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಇದುವರೆಗೆ ಆರು ಯುವತಿಯರಿಗೆ ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆರೋಪಿ ರಾಕೇಶ್

ಆರೋಪಿ ರಾಕೇಶ್​​ ಸಿಕ್ಕಿಬಿದ್ದಿದ್ದು ಹೇಗೆ..?
24 ವರ್ಷದ ಸಂತ್ರಸ್ತೆಯೊಬ್ಬರು ಬ್ಯಾಡರಳ್ಳಿ ಠಾಣೆ ವ್ಯಾಪ್ತಿಯ ಫ್ಯಾನ್ಸಿ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲವು ದಿನಗಳ ಹಿಂದೆ ಸಂತ್ರಸ್ತೆಯನ್ನ ರಾಕೇಶ್ ಪರಿಚಯ ಮಾಡ್ಕೊಂಡಿದ್ದ. ಬಳಿಕ ತನ್ನ ಪ್ರೇಮ ನಿವೇದನೆಯನ್ನ ಮಾಡಿಕೊಂಡಿದ್ದ. ನಂತರ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿಡಿಯೋ ಚಿತ್ರೀಕರಣ ಮಾಡಿದ್ದ ಎನ್ನಲಾಗಿದೆ.

ಅದಾದ ಬಳಿಕ ತನ್ನ ಅಸಲಿ ಆಟವನ್ನ ಶುರುಮಾಡಿದ್ದಾನೆ. ಖಾಸಗಿ ವಿಡಿಯೋ ಸೆರೆ ಮಾಡಿಕೊಂಡಿದ್ದ ಆರೋಪಿ, 2 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಬ್ಯಾಡರಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯ ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಮೊಬೈಲ್​ನಲ್ಲಿ ಯುವತಿಯರಿಗೆ ಸಂಬಂಧಿಸಿದ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ.

Source: newsfirstlive.com Source link