ಕ್ಷುಲ್ಲಕ ಕಾರಣಕ್ಕೆ ಗಲಾಟೆ- ಓರ್ವನ ಮೇಲೆ ನಾಲ್ವರಿಂದ ಹಲ್ಲೆ

ಗದಗ: ಹಳೆ ವೈಷಮ್ಯದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನಿಗೆ ಮಾರಕಾಸ್ತ್ರಗಳಿಂದ ನಾಲ್ವರು ಸೇರಿ ಓರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಪ್ರಶಾಂತ ಬಡಾರಿ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ನಿನ್ನೆ ರಾತ್ರಿ ಗಣೇಶ್ ವಿಸರ್ಜನೆಯ ವೇಳೆ ಪಟ್ಟಣದ ಹಿರೇ ಬಜಾರ್‌ನಲ್ಲಿ ಈ ಗಲಾಟೆಯಾಗಿದೆ. ಕುಡಿದ ಮತ್ತಿನಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಗಲಾಟೆ ಮಾಡಿಕೊಂಡಿದ್ದಾರೆ.

ಪ್ರಶಾಂತ್ ಬಡಾರಿ ಎಂಬಾತ ಹಲ್ಲೆಗೊಳಗಾಗಿದ್ದಾನೆ. ತಲೆಗೆ, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ ಬಡಾರಿ ಹಾಗೂ ಅಭಿಷೇಕ್ ಮಧ್ಯೆ ಆಗಾಗ ಕಿರಿಕ್ ನಡೆಯುತ್ತಲೇ ಇತ್ತು. ನಿನ್ನೆಯೂ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ:  ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಮುಯೂರಿ ಫೋಟೋಶೂಟ್

ಮಾತಿಗೆ ಮಾತು ಬೆಳೆದು ಅಭಿಷೇಕ ಸ್ನೇಹಿತರಾದ ಅರುಣ್, ಸಾಗರ, ಕಿರಣ್ ಈ ನಾಲ್ವರು ಸೇರಿ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಲೆಗೆ ಖಾಕಿಪಡೆ ಬಲೆ ಬೀಸಿದೆ.

Source: publictv.in Source link