ಸದ್ಯದಲ್ಲೇ ಶುರುವಾಗಲಿದೆ ಬಿಗ್​ಬಾಸ್​ ಸೀಸನ್​-9 ಯಾವಾಗ ಗೊತ್ತಾ?

ಸದ್ಯದಲ್ಲೇ ಶುರುವಾಗಲಿದೆ ಬಿಗ್​ಬಾಸ್​ ಸೀಸನ್​-9 ಯಾವಾಗ ಗೊತ್ತಾ?

ಬಿಗ್‌ಬಾಸ್‌ ಸೀಸನ್‌-8 ಮುಗೀತು.. ಅದರ ಹಿಂದೆ ಬಿಗ್‌ಬಾಸ್‌ ಮಿನಿ ಸೀಸನ್‌ ಕೂಡ ಎಂಡ್ ಆಯ್ತು. ಈ ಎರಡೂ ಮುಗಿದ್ಮೇಲೆ ಜನರ ಪ್ರಶ್ನೆ ಇರೋದು ಬಿಗ್‌ಬಾಸ್ ಸೀಸನ್‌-9 ಶುರುವಾಗೋದು ಯಾವಾಗ ಅನ್ನೋದು.

ಬಿಗ್‌ಬಾಸ್‌ ಸೀಸನ್‌ 8 ಕೊರೊನಾ ಕಾರಣದಿಂದ ಮುಗಿಯೋದು ಲೇಟಾಯ್ತು. ಹಾಗಂತಾ ಬಿಗ್‌ಬಾಸ್ ಶುರುವಾಗೋದು ಲೇಟ್ ಅಂತಾ ಹೇಳೋಂಗಿಲ್ಲ. ಯಾಕಂದ್ರೆ, ಕ್ಯಾಲೆಂಡರ್ ಇಯರ್ ಪ್ರಕಾರ ಬಿಗ್‌ಬಾಸ್ ಸ್ಟಾರ್ಟ್ ಆಗ್ಬೇಕಾಗಿರೋದು ಅಕ್ಟೋಬರ್‌ನಲ್ಲಿ. ಹಾಗಾದ್ರೆ, ಬಿಗ್‌ಬಾಸ್ ಸೀಸನ್‌-9 ಈ ಅಕ್ಟೋಬರ್‌ನಲ್ಲಿ ಶುರುವಾಗುತ್ತಾ..?

ಮೂಲಗಳ ಮಾಹಿತಿಯ ಪ್ರಕಾರ ಯೆಸ್‌.. ಕಲರ್ಸ್ ವಾಹಿನಿಯ ತಂಡ ಈಗ ಎರಡು ಸೀರಿಯಲ್ ಲಾಂಚ್ ಹಾಗೂ ಅನುಬಂಧ ಅವಾರ್ಡ್ಸ್‌ 2021 ಪ್ಲಾನಿಂಗ್‌ನಲ್ಲಿ ಬ್ಯುಸಿಯಾಗಿದೆ. ದಿವ್ಯಾ ಸುರೇಶ್‌ ಮುಖ್ಯಭೂಮಿಕೆಯಲ್ಲಿರೋ ತ್ರಿಪುರ ಸುಂದರಿ ಹಾಗೂ ನಿರ್ಮಾಪಕ ರಾಮ್‌ಜೀ ಬ್ಯಾನರ್‌ನಲ್ಲಿ ಹೊಸ ಸೀರಿಯಲ್‌ ಕೂಡ ಪ್ರಗತಿಯಲ್ಲಿದೆ. ಅನುಬಂಧ ಅವಾರ್ಡ್ಸ್‌ ಶೂಟ್ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಈ ಮೂರು ಕಾರ್ಯಕ್ರಮಗಳು ಮುಗಿದ್ಮೇಲೆ ನಾನ್‌ಫಿಕ್ಷನ್‌ ತಂಡ ಬಿಗ್‌ಬಾಸ್‌ ಸೀಸನ್‌-9 ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದೆ ಅನ್ನೋ ಮಾಹಿತಿ ನಮಗೆ ಸಿಕ್ಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಅಷ್ಟೇನೂ ಇಲ್ಲ. ತಜ್ಞರ ಪ್ರಕಾರ ಭಾರತಕ್ಕೆ ಮೂರನೇ ಅಲೆ ಅಪ್ಪಳಿಸೋ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಬಿಗ್‌ಬಾಸ್‌ ಸೀಸನ್‌ 9ರನ್ನ ಕ್ಯಾಲೆಂಡರ್ ಇಯರ್‌ನಲ್ಲೇ ನಡೆಸೋ ಧೈರ್ಯ ಮಾಡಲಾಗ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಜನರನ್ನ ಎಚ್ಚರಿಸಲು ಮತ್ತೆ ಬರುತ್ತಿದೆ ಕ್ರೈಂ ಲೋಕದ ‘ಶಾಂತಂ ಪಾಪಂ’

ಎಲ್ಲಾ ಅಂದುಕೊಂಡಂತೆ ನಡೆದರೆ ಬಿಗ್‌ಬಾಸ್ ಸೀಸನ್‌ 9 ಕ್ಯಾಲೆಂಡರ್ ಇಯರ್‌ನಲ್ಲೇ ನಡೆಯಲಿದೆ. ಅನಿರೀಕ್ಷಿತ ಘಟನೆಗಳು ನಡೆದರೆ ಸೀಸನ್‌-9 ತಡವಾಗಬಹುದೇನೋ. ಎಲ್ಲವೂ ಅಂದುಕೊಂಡಂತೆ ನಡೆಯಲಿ ಅನ್ನೋದೇ ನಮ್ಮ ಆಶಯ.

Source: newsfirstlive.com Source link