ನರಾಚಿ ಸೃಷ್ಟಿಕರ್ತನನ್ನ ಸಲಾರ್​ ಅಡ್ಡದಲ್ಲಿ ಕಿಚಾಯಿಸಿದ ಶೃತಿ ಹಾಸನ್​ ಮಾಡಿದ್ದೇನು?

ನರಾಚಿ ಸೃಷ್ಟಿಕರ್ತನನ್ನ ಸಲಾರ್​ ಅಡ್ಡದಲ್ಲಿ ಕಿಚಾಯಿಸಿದ ಶೃತಿ ಹಾಸನ್​ ಮಾಡಿದ್ದೇನು?

ಕೆಜಿಎಫ್ ಸಿನಿಮಾ ರಿಲೀಸ್​ ಡೇಟ್​ ಮುಂದೆ ಹೋಗ್ತಿದಂತೆ ನಿರ್ದೇಶಕ ಪ್ರಶಾಂತ್​ ನೀಲ್​ ಸಲಾರ್ ಶೂಟಿಂಗ್​​ ಅಡ್ಡದಲ್ಲಿ ಸೆಟಲ್​ ಆಗಿದ್ದಾರೆ.. ಸಲಾರ್​ ಚಿತ್ರವನ್ನು ಅಂದುಕೊಂಡಂತೆ ತೆರೆ ಮೇಲೆ ತರಲು ಫುಲ್ ತಲೆ ಕೆಡಿಸಿಕೊಂಡಿದ್ದಾರಂತೆ ಪ್ರಶಾಂತ್ ನೀಲ್​.. ಚಿತ್ರದ ಶೂಟಿಂಗ್​ ಟೆನ್ಷನ್​ನಲ್ಲಿ ನೀಲ್​ ಅವರನ್ನು ಸಲಾರ್​ ಸೆಟ್​ ನಲ್ಲೇ ಚಿತ್ರದ ನಾಯಕಿ ಶೃತಿ ಹಾಸನ್​ ಕಿಚಾಯಿಸಿದ್ದಾರೆ.. ಇದಕ್ಕೆ ನೀಲ್​ ಅವ್ರ ರಿಯಾಕ್ಷನ್​ ಹೇಗಿದೆ ಗೊತ್ತಾ..?

ಸಲಾರ್.. ಹೊಂಬಾಳೆ ಬ್ಯಾನರ್​​ನಲ್ಲಿ ಪ್ರಶಾಂತ್ ನೀಲ್ , ಪ್ರಭಾಸ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರೋ ಬಹು ನಿರೀಕ್ಷಿತ ಸಿನಿಮಾ.. ಪಬ್ಲಿಕ್ ಟಾಕ್, ಪೊಸ್ಟರ್ ಕಿಕ್​​, ಮುಹೂರ್ತದ ಝಲಕ್​ ಎಲ್ಲದ್ರಿಂದ ಗಮನ ಸೆಳೆದಿರೋ ಸಲಾರ್ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಚಿತ್ರದ ಸಾರಥಿ ಪ್ರಶಾಂತ್​ ನೀಲ್ ಕಳೆದ ತಿಂಗಳಿನಿಂದ ಬೀಡು ಬಿಟ್ಟಿದ್ದಾರೆ..

blank

ಕೆಜಿಎಫ್ ನಂತ್ರ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಿರುವ ಸಲಾರ್ ಚಿತ್ರದ ಮೇಲೆ ಚಿತ್ರಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ.. ಈ ಕಾರಣಕ್ಕೆ ಪ್ರಶಾಂತ್ ನೀಲ್ ಜಾಗರೂಕತೆಯಿಂದ ಶೂಟಿಂಗ್​ ಮಾಡ್ತಿದ್ದಾರೆ.. ಶೂಟಿಂಗ್​ ಕೆಲಸದಲ್ಲಿ ತಲೆ ಕೆಡಿಸಿಕೊಂಡು ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ನೀಲ್​ ಅವರನ್ನು ಚಿತ್ರದ ನಾಯಕಿ ಶೃತಿ ಹಾಸನ್ ಕಿಚಾಯಿಸಿ ಸೆಲ್ಫಿ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ..

ಗಣೇಶ ಹಬ್ಬ ಮುಗಿಸಿರೋ ನೀಲ್​ ಆಂಡ್ ಪ್ರಭಾಸ್​ ಈಗ ಹೈದರಾಬಾದ್​ಲ್ಲಿ ಸಲಾರ್ ಇಂಟರ್ವಲ್ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾರೆ.. ಸಲಾರ್​ ಶೂಟಿಂಗ್​ನ ಇಂಟ್ರವಲ್​​ನಲ್ಲಿ ಶೃತಿ ಹಾಸನ್​ ಫನ್​ ಆಗಿ ನೀಲ್​ ಜೊತೆ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಶಾಂತ್​ ನೀಲ್​ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಶೃತಿ​ ಪೋಸ್ಟ್​ ಮಾಡಿರುವ ವಿಡಿಯೋ ಸಖತ್​ ವೈರಲ್​ ಆಗ್ತಿದ್ದು, ವಿಡಿಯೋಗೆ ಲೈಕ್ಸ್​, ಕಮೆಂಟ್ಸ್​ಗಳ ಮೇಲೆ ಕಮೆಂಟ್ಸ್​ ಬರ್ತಿವೆ..

Source: newsfirstlive.com Source link