ಐಪಿಎಲ್ ನೋಡಲು ದುಬೈ ಪ್ಲೈಟ್​​ ಹತ್ತಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

ಐಪಿಎಲ್ ನೋಡಲು ದುಬೈ ಪ್ಲೈಟ್​​ ಹತ್ತಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

ಕಿಚ್ಚ ಸುದೀಪ್ ಲಾಕ್​ ಡೌನ್​ ನಂತ್ರ ಮತ್ತೆ ಸಿನಿಮಾ ಹಾಗೂ ಇತರ ಚಟುವಟಿಕೆ ಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ.. ಇತ್ತೀಚೆಗಷ್ಟೇ ಕುಟುಂಬಸ್ಥರು ಸ್ನೇಹಿತರ ಜೊತೆ ಸರಳವಾಗಿ ಕಿಚ್ಚ ಹುಟ್ಟು ಹಬ್ಬ ಸೆಲೆಬ್ರೇಟ್​ ಮಾಡಿದ್ರು.. ಅಲ್ಲದೆ ಕಿಚ್ಚ ಉಪ್ಪಿ ಜೊತೆ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿದ್ರು.. ಈಗ ಸದ್ದಿಲ್ಲದೆ ಅಭಿನಯ ಚಕ್ರವರ್ತಿ ದುಬೈಗೆ ಹಾರೋಕೆ ಸಜ್ಜಾಗಿದ್ದಾರೆ.. ಅಷ್ಟಕ್ಕೂ ಕಿಚ್ಚ ಸುದೀಪ್​ ದುಬೈಗೆ ಹೊಗ್ತಿರೋದು ಯಾಕೆ.? ಸಿನಿಮಾ ಶೂಟಿಂಗ್​ ಅಲ್ಲ ಟ್ರಿಪ್​ಗಾಗಿ ಕಿಚ್ಚ ದುಬೈ ಪ್ಲೈಟ್​ ಹತ್ತುತ್ತಿದ್ದಾರೆ.

ಕಿಚ್ಚ ಸುದೀಪ್​ ಕೊರೊನಾ ನಂತ್ರ ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟಾಗಿ ಕಾಣಿಸಿಲ್ಲ.. ಅದರೆ ಈಗ ಕಿಚ್ಚ ಸುದೀಪ್​ ಹಿಂದಿನಂತೆ ಓಡಾಡೋಕೆ ಶುರು ಮಾಡಿದ್ದಾರೆ.. ಕೊರೊನಾ ನಂತ್ರ ಫಸ್ಟ್ ಟೈಂ ಸುದೀಪ್​ ಪ್ರಿಯಾಂಕ ಅಭಿನಯದ 1980 ಸಿನಿಮಾ ಟ್ರೈಲರ್​ ಲಾಂಚ್​ನಲ್ಲಿ ಭಾಗಿಯಾಗಿದ್ರು, ಉಪ್ಪಿ ಜೊತೆ ಟೈಂ ಪಾಸ್​ ಮಾಡಿದ್ರು..

blank

ಸುದೀಪ್​ ಅವರು ಸದ್ಯ ಯಾವುದೇ ಹೊಸ ಸಿನಿಮಾ ಕಮಿಟ್​ ಆಗದೆ ಇನ್ನು ರಿಲ್ಯಾಕ್ಸ್​ ಮೂಡ್​ನಲ್ಲೇ ಇದ್ದಾರೆ.. ಕೋಟಿಗೊಬ್ಬ 3 ವಿಕ್ರಾಂತ್​ ರೋಣ 2 ಸಿನಿಮಾಗಳು ರಿಲೀಸ್​ಗೆ ರೆಡಿ ಇದ್ರು. ಚಿತ್ರದ ಪ್ರಮೋಶನ್​ಗೆ ಕಿಚ್ಚ ಇನ್ನು ತಲೆ ಕೆಡಿಸಿಕೊಂಡಿಲ್ಲ. ಕಾರಣ ಕೊರೊನಾದಿಂದ ಚಿತ್ರಮಂದಿರಗಳು ಇನ್ನೂ 100 ಪರ್ಸೆಂಟ್ ಓಪನ್​ ಆಗಿಲ್ಲ.. ಈಗಾಗಿ ಕಿಚ್ಚ ಫ್ರೀ ಟೈಂನಲ್ಲಿ ದುಬೈಗೆ ಹಾರೋಕೆ ಸುದೀಪ್​ ಸಜ್ಜಾಗಿದ್ದಾರೆ..

ಇದನ್ನೂ ಓದಿ:ಫಾರಿನ್​​ ಶೂಟ್​ನಲ್ಲಿದ್ದಾಗ ಕಳೆದುಹೋದ ‘ಕೋಟಿಗೊಬ್ಬ’ನ ಸ್ವತ್ತು ಮತ್ತೆ ಸಿಕ್ತು.. ಹಾಗಾದ್ರೆ ಏನದು..?

ಯೆಸ್​.. ಕಿಚ್ಚ ಸುದೀಪ್ ಇದೇ ತಿಂಗಳ 18ಕ್ಕೆ ದುಬೈಗೆ ಹಾರಲಿದ್ದಾರೆ.. ಅದ್ರೆ ಕಿಚ್ಚ ದುಬೈಗೆ ಹೋಗ್ತಿರೋದು ಯಾವುದೇ ಚಿತ್ರದ ಶೂಟಿಂಗ್​ಗಾಗಿ ಅಲ್ಲ.. ಶೂಟಿಂಗ್​ಗಾಗಿ ಅಲ್ಲ ಅಂದ ಮೇಲೆ ಕಿಚ್ಚ ಮತ್ಯಾವ ಕೆಲಸದ ಮೇಲೆ ದುಬೈಗೆ ಹೋಗ್ತಾರೆ ಅಂತ ಕೇಳಿದ್ರೆ.. ಅದಕ್ಕೆ ಉತ್ತರ ಐಪಿಎಲ್.. ಹೌದು ಕಿಚ್ಚ ಸುದೀಪ್​ ಇದೇ ತಿಂಗಳ 19ಕ್ಕೆ ಮತ್ತೆ ಶುರುವಾಗುವ ಐಪಿಲ್​ನ ಮುಂದುವರೆದ ಅವೃತ್ತಿ ಮ್ಯಾಚ್​ಗಳನ್ನು ನೋಡೋಕೆ ದುಬೈ ಪ್ಲೈಟ್​ ಹತ್ತಲಿದ್ದಾರೆ.

ಕಿಚ್ಚ ಸುದೀಪ್​ ಸಿನಿಮಾವನ್ನು ಎಷ್ಟು ಆರಾಧಿಸ್ತಾರೋ, ಅಷ್ಟೇ ಕ್ರಿಕೆಟ್​ ಅನ್ನು ಪ್ರೀತಿಸ್ತಾರೆ.. ಅದಕ್ಕೆ ಸಾಕ್ಷಿ ಎಂಬಂತೆ ಕಿಚ್ಚ ಸಿನಿಮಾ ಸೆಲೆಬ್ರಿಟಿಗಳ ಸಿಸಿಎಲ್​ಗೆ ಸ್ಯಾಂಡಲ್​ವುಡ್​ ತಂಡವನ್ನು ಕರೊದೊಯ್ದಿದ್ರು.. ಅಷ್ಟೇ ಯಾಕೆ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲೂ ಕಿಚ್ಚ ಕ್ರಿಕೆಟ್​ ಆಡಿ ಎಂಜಾಯ್​ ಮಾಡಿದ್ದಾರೆ.

blank

ಕಿಚ್ಚ ಕ್ರಿಕೆಟ್​ ಆಡೋದಷ್ಟೇ ಅಲ್ಲ ನ್ಯಾಷನಲ್​ ಇಂಟರ್​ ನ್ಯಾಷನಲ್​ ಕ್ರಿಕೆಟ್ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ..ಈ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ ಕಿಚ್ಚನ ಹುಟ್ಟು ಹಬ್ಬಕ್ಕೆ ರಾಜಸ್ಥಾನ್​ ರಾಯಲ್ಸ್​ ತಂಡ ಕಿಚ್ಚನ ಹೆಸರಿನ ಜೆರ್ಸಿ ಲಾಂಚ್​ ಮಾಡಿ ಹುಟ್ಟು ಹಬ್ಬಕ್ಕೆ ಉಡುಗೊರೆ ಕೊಟ್ಟಿದ್ರು.. ಅಷ್ಟೇ ಅಲ್ಲ ಐಪಿಎಲ್​ ಮ್ಯಾನೆಂಜ್​ ಮೆಂಟ್​ ಕಿಚ್ಚನಿಗೆ ಮ್ಯಾಚ್​ ನೋಡೋಕೆ ಆಹ್ವಾನ ನೀಡಿರೋ ಕಾರಣ, ಕಿಚ್ಚ ಚುಟುಕು ಕ್ರಿಕೆಟ್​ನ ಸ್ಟೇಡಿಯಂನಿಂದಲೇ ನೋಡಿ ಎಂಜಾಯ್​ ಮಾಡೋಕೆ ದುಬೈಗೆ ಹಾರ್ತಿದ್ದಾರೆ..

ಕಿಚ್ಚ ಐಪಿಲ್​ ಮ್ಯಾಚ್​ ನೋಡೋಕೆ ದುಬೈಗೆ ಹೋಗ್ತಾರೆ ಸರಿ. ಅದ್ರೆ ಯಾವ ತಂಡಕ್ಕೆ ಸುದೀಪ್​ ಸಾಥ್​ ನೀಡ್ತಾರೆ ಅನ್ನೋ ಕುತೂಹಲ ಈಗ ಮನೆ ಮಾಡಿದೆ.. ಯಾಕಂದ್ರೆ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟಿದ್ದ ಆರ್.ಆರ್.​​ ತಂಡದ ಜೆರ್ಸಿ ತೊಟ್ಟು, ಸಂಜು ಸ್ಯಾಮ್​ಸನ್​ ಪಡೆಗೆ ಚಿಯರ್​ ಮಾಡ್ತಾರಾ.. ಇಲ್ಲ ನಮ್ಮ ಆರ್​ಸಿಬಿ ಜೆರ್ಸಿ ತೊಟ್ಟು ಕೊಹ್ಲಿ ಹುಡುಗರಿಗೆ ಸಾಥ್​ ನೀಡ್ತಾರಾ ಕಾದು ನೋಡಬೇಕು..

Source: newsfirstlive.com Source link