ಆಳಸಮುದ್ರದಲ್ಲಿ ಇಂಜಿನ್ ಕೆಟ್ಟು ನಿಂತ ಬೋಟ್; 11 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ

ಆಳಸಮುದ್ರದಲ್ಲಿ ಇಂಜಿನ್ ಕೆಟ್ಟು ನಿಂತ ಬೋಟ್; 11 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ

ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 11 ಮಂದಿ ಮೀನುಗಾರರನ್ನ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆ ರಕ್ಷಣೆ ಮಾಡಿದೆ.

ಇಂಜಿನ್ ಕೆಟ್ಟು ಸಮುದ್ರ ಮಧ್ಯೆ 11 ಮೀನುಗಾರರಿದ್ದ ಮೀನುಗಾರಿಕಾ ಬೋಟ್ ಅಪಾಯಕ್ಕೀಡಾಗಿತ್ತು. ಪ್ರತಿಕೂಲ ಹವಾಮಾನ ಹಾಗು ಭಾರೀ ಗಾಳಿಗೆ ಸಿಲುಕಿ ಮೀನುಗಾರರು ಅಪಾಯದಲ್ಲಿದ್ದರು. ತಟದಿಂದ 35 ನಾಟಿಕಲ್ ಮೈಲ್ಸ್ ದೂರದ ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರು ವೈರ್​ಲೆಸ್ ಮೂಲಕ ತುರ್ತು ರಕ್ಷಣೆಗೆ ಕೋರಿ ಕೋಸ್ಟ್ ಗಾರ್ಡ್ ಪಡೆಗೆ ಮನವಿ ಮಾಡಿ ವೈರ್​ಲೆಸ್ ಮೂಲಕ ಮಾಹಿತಿ ಕಳುಹಿಸಿದ್ದರು.

ತಡ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದ ಕೋಸ್ಟ್ ಗಾರ್ಡ್​ನ ಐ ಸಿ ಜಿ ರಾಜ್ ದೂತ್ ಹೆಸರಿನ ಹಡಗಿನ ಮೂಲಕ ಮೀನುಗಾರರನ್ನು ರಕ್ಷಿಸಿ ಕೆಟ್ಟು ನಿಂತಿದ್ದ ಬೋಟನ್ನು ರಕ್ಷಣಾ ಪಡೆಯ ಸಿಬ್ಬಂದಿ ಏಳೆತಂದಿದೆ. ಮೀನುಗಾರರನ್ನು ಸುರಕ್ಷಿತ ವಾಗಿ ಮಲ್ಪೆ ಬಂದರಿಗೆ ತಲುಪಿಸಲಾಗಿದೆ.

Source: newsfirstlive.com Source link