ಕಿಸ್​ ಬೆಡಗಿ ಶ್ರೀಲೀಲಾ ನಟನೆಯ ’ಪೆಳ್ಳಿ ಸಂದಡಿ’ ಸಿನಿಮಾದ ಮಾಸ್​ ಟೀಸರ್​ ಔಟ್​

ಕಿಸ್​ ಬೆಡಗಿ ಶ್ರೀಲೀಲಾ ನಟನೆಯ ’ಪೆಳ್ಳಿ ಸಂದಡಿ’ ಸಿನಿಮಾದ ಮಾಸ್​ ಟೀಸರ್​ ಔಟ್​

ಭರಾಟೆ ಬೆಡಗಿ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಬಲಗಾಲಿಟ್ಟು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಪೆಳ್ಳಿ ಸಂದಡಿ ಸಿನಿಮಾ ಪ್ರಾರಂಭ ಆದಾಗಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ.. ಟೈಟಲ್ ಲಾಂಚ್, ಲಿರಿಕಲ್​ ವೀಡಿಯೋ ಸಾಂಗ್, ಟೈಟಲ್​ ಸಾಂಗ್​ ಹೀಗೆ ಒಂದಾದ ನಂತರ ಒಂದು ರೀತಿ ಸದ್ದು ಮಾಡುತ್ತಲೇ ಇತ್ತು..

ಈಗ ಮತ್ತೆ ಪೆಳ್ಳಿ ಸಂದಡಿ ಸಿನಿಮಾ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ ಮತ್ತು ಆ ಗಿಫ್ಟ್​ನ್ನು ಟಾಲಿವುಡ್​ ಸ್ಟಾರ್​ ಹೀರೊ ಕಡೆಯಿಂದ ಬಿಡುಗಡೆ ಮಾಡಿಸಿದ್ದಾರೆ.. ಹಾಗಾದ್ರೆ ಪೆಳ್ಳಿ ಸಂದಡಿ ಸಿನಿಮಾ ಅಭಿಮಾನಿಗಳಿಗೆ ನೀಡಿದ ಗಿಫ್ಟ್​ ಏನು..?

ಮೊದಲೇ ತಿಳಿದಿರುವಂತೆ ಪೆಳ್ಳಿ ಸಂದಡಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.. ಕಾರಣ ಟಾಲಿವುಡ್​ ಸ್ಟಾರ್​ ಡೈರೆಕ್ಟರ್ ಹಾಗು ತೆಲುಗು ಸಿನಿಮಾ ರಂಗದ ದಂತ ಕಥೆ ರಾಘವೇಂದ್ರ ರಾವ್ ನಟಿಸಿದ್ದಾರೆ.. ಅಷ್ಟೇ ಅಲ್ಲದೆ ರಾಘವೇಂದ್ರ ರಾವ್ ಪೆಳ್ಳಿ ಸಂದಡಿ ಸಿನಿಮಾದಲ್ಲಿ ಕೆಲ ಹಾಡುಗಳಿಗೆ ಕೊರಿಯೋಗ್ರಾಫ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ:ಅಮ್ಮನ ಜೊತೆ ಇರೋ ಫೋಟೋ ಶೇರ್​ ಮಾಡಿ ರಾಧಿಕಾ ಪಂಡಿತ್​ ಹೇಳಿದ್ದೇನು ಗೊತ್ತಾ?

ಇನ್ನೂ ಪೆಳ್ಳಿ ಸಂದಡಿ ಅನ್ನೋ ಸಿನಿಮಾವನ್ನ ರಾಘವೇಂದ್ರ ರಾವ್ ಹಿರಿಯ ನಟ ಶ್ರೀಕಾಂತ್ ಜೊತೆ ಮಾಡಿ ಭರ್ಜರಿ ಯಶಸ್ಸನ್ನು ಕಂಡಿದ್ದರು.. ಈಗ ಅದೇ ಹೆಸರಿನಲ್ಲಿ ಶ್ರೀಕಾಂತ್ ಅವರ ಮಗ ರೋಷನ್​ರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದು ಸಿನಿಮಾದ ಕ್ಲಾಸ್ ಅಂಡ್​ ಮಾಸ್​ ಟೀಸರ್​ನ್ನು ಬಿಡುಗಡೆ ಮಾಡಿದ್ದಾರೆ.

blank

ಈಗಾಗಲೇ ಪೆಳ್ಳಿ ಸಂದಡಿ ಸಿನಿಮಾದ ಟೈಟಲ್ ಸಾಂಗ್ ಬಿಟ್ಟು ಪ್ರೇಕ್ಷಕರಿಂದ ಒಳ್ಳೆ ಮಾರ್ಕ್ಸ್​ ಪಡೆದುಕೊಂಡಿತ್ತು ಈಗ ಪೆಳ್ಳಿ ಸಂದಡಿ ಸಿನಿಮಾದ ಸೂಪರ್ ಟೀಸರ್​ ಬಿಟ್ಟು ಅಭಿಮಾನಿಗಳಲ್ಲಿ ಮತ್ತಷ್ಟು ನೀರೀಕ್ಷೆ ಹೆಚ್ಚು ಮಾಡಿದೆ..ಈ ಸಂತೋಷಕ್ಕೆ ಸಾಕ್ಷಿಯಾಗಿದ್ದು, ಟಾಲಿವುಡ್ ಎವರ್​ಗ್ರೀನ್ ವೀರುಡು, ಕಿಂಗ್​ ನಾಗಾರ್ಜುನ ಪೆಳ್ಳಿ ಸಂದಡಿ ಸಿನಿಮಾದ ಟೀಸರ್​ ಬಿಡುಗಡೆ ಮಾಡಿ ಸಿನಿಮಾಗೆ ಮತ್ತಷ್ಟು ಮೈಲೇಜ್​ ನೀಡಿದ್ದಾರೆ..

ಪೆಳ್ಳಿ ಸಂದಡಿ ಸಿನಿಮಾ ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಿದ್ದವಾಗಿದ್ದು ಆದಷ್ಟು ಬೇಗ ಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದೆ.. ಈ ಸಿನಿಮಾದಲ್ಲಿ ಸಾಕಷ್ಟು ಜನ ಹೊಸ ಪ್ರತಿಭೆಗಳು ಇದ್ದು, ಅದರಲ್ಲೂ ನಮ್ಮ ಕನ್ನಡದ ಪ್ರತಿಭೆ ಕೂಡ ಇದ್ದು, ಅವರೆಲ್ಲರಿಗೂ ಶುಭವಾಗಲಿ ಎಂಬುದು ಚಿತ್ರ ಪ್ರೇಮಿಗಳ ಆಶಯ..

Source: newsfirstlive.com Source link