ರಾಜು ತಾಳಿಕೋಟೆ ‘ಆ’ ಕೆಲಸ ಮಾಡಿ ಚಿತ್ರರಂಗಕ್ಕೆ ಬಂದಿದ್ದಾನೆ -ಗಂಭೀರ ಆರೋಪ

ರಾಜು ತಾಳಿಕೋಟೆ ‘ಆ’ ಕೆಲಸ ಮಾಡಿ ಚಿತ್ರರಂಗಕ್ಕೆ ಬಂದಿದ್ದಾನೆ -ಗಂಭೀರ ಆರೋಪ

ವಿಜಯಪುರ: ಹಾಸ್ಯ ನಟ ರಾಜು ತಾಳಿಕೋಟೆ ಕೌಟುಂಬಿಕ ಕಲಹ ವಿಚಾರ ಸಂಬಂಧ ಆರೋಪ ಪ್ರತ್ಯಾರೋಪಗಳು ಮುಂದುವರಿದಿವೆ. ಇದೀಗ ಗನ್ ತೋರಿಸಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಶೇಖ್ ಮೋದಿ, ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

blank
ಶೇಖ್ ಮೋದಿ

ನಾನು ರಾಜು ತಾಳಿಕೋಟೆಗೆ ಯಾವುದೇ ರೀತಿ ಬೆದರಿಕೆ ಹಾಕಿಲ್ಲ. ಗನ್ ತೋರಿಸಿ ಬೆದರಿಕೆ ಹಾಕಿದ್ದೇನೆ ಅನ್ನೋದು ಸುಳ್ಳು. ನನ್ನ ಬಳಿ ಇರೋದು ಲೈಸೆನ್ಸ್ ಹೊಂದಿರೋ ರಿವಾಲ್ವಾರ್. ರಾಜು ತಾಳಿಕೋಟೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾನೆ. ರಾಜು ತಾಳಿಕೋಟೆಗೆ ಮೂವರು ಹೆಂಡತಿಯರಿದ್ದು, ತಲೆ ಹಿಡಿಯುವ ಕೆಲಸ ಮಾಡಿ ಚಿತ್ರರಂಗಕ್ಕೆ ಬಂದಿದ್ದಾನೆ. ರಾಜು ತಾಳಿಕೋಟೆಯವರ ಮೂವರು ಸೊಸೆಯಂದಿರು ಈಗಾಗಲೇ ಅವರನ್ನು ಬಿಟ್ಟು ಹೋಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

blank

ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸನಾ ಕರಜಗಿ ಅಕ್ಕ ಫರಿದಾ ಮೋದಿ ಮಾತನಾಡಿ.. ರಾಜು ತಾಳಿಕೋಟೆ ಹಾಗೂ ಆತನ ಕುಟುಂಬಸ್ಥರು ಸೇರಿ ನನ್ನ ತಂಗಿಗೆ ವಿಷ ಕುಡಿಸಿದ್ದಾರೆ. ಸದ್ಯ ಸನಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಾವು ಈ ಹಿಂದೆಯೇ ರಾಜು ತಾಳಿಕೋಟೆ ಕುಟುಂಬದ ವಿರುದ್ಧ ಮುಧೋಳ ಠಾಣೆಯ ದೂರು ನೀಡಿದ್ದೇವೆ. ಇದೀಗ ಮತ್ತೆ ಕೌಟುಂಬಿಕ ಕಲಹ ಉಂಟಾಗಿ ಗಲಾಟೆಯಾಗಿದೆ. ರಾಜು ತಾಳಿಕೋಟೆ ಅವರು ನನ್ನ ತಾಯಿ ಹಾಗೂ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ತಂಗಿ, ನಾವು ವೇಶ್ಯಾವಾಟಿಕೆ ಮಾಡುತ್ತೇವೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆಯಿಂದಲೇ ಅಳಿಯನ ಪತ್ನಿ ಮೇಲೆ ಹಲ್ಲೆ ಆರೋಪ

Source: newsfirstlive.com Source link