ಕೊರೊನಾ ಭಯದ ನಡುವೆಯೂ ಸಿನಿಮಾ ರಿಲೀಸ್​ ಮಾಡಿ ಗೆದ್ದ ’ಗ್ರೂಫಿ’

ಕೊರೊನಾ ಭಯದ ನಡುವೆಯೂ ಸಿನಿಮಾ ರಿಲೀಸ್​ ಮಾಡಿ ಗೆದ್ದ ’ಗ್ರೂಫಿ’

ಕೊರೊನಾ ಎರಡನೇ ಅಲೆಯ ನಂತ್ರ ಸ್ಟಾರ್​ಗಳ ಸಿನಿಮಾಗಳೇ ತೆರೆ ಮೇಲೆ ಬರೋಕೆ ಮನಸ್ಸು ಮಾಡಲಿಲ್ಲ.. ಇಂತಹ ಟೈಮ್​ನಲ್ಲಿ ಧೈರ್ಯ ಮಾಡಿ ಥಿಯೇಟರ್​ ಅಂಗಳಕ್ಕೆ ಬಂದ ಸಿನಿಮಾ ಗ್ರೂಫಿ.. ಹೊಸಬರೇ ಮಾಡಿರುವ ಈ ಚಿತ್ರ ಕಳೆದ ಆಗಸ್ಟ್​ 25ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್​ ಆಗಿತ್ತು.. ನಿಧಾನವಾಗಿ ಪ್ರೇಕ್ಷಕರ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಗ್ರೂಫಿ ಚಿತ್ರ ಯಶಸ್ವಿ 25 ದಿನಗಳ ಪೂರೈಸಿದೆ.. ಈ ಸಂಭ್ರಮವನ್ನು ಗ್ರೂಫಿ ಚಿತ್ರತಂಡ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ..

ಸೆಲ್ಫಿ ಯಾಕೆ ಗ್ರೂಫಿ ಒಕೆ ಅಂತ ಚಿತ್ರಪ್ರೇಮಿಗಳ ಅಂಗಳಕ್ಕೆ ಬಂದ ಸಿನಿಮಾ ಗ್ರೂಫಿ.. ಮ್ಯಾಜಿಕಲ್​ ಕಂಪೋಸರ್​ ಅರ್ಜುನ್​ ಜನ್ಯ ಬಳಗದ ಈ ಸಿನಿಮಾ ಈಗ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಕಂಟೆಂಟ್​ ಚೆನ್ನಾಗಿದ್ರೆ ಕನ್ನಡ ಸಿನಿ ಪ್ರೇಕ್ಷಕರು ಹೀರೋ ಯಾರು ಅಂತ ನೋಡದೆ ಕೈ ಹಿಡಿತಾರೆ.. ಅದೇ ರೀತಿ ಹೊಸಬರ ವಿಭಿನ್ನ ಪ್ರಯತ್ನದ ಗ್ರೂಫಿ ಚಿತ್ರವನ್ನು ಕನ್ನಡಿಗರು ಕೈ ಹಿಡಿದು 25 ದಿನಗಳ ವರೆಗೆ ಕರೆದು ಕೊಂಡು ಬಂದಿದ್ದಾರೆ.

ಇದನ್ನೂ ಓದಿ:ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

ಹೊಸಬರ ಚಿತ್ರವಾದ್ರು ಮೆಚ್ಚಿ ಹರಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ಚಿತ್ರತಂಡ ಸುದ್ದಿ ಗೋಷ್ಠಿ ನಡೆಸಿ, 25 ದಿನಗಳ ಸಂತಸವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಲಿಯಾ ಗ್ಲೋಬಲ್​ ಮೀಡಿಯಾ ಹೌಸ್​ನ ನಿರ್ಮಾಪಕ ಕೆ.ಜಿ ಸ್ವಾಮಿ ಹೊಸಬರ ಚಿತ್ರವಾದ್ರು ಅದಕ್ಕೆ ಭರ್ಜರಿ ಪ್ರಚಾರ ಮಾಡಿ.ಗ್ರೂಫಿ ಚಿತ್ರವನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ಸಕ್ಸಸ್ ಆಗಿದ್ದಾರೆ..

ಗ್ರೂಫಿ ಚಿತ್ರ ಟ್ರೈಲರ್​ ಮತ್ತು ಹಾಡುಗಳಿಂದಲ್ಲೇ ಸಿನಿರಸಿಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.. ಅದ್ರೆ ಕೊರೊನ ಕಾರಣ ಚಿತ್ರದ ಕಲೆಕ್ಷನ್ ಕೊಂಚ ಡಲ್​ ಇದ್ರು.. ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.. ಈಗ ಕೊರೊನ ಕಮ್ಮಿ ಆಗ್ತಿದ್ದು ಚಿತ್ರವನ್ನು ರಾಜ್ಯದ ಎಲ್ಲಾ ಜನರಿಗೂ ತಲುಪಿಸುವ ಪ್ರಯತ್ನದಲ್ಲಿದೆ ಚಿತ್ರತಂಡ..

ಅದೇನೆ ಇರಲಿ ಜನರು ಮನೆಯಿಂದ ಹೊರ ಬರಲು ಹೆದರುವಂತ ಸಮಯದಲ್ಲಿ., ಸಿನಿಮಾವನ್ನು ರಿಲೀಸ್​ ಮಾಡಿ. ಒಂದು ಮಟ್ಟಕ್ಕೆ ಗೆಲುವು ಕಂಡಿರುವ ಗ್ರೂಫಿ ಚಿತ್ರವನ್ನು, ಮುಂದಿನ ದಿನಗಳಲ್ಲಿ ಪ್ರೇಕ್ಷಕ ಪ್ರಭುಗಳು ಕೈ ಹಿಡಿದು. 50 ದಿನಗಳತ್ತ ಕರೆದೋಯ್ತಾರ ಕಾದು ನೋಡಬೆಕು..

Source: newsfirstlive.com Source link