ಪರಿಷತ್​ ಕಲಾಪದಲ್ಲಿ ‘ಅನಾಥ ಶಿಶು’ ಗದ್ದಲ: ಇಬ್ರಾಹಿಂ ಹೇಳಿಕೆಗೆ ಪೂಜಾರಿ ಗರಂ

ಪರಿಷತ್​ ಕಲಾಪದಲ್ಲಿ ‘ಅನಾಥ ಶಿಶು’ ಗದ್ದಲ: ಇಬ್ರಾಹಿಂ ಹೇಳಿಕೆಗೆ ಪೂಜಾರಿ ಗರಂ

ಬೆಂಗಳೂರು: ಇಂದು ಮಧ್ಯಾಹ್ನ ಪರಿಷತ್ ​ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್​ ನಾಯಕ ಸಿಎಂ ಇಬ್ರಾಹಿಂ ಅವರು ‘ಅನಾಥ ಶಿಶು’ ಅನ್ನೋ ಶಬ್ದ ಬಳಸಿದರು. ಇದು ಕೆಲವು ಹೊತ್ತು ಭಾರೀ ಚರ್ಚೆಗೆ ಗ್ರಾಸವಾಯ್ತು.

ನಿನ್ನೆ ಸಭಾ ನಾಯಕರು ಪರಿಷತ್ ಕಲಾಪದಲ್ಲಿ ಭಾಗಿಯಾಗದಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಇಬ್ರಾಹಿಂ, ಸದನಕ್ಕೆ ಸಚಿವರನ್ನು ಪರಿಚಯಿಸುವುದು ಸಭಾ ನಾಯಕರ ಕೆಲಸ. ಅವರು ಗೈರಿದ್ದ ಕಾರಣಕ್ಕಾಗಿ ಸಭಾ ನಾಯಕರಿಲ್ಲದ ಸಚಿವರು ಅನಾಥ ಶಿಶು ಎಂದರು.

ಸಿಎಂ ಇಬ್ರಾಹಿಂ ಮಾತಿಗೆ ಸಭಾ‌ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ‌ ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಇಬ್ರಾಹಿಂ ‌ಸದನದಲ್ಲಿ‌ ಹಿರಿಯರಿದ್ದಾರೆ. ಪರಿಷತ್​​ನಲ್ಲಿ ಅನಾಥ ಶಿಶು ಪದ ಬಳಕೆ‌ ಮಾಡಬಾರದು. ಹಿರಿಯ ಸದಸ್ಯರಾಗಿದ್ದೀರಿ, ಈ ರೀತಿಯ‌ ಪದಗಳನ್ನ ಯಾರೂ ಬಳಸಬಾರದು. ನಾನು ನಿನ್ನೆ ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ದರ್ಶನಕ್ಕೆ ಹೋಗಿದ್ದೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ್ರು.

ಇನ್ನು ಅನಾಥ ಶಿಶು ಎಂಬ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡ ಸಿಎಂ ಇಬ್ರಾಹಿಂ, ನನ್ನ ಹೇಳಿಕೆಯಲ್ಲಿ ತಪ್ಪು ಏನೂ ಇಲ್ಲ ಎಂದರು. ಆಗ ಸಿಎ‌ಂ ಇಬ್ರಾಹಿಂ ಮಾತಿಗೆ ಸಭಾ ನಾಯಕ ಪೂಜಾರಿ ಬೇಸರ ವ್ಯಕ್ತಪಡಿಸಿದರು. ಇದೆ ವೇಳೆ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ, ಸಭಾ ನಾಯಕರು ನನಗೆ ಹೇಳಿ ಹೊರಟಿದ್ರು, ನಾನು ಸಹ ಸದನಕ್ಕೆ ಹೇಳಿದ್ದೆ. ಆಗ ಸಿಎಂ ಇಬ್ರಾಹಿಂ ಇರಲಿಲ್ಲ ‌ಎಂದು ಪರಿಸ್ಥಿತಿಯನ್ನ ತಿಳಿಗೊಳಿಸಿದರು.

Source: newsfirstlive.com Source link