5 ವರ್ಷಗಳ ಹಿಂದೆ ರೈಲು ತಡವಾಗಿದ್ದಕ್ಕೆ ಕೊನೆಗೂ 35 ಸಾವಿರ ಪರಿಹಾರ ಪಡೆದ ಪ್ರಯಾಣಿಕ

5 ವರ್ಷಗಳ ಹಿಂದೆ ರೈಲು ತಡವಾಗಿದ್ದಕ್ಕೆ ಕೊನೆಗೂ 35 ಸಾವಿರ ಪರಿಹಾರ ಪಡೆದ ಪ್ರಯಾಣಿಕ

ರಾಜಸ್ಥಾನ್: ಅಪರೂಪದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್​ ಪ್ರಯಾಣಿಕನೋರ್ವನಿಗೆ ₹35,000 ಪರಿಹಾರ ನೀಡುವಂತೆ ಭಾರತೀಯ ರೈಲ್ವೇ ಇಲಾಖೆಗೆ ಹೇಳಿದೆ. ರೈಲು ಸಮಯಕ್ಕೆ ಸರಿಯಾಗಿ ಪ್ಲಾಟ್​ಫಾರ್ಮ್ ತಲುಪದ ಹಿನ್ನೆಲೆ ರೈಲ್ವೇ ಇಲಾಖೆ ಪ್ರಯಾಣಿಕನಿಗಾದ ನಷ್ಟವನ್ನು ಭರಿಸುವಂತೆ ಹೇಳಿದೆ.

ರಾಜಸ್ಥಾನದ ಅಲ್ವಾರ್​​ನ ನಿವಾಸಿ ಸಂಜಯ್ ಶುಲ್ಕಾ ಎಂಬುವವರು 2016 ರ ಜೂನ್ 11 ರಂದು ಕುಟುಂಬದೊಂದಿಗೆ ಜಮ್ಮುವಿಗೆ ತೆರಳಲು ಜಮ್ಮು-ತಾವಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ರೈಲು ನಿಲ್ದಾಣಕ್ಕೆ ಆಗಮಿಸುವುದು ತಡವಾಗಿದೆ. ಹೀಗಾಗಿ ಅವರು ಶ್ರೀನಗರಕ್ಕೆ ತೆರಳಬೇಕಿದ್ದ ವಿಮಾನ ಹತ್ತಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಹುಟ್ಟು ಹಬ್ಬ, ಆ್ಯನಿವರ್ಸರಿಯಂಥ ಸಮಾರಂಭಗಳಿಗೆ ಬಾಡಿಗೆಗೆ ಸಿಗಲಿದೆ ರೈಲು ಬೋಗಿ

ಇನ್ನು ಈ ಮಧ್ಯೆ ಸಂಜಯ್ ಶುಕ್ಲಾ ಟ್ಯಾಕ್ಸಿಗೆ ಬಾಡಿಗೆ ಕೊಡಬೇಕಾಗಿ ಬಂದಿದೆ. ಅಲ್ಲದೇ ದಾಲ್ ಲೇಕ್​ನಲ್ಲಿ ಬೋಟ್ ರೈಡ್​​ಗಾಗಿ ಬುಕ್ ಮಾಡುವಾಗ ನೀಡಿದ್ದ ಅಡ್ವಾನ್ಸ್ ಹಣವನ್ನೂ ಕಳೆದುಕೊಂಡಿದ್ದಾರೆ. 12 ಗಂಟೆಗಳ ಕಾಲ ಟ್ಯಾಕ್ಸಿಯಲ್ಲಿ ಪ್ರಯಾಣಿಸಿ ಶ್ರೀನಗರ ತಲುಪಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಿದ್ದರೆ ಕೇವಲ 20 ನಿಮಿಷಗಳಲ್ಲಿ ತಲುಪಬಹುದಾಗಿದ್ದ ದೂರಕ್ಕೆ 12 ಗಂಟೆಗಳ ಕಾಲ ಪ್ರಯಾಣಿಸುವಂತಾಯ್ತು ಎಂದು ಸಂಜಯ್ ಜಿಲ್ಲಾ ಕನ್ಸೂಮರ್ ಕೋರ್ಟ್​ನ ಮೊರೆ ಹೋಗಿದ್ದರು. ಅಲ್ಲದೇ ತಾವು ಕಳೆದುಕೊಂಡ ಹಣ ಮತ್ತು ತಮಗಾದ ಮಾನಸಿಕ ಹಿಂಸೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: 20 ಕಿ.ಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ತಪ್ಪಿದ ಭಾರೀ ಅನಾಹುತ

ಮೊದಲಿಗೆ ಕನ್ಸೂಮರ್ ಫೋರಂ ರೈಲ್ವೇ ಇಲಾಖೆಗೆ 35,000 ಪರಿಹಾರ ಜೊತೆಗೆ 15,000 ಟ್ಯಾಕ್ಸಿ ಬಾಡಿಗೆ, ಬೋಟ್ ರೈಡ್​ಗೆ ಬುಕ್ ಮಾಡಿದ್ದ ಅಡ್ವಾನ್ಸ್ ಹಣ 10,000, ಕುಟುಂಬದ ಖರ್ಚು 5,000 ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದಕ್ಕೆ 5,000 ಪರಿಹಾರ ನೀಡುವಂತೆ ಹೇಳಿತ್ತು.

ಆದ್ರೆ ಇದಕ್ಕೆ ಒಪ್ಪದ ರೈಲ್ವೇ ಇಲಾಖೆ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್ ಮತ್ತು ಟ್ರಿಬ್ಯುನಲ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಎರಡೂ ಕೋರ್ಟ್​​ಗಳು ಈ ಹಿಂದಿನ ಆದೇಶವನ್ನೇ ಎತ್ತಿಹಿಡಿದಿವೆ. ನಂತರ ರೈಲ್ವೇ ಇಲಾಖೆ ಸುಪ್ರೀಂ ಕೋರ್ಟ್​ನ ಮೊರೆಹೋಗಿದೆ. ಆದ್ರೆ ಸುಪ್ರೀಂಕೋರ್ಟ್ ಸಹ ಕನ್ಸೂಮರ್ ಕೋರ್ಟ್​​ನ ಆದೇಶವನ್ನೇ ಎತ್ತಿಹಿಡಿದಿದೆ.

Source: newsfirstlive.com Source link