ಈ ವಾರ ಮನರಂಜನೆಯ ಮಹಾಪೂರ ಹೊತ್ತು ಬರ್ತಿವೆ ‘ಎದೆ ತುಂಬಿ ಹಾಡುವೆನು’ & ರಾಜಾ-ರಾಣಿ ಶೋ

ಈ ವಾರ ಮನರಂಜನೆಯ ಮಹಾಪೂರ ಹೊತ್ತು ಬರ್ತಿವೆ ‘ಎದೆ ತುಂಬಿ ಹಾಡುವೆನು’ & ರಾಜಾ-ರಾಣಿ ಶೋ

ಎದೆ ತುಂಬಿ ಹಾಡುವೆನು ವೇದಿಕೆಯಲ್ಲಿ ಸಂಗೀತ ಹಬ್ಬ ನಡೆಯುತ್ತಿದ್ದು, ಕಳೆದ ವಾರ ‘ನನ್ನ ಹಾಡು ನನ್ನದು’ ಎಂಬ ಕಾನ್ಸೆಪ್ಟ್​ ಮೂಲಕ ಬಂದಿದ್ದ ಗಾಯಕರು ಈ ವಾರ ಕೂಡ ನಾದ ಸ್ವರವನ್ನ ಮುಂದುವರೆಸಲಿದ್ದಾರೆ.

ಸಂಗೀತ ಶೋಗಳಲ್ಲಿ ಅಗ್ರ ಸ್ಥಾನದಲ್ಲಿರುವ ಎದೆ ತುಂಬಿ ಹಾಡುವೆನು ವೇದಿಕೆ ಹಲವು ಹೊಸತನಕ್ಕೆ ಸಾಕ್ಷಿಯಾಗಿದೆ. ಸಾಕಷ್ಟು ಪ್ರತಿಭೆಗಳಿಗೆ ವೇದಿಕೆಯಾಗಿದ್ದು, ಈ ವಾರ ಕೂಡ ಮತ್ತೊಂದು ಹೊಸ ಕಾನ್ಸೆಪ್ಟ್​ ಹೊತ್ತು ತಂದಿದೆ. ಸ್ಪರ್ಧಿಗಳ ನಡುವೆ ಸಂಗೀತದ ಮುಖಾಮುಖಿ ಎಂಬ ಅಡಿಬರಹದ ಪ್ರೊಮೋ ರಿಲೀಸ್​ಆಗಿದೆ.

blank

ಸ್ಪರ್ಧಿ ಬೌಲ್​ನಲ್ಲಿ ಇರಿಸಲಾದ ಎನ್ವಲಪ್​​ ಸೆಲೆಕ್ಟ್​ ಮಾಡಬೇಕು. ಅದ್ರಲ್ಲಿ ಯಾರ ಹೆಸರು ಬರುತ್ತದೆಯೋ ಆ ಸ್ಪರ್ಧಿಯೊಂದಿಗೆ ಸಂಗೀತ ಮುಖಾಮುಖಿ ನಡೆಯುತ್ತದೆ. ಅದ್ರಲ್ಲಿ ಒಬ್ಬರು ಬೆಸ್ಟ್​ ಗಾಯಕ ಅಂತಾ ಆಯ್ಕೆಯಾದ್ರೆ, ಇನ್ನಬ್ಬರೂ ಡೆಂಜರ್​ ಜೋನ್​ಗೆ ಹೋಗಲಿದ್ದು ಕಾರ್ಯಕ್ರಮ ಕುತೂಹಲ ಮೂಡಿಸಿದೆ.

blank

ಇದನ್ನೂ ಓದಿ 200ರ ಸಂಚಿಕೆ ಸಂಭ್ರಮದಲ್ಲಿ ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ

ರಾಜಾ-ರಾಣಿ ಶೋ ಸಖತ್​ ಫೇಮಸ್​ ಆಗಿದ್ದು, ಯಾವಗ ಶೋ ಟೆಲಿಕಾಸ್ಟ್​ ಆಗುತ್ತೊ ಅಂತಾ ಅದೆಷ್ಟೋ ಅಭಿಮಾನಿಗಳು ಕಾಯ್ತಿರ್ತಾರೆ. ಇದರ ಪ್ರತಿ ಸಂಚಿಕೆಯೂ ಕೂಡ ಹೊಸತನದ ಜೊತೆಗೆ ಸಖತ್​ ಕಲರ್​ಫುಲ್ ಆಗಿ ಮೂಡಿ ಬರ್ತಿದೆ.

blank

ಕಳೆದ ವಾರ ಹಳ್ಳಿ ಸೊಗಡನಲ್ಲಿ ಮಿಂಚಿದ್ದ ರಾಜಾ-ರಾಣಿಯರು.. ಈ ವಾರ ಕೊಂಚ ಶಾಕ್​ನಲ್ಲಿದ್ದಾರೆ.. ಆ ಶಾಕ್​ಗೆ ಕಾರಣ ಎಲ್ಲಾ ರಾಣಿಯರ ಅತ್ತೆಯಂದಿರು ಶೋಗೆ ಖಡಕ್​ ಎಂಟ್ರಿ ನೀಡಿದ್ದಾರೆ.

blank

ಇದನ್ನೂ ಓದಿ:ಜೀ ಕುಟುಂಬಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್​ ಸ್ಟಾರ್​ ಗಣೇಶ್​

ಶಾಕ್​​ ನೀಡಿರುವ ಅಮ್ಮಂದಿರನ್ನ ನೋಡಿ ರಾಜರು ಕಕ್ಕಾಬಿಕ್ಕಿಯಾಗಿದ್ದಾರೆ. ಒಟ್ನಲ್ಲಿ ಸುಮಧುರ ಗಾಯನಗಳ ಮೂಲಕ ಕಿವಿಗೆ ಇಂಪು ನೀಡಲು ಎದೆ ತುಂಬಿ ಹಾಡುವೆನು ಗಾಯಕರು ಬರುತ್ತಿದ್ದರೇ.. ಇತ್ತ ಅತ್ತೆ ಸೊಸೆಯರ ಜುಗಲ್​ಬಂಧಿ ಹೊತ್ತು ರಾಜಾ-ರಾಣಿ ರಂಜಿಸಲು ಬರುತ್ತಿದ್ದು, ಈ ವಾರ ಫುಲ್ ​ಮನರಂಜನೆ ನೀಡಲು ಎರಡು ವೇದಿಕೆ ಸಜ್ಜಾಗಿವೆ.

Source: newsfirstlive.com Source link