ಅಕ್ಟೋಬರ್​ನಲ್ಲಿ ಸುದೀಪ್​ ಸಿನಿಮಾ ರಿಲೀಸ್​! ಕೋಟಿಗೊಬ್ಬನಾ? ವಿಕ್ರಾಂತ್​ ರೋಣನಾ?

ಅಕ್ಟೋಬರ್​ನಲ್ಲಿ ಸುದೀಪ್​ ಸಿನಿಮಾ ರಿಲೀಸ್​! ಕೋಟಿಗೊಬ್ಬನಾ? ವಿಕ್ರಾಂತ್​ ರೋಣನಾ?

ಸ್ಯಾಂಡಲ್​ವುಡ್​ ಪಾಲಿಗೆ ಡಿಸೆಂಬರ್​ ಲಕ್ಕಿ ತಿಂಗಳು ಅನ್ನೋದು ಈಗಾಗಲೇ ಫ್ರೂ ಆಗಿದೆ.. ಡಿಸೆಂಬರ್​ನಲ್ಲಿ ಬಂದ ಬಹುತೇಕ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿವೆ. ಈಗಾಗಿ ಈಲಕ್ಕಿ ತಿಂಗಳಿನಲ್ಲಿ ಸಿನಿಮಾ ರಿಲೀಸ್​ ಮಾಡೊಕೆ ಚಿತ್ರತಂಡಗಳು ನಾ ಮುಂದು ತಾ ಮುಂದು ಅಂತಾರೆ..ಅದೇ ರೀತಿ ಈಗ ಡಿಸೆಂಬರ್​ ತಿಂಗಳ ಮೇಲೆ ಈಗ ಕಿಚ್ಚ ಸುದೀಪ್​ ಕಣ್ಣಿಟ್ಟಿದ್ದಾರ.. ಅಷ್ಟಕ್ಕೂ ಕಿಚ್ಚನ ಯಾವ ಚಿತ್ರ ಡಿಸೆಂಬರ್​ನಲ್ಲಿ ಬರೋಕೆ ರೆಡಿಯಾಗ್ತಿದೆ. ಅದರ ತಯಾರಿ ಹೇಗಿದೆ ಗೊತ್ತಾ?.

ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ3, ವಿಕ್ರಾಂತ್​ ರೋಣ ಚಿತ್ರಗಳು ರಿಲೀಸ್​ಗೆ ರೆಡಿಯಾಗಿವೆ. ಕಳೆದ ವರ್ಷವೇ ಕೋಟಿಗೊಬ್ಬ3 ರಿಲಿಸ್​ಗೆ ರೆಡಿ ಇದ್ರು, ಕೊರೊನದಿಂದ ಇನ್ನು ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.. ಈ ಗ್ಯಾಫ್​ನಲ್ಲಿ ಕಿಚ್ಚನ ವಿಕ್ರಾಂತ್​ ರೋಣ ಚಿತ್ರವೂ ಶೂಟಿಂಗ್ ಕಂಪ್ಲಿಟ್​ ಮಾಡಿ.. ನಾವು ರಿಲೀಸ್​ಗೆ ರೆಡಿ ಅಂತಿದ್ದಾರೆ ನಿರ್ಮಾಪಕ ಜಾಕ್​ ಮಂಜು..

ಕಿಚ್ಚನ 2 ಚಿತ್ರಗಳಲ್ಲಿ ಯಾವ ಚಿತ್ರ ಮೊದಲು ರಿಲೀಸ್​ ಆಗುತ್ತೆ.. ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕುತೂಹಲ ಕಿಚ್ಚನ ಅಭಿಮಾನಿ ಬಳಗದಲ್ಲಿದೆ..ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಕೋಟಿಗೊಬ್ಬ 3 ಅಕ್ಟೋಬರ್​ನಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ.. ಕೋಟಿಗೊಬ್ಬ 3 ಅಕ್ಟೋಬರ್​ಗೆ ಬಂದ್ರೆ ಟೀಸರ್​ ಟ್ರೈಲರ್​ನಿಂದಲೇ ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿರುವ ವಿಕ್ರಾಂತ್​ ರೋಣ , ಥಿಯೆಟರ್​ಗೆ ಬರೋದ್ಯಾವಾಗಪ್ಪ ಅನ್ನೋ ಪ್ರಶ್ನೆ ಸಿನಿರಸಿಕಲ್ಲಿ ಮೂಡಿದೆ…

ವಿಕ್ರಾಂತ್​ ರೋಣ ರಿಲೀಸ್​ ಬಗ್ಗೆ ರನ್ನನ ಅಭಿಮಾನಿ ಬಳಗದಲ್ಲಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಈ ವರ್ಷದ ಅಂತ್ಯಕ್ಕೆ ವಿಕ್ರಾಂತ್​ ರೋಣ ದರ್ಶನ ಕೊಡೊ ಸಾಧ್ಯತೆ ಇದೆ.. ಹೌದು ವಿಕ್ರಾಂತ್​ ರೋಣ ಚಿತ್ರವನ್ನು ಡಿಸೆಂಬರ್​ನಲ್ಲಿ ರಿಲೀಸ್​ ಮಾಡುವ ಅಲೋಚನೆಯಲ್ಲಿದೆ ಚಿತ್ರತಂಡ..ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ಬಹುತೇಕ ಮುಗಿದಿದೆ..ಕನ್ನಡ ಡಬ್ಬಿಂಗ್​ ಮುಗಿಸಿರುವ ಕಿಚ್ಚ ಶೀಘ್ರದಲ್ಲೆ ತಮಿಳ್ ಹಾಗೂ ತೆಲುಗು ಡಬ್ಬಿಂಗ್​ ಮಾಡಲಿದ್ದಾರೆ..

ಡಿಸೆಂಬರ್​ನಲ್ಲಿ ಈಗಾಗಲೇ ಪುಷ್ಪ, 777ಚಾರ್ಲಿ ಚಿತ್ರಗಳು ಡಿಸೆಂಬರ್​ನಲ್ಲಿ ರಿಲೀಸ್​ ಆಗುವುದಾಗಿ ಡೇಟ್​ ಕೂಡ ಅನೌನ್ಸ್​ ಮಾಡಿದ್ದಾರೆ.. ಈಗ ಇವುಗಳ ಜೊತೆಗೆ ಲಕ್ಕಿ ಡಿಸೆಂಬರ್​ನಲ್ಲಿ ವಿಕ್ರಾಂತ್​ ರೋಣ ರಿಲಿಸ್​ ಮಾಡೊಕೆ ವಿಅರ್​ ಟೀಂ ಪ್ಲಾನ್​ ಮಾಡಿದ್ದಾರೆ ಅನ್ನೋ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿದೆ..

Source: newsfirstlive.com Source link