ಈ ಕಾರಣಕ್ಕೆ ದೋಸೆ ತಿನ್ನೋದನ್ನೇ ಕಡಿಮೆ ಮಾಡಿದೆ -ಸರ್ಕಾರಕ್ಕೆ ಸಿದ್ದರಾಮಯ್ಯ ಕ್ಲಾಸ್

ಈ ಕಾರಣಕ್ಕೆ ದೋಸೆ ತಿನ್ನೋದನ್ನೇ ಕಡಿಮೆ ಮಾಡಿದೆ -ಸರ್ಕಾರಕ್ಕೆ ಸಿದ್ದರಾಮಯ್ಯ ಕ್ಲಾಸ್

ವಿಧಾನಸಭೆ ಕಲಾಪದಲ್ಲಿ ಇಂದು ಬೆಲೆ ಏರಿಕೆ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿದರು. ಪೆಟ್ರೋಲ್ ಸೆಸ್ 32.98 ಪೈಸೆ ಹಾಕಿದ್ದೀರಾ.. ಇದರಲ್ಲಿ 20 ರೂಪಾಯಿ ಕಡಿಮೆ ಮಾಡಿ. ಪೆಟ್ರೋಲ್ ನಿಜವಾದ ಬೆಲೆ 38 ರೂಪಾಯಿ ಅಷ್ಟೇ. ನಿಮ್ಮ ಎಲ್ಲಾ ತೆರಿಗೆ ಸೇರಿ 67 ರೂಪಾಯಿ ಇದೆ ಎಂದರು.

ಎರಡು ಇಡ್ಲಿ-ವಡೆಗೆ 39 ರೂಪಾಯಿ ಕೊಡಬೇಕು. ಬರೀ ಇಡ್ಲಿ-ವಡೆಗೆ ಇಷ್ಟು ಹೆಚ್ಚಾಗಿದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳದಿಂದ ಇದು ಆಗಿದೆ. ಸಾಗಾಣಿಕೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ನಾನು ಜನಾರ್ಧನ ಹೊಟೇಲ್​ಗೆ ದೋಸೆ ತಿನ್ನಲು‌ ಹೋಗ್ತಿದ್ದೆ. ಒಂದು ದೋಸೆ ಬೆಲೆ 100 ರೂಪಾಯಿ ಆಗಿದೆ. ನಾನು ದೋಸೆ ತಿನ್ನುವುದನ್ನೇ ಕಡಿಮೆ ಮಾಡಿದೆ. ಇದನ್ನ ನೀವು ಡಿಫೆಂಡ್ ಮಾಡಿಕೊಳ್ತೀರ ಎಂದು ಆಡಳಿತ ಪಕ್ಷವನ್ನ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.

ದರ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​ಗೆ ಕೇಳಿ ಗೊತ್ತಾಗುತ್ತದೆ. ಜನವರಿಯಲ್ಲಿ ಕಾಫಿ 15 ಇತ್ತು, ಇವಾಗ 30 ಆಗಿದೆ. ದೋಸೆ 25 ಇದ್ದರೆ ಇವಾಗ 30. ಈ ವೇಳೆ ಎಲ್ಲದಕ್ಕೂ ಡೀಸೆಲ್ ಪೆಟ್ರೋಲ್ ಕಾರಣವಾ? ಎಂದು ಕೆಲವರು ಪ್ರಶ್ನಿಸಿದರು. ಹೌದು ಡೀಸೆಲ್ ದರ ಏರಿಕೆ ಕಾರಣ ಅಂತಾ ಸಿದ್ದರಾಮಯ್ಯ ಹೇಳಿದ್ರು. ಡೀಸೆಲ್ ದರ ಹೆಚ್ಚಾದರೆ ಸಾಗಣಿಕೆ ದರ ಹೆಚ್ಚಾಗುತ್ತೆ, ಗ್ಯಾಸ್ ದರ ಹೆಚ್ಚಳ ಆದರೆ ಅಡುಗೆ ಬೆಲೆ ಹೆಚ್ಚಳ ಆಗುತ್ತದೆ ಅಂತಾ ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಕಾಳಲೆದು ಮಾತನಾಡಿದ ಸಿದ್ದರಾಮಯ್ಯ, ನೀವು ಮನೆಗೆ ಒಂದಿಷ್ಟು ದುಡ್ಡು ಕೊಡ್ತೀರಾ ಅನಿಸುತ್ತೆ. ಮಹಿಳೆಯರ ಕಷ್ಟ ಅರ್ಥವಾಗಲ್ಲ ನಿಮಗೆ. ಒಂದು ಬಾರಿ ನಿಮ್ಮ ಮನೆಯ ಹತ್ರ ಕೇಳಿ, ಬೆಲೆ ಏರಿಕೆ ಹೇಗೆ ಹೆಚ್ಚಾಗಿದೆ ಅಂತ ಹೇಳ್ತಾರೆ. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​ಗೆ ಕೇಳಿಕೊಂಡು ಬಂದು ನಾಳೆ ಸದನದಲ್ಲಿ ಹೇಳಿ ಎಂದು ಹೋಂ ಮಿನಿಸ್ಟರ್​ಗೆ ಹೋಂ ವರ್ಕ್ ಕೊಟ್ಟರು.

Source: newsfirstlive.com Source link