ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮುಂಬೈ ಪೊಲೀಸರ ಮಾಸ್ಟರ್ ಪ್ಲಾನ್.. ಏನಿದು ನಿರ್ಭಯಾ ಸ್ಕ್ವಾಡ್..?

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮುಂಬೈ ಪೊಲೀಸರ ಮಾಸ್ಟರ್ ಪ್ಲಾನ್.. ಏನಿದು ನಿರ್ಭಯಾ ಸ್ಕ್ವಾಡ್..?

ಮುಂಬೈ: ಮುಂಬೈ ಪೊಲೀಸ್ ಕಮಿಷನರ್ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಮಂಗಳವಾರ ಮುಂಬೈ ಕಮಿಷನರ್ ಹೇಮಂತ್ ನರ್ಗಾಳೆ ನಿರ್ಭಯ ಸ್ಕ್ವಾಡ್ ಘೋಷಣೆ ಮಾಡಿದ್ದಾರೆ. ಈ ನಿರ್ಭಯ ಸ್ಕ್ವಾಡ್ ಕ್ರೈಮ್ ನಡೆಯುವ ಹಾಟ್​​ಸ್ಪಾಟ್​ಗಳಲ್ಲಿ ಗಸ್ತು ತಿರುಗಲಿವೆ. ಅಲ್ಲದೇ ಮಹಿಳೆಯರ ಹಾಸ್ಟೆಲ್​ಗಳು ಮತ್ತು ಶೆಲ್ಟರ್​ಗಳು ಇರುವಲ್ಲಿ ಗುಪ್ತಚರ ಸಿಬ್ಬಂದಿಯನ್ನು ಇರಿಸಲಿದೆ ಎನ್ನಲಾಗಿದೆ.

ನಿರ್ಭಯ ಸ್ಕ್ವಾಡ್​​ನಲ್ಲಿ ಓರ್ವ ಮಹಿಳಾ ಅಧಿಕಾರಿ ಇರಲಿದ್ದು ಇಬ್ಬರು ಕಾನ್​ಸ್ಟೇಬಲ್​ಗಳು ಜೊತೆಯಾಗಲಿದ್ದಾರೆ. ಈ ಇಬ್ಬರು ಕಾನ್​ಸ್ಟೇಬಲ್​ಗಳಲ್ಲಿ ಕನಿಷ್ಟ ಓರ್ವ ಸಿಬ್ಬಂದಿ ಮಹಿಳಾ ಸಿಬ್ಬಂದಿಯಾಗಿರುತ್ತಾರೆ, ಇವರಿಗೆ ತರಬೇತಿ ನೀಡಲಾಗಿರುತ್ತದೆ. ಅಲ್ಲದೇ ರೆಕಾರ್ಡ್ ಸಾಧನಗಳ ಉಪಯೋಗವನ್ನು ಕಲಿಸಲಾಗಿರುತ್ತದೆ.

ಸ್ಕ್ವಾಡ್​ ಬಳಿ ಒಂದು ಪ್ಯಾಡ್ ಇರಲಿದ್ದು ಅದರಲ್ಲಿ ಕಳೆದ ಐದು ವರ್ಷಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳ ದಾಖಲೆಗಳು ಇರುತ್ತವೆ ಎನ್ನಲಾಗಿದೆ.

Source: newsfirstlive.com Source link