ಫೋಟೋಗೆ ಪೋಸ್ ಕೊಡಲು ಧ್ಯಾನಕ್ಕೆ ಕೂತ ವ್ಯಕ್ತಿ.. ಸಮುದ್ರದಲ್ಲಿ ಮುಳುಗಿ ಸಾವು

ಫೋಟೋಗೆ ಪೋಸ್ ಕೊಡಲು ಧ್ಯಾನಕ್ಕೆ ಕೂತ ವ್ಯಕ್ತಿ.. ಸಮುದ್ರದಲ್ಲಿ ಮುಳುಗಿ ಸಾವು

ಉತ್ತರ ಕನ್ನಡ: ಸಮುದ್ರದ ದಡದಲ್ಲಿ ಫೋಟೋಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಬಲಿಯಾಗಿರುವ ಘಟನೆ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ನಡೆದಿದೆ.

ಶಿರಸಿಯ ಸುಬ್ಬುಗೌಡ (42) ಮೃತಪಟ್ಟ ಪ್ರವಾಸಿಗ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ವನ್ನಳ್ಳಿ ತೀರಕ್ಕೆ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋ ಫೋಸ್ ಕೊಡುವಾಗ ಅಲೆ ಅಪ್ಪಳಿದೆ. ಅಲೆಯ ಜೊತೆ ಸಮುದ್ರಕ್ಕೆ ಬಿದ್ದ ಪ್ರವಾಸಿಗ ಮುಳುಗಿ ಸಾವನ್ನಪ್ಪಿದ್ದಾನೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link