‘ರಾಮ, ಸೀತೆ, ರಾವಣ ರಾಜ್ಯದಲ್ಲಿ..’ ಸುಬ್ರಮಣಿಯನ್ ಸ್ವಾಮಿ ವಿಚಾರದಲ್ಲಿ ಸಿದ್ದರಾಮಯ್ಯ-ಬೊಮ್ಮಾಯಿ ಜಟಾಪಟಿ

‘ರಾಮ, ಸೀತೆ, ರಾವಣ ರಾಜ್ಯದಲ್ಲಿ..’ ಸುಬ್ರಮಣಿಯನ್ ಸ್ವಾಮಿ ವಿಚಾರದಲ್ಲಿ ಸಿದ್ದರಾಮಯ್ಯ-ಬೊಮ್ಮಾಯಿ ಜಟಾಪಟಿ

ಇಂಧನ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಮಾಡಿದ್ದ ರಾಮ, ಸೀತೆ, ರಾವಣ ರಾಜ್ಯದ.. ಟ್ವೀಟ್​ ವಿಚಾರದ ಮೇಲೆ ಇಂದು ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಮಧ್ಯೆ ಗಂಭೀರ ಚರ್ಚೆ ನಡೆಯಿತು.

ಸಿದ್ದರಾಮಯ್ಯ ಮಾತನಾಡಿ.. ರಾವಣನ ಲಂಕೆಯಲ್ಲಿ ಪೆಟ್ರೋಲ್ ಬೆಲೆ 51 ರೂಪಾಯಿ, ಸೀತೆಯ ನೇಪಾಳದಲ್ಲಿ ಪೆಟ್ರೋಲ್ ಬೆಲೆ 53 ರೂಪಾಯಿ, ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 85 ರೂಪಾಯಿ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದರು.

ಸುಬ್ರಮಣಿಯನ್ ಸ್ವಾಮಿ ಯಾವುದೇ ಪಕ್ಷದಲ್ಲಿದ್ದರೂ ಅವರೊಬ್ಬ ಫ್ರೀಲಾನ್ಸ್ ಪೊಲಿಟಿಷಿಯನ್. ನಿಮ್ಮ ಪಕ್ಷದ ರಾಜ್ಯಸಭಾ ಸದಸ್ಯ ಅವರು, ಈ ರೀತಿ ಹೇಳಿಕೆ ಕೊಡುವುದರಿಂದ ನಿಮ್ಮ ಹೈಕಮಾಂಡ್​ಗೆ ತೊಂದರೆ ಇಲ್ಲ ಅಂದರೆ ಐ ಹ್ಯಾವ್ ನೋ ಅಬ್ಜೆಕ್ಷನ್ ಅಂತಾ ಸಿದ್ದರಾಮಯ್ಯ ಹೇಳಿದ್ರು.

ಅದಕ್ಕೆ ಬೊಮ್ಮಾಯಿ ಮಾತನಾಡಿ.. ಪ್ರತಿ ಪಕ್ಷದಲ್ಲೂ ಅಭಿಪ್ರಾಯ ಭೇದ ಇರುವವರು ಇರ್ತಾರೆ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ 23 ಜನ ಜಿ-23 ಅಂತ ಮಾಡ್ಕೊಂಡು ಪತ್ರ ಬರೆದಿರಲಿಲ್ವಾ?’ ಎಂದು ತಿರುಗೇಟು ಕೊಟ್ಟರು. ಈ ವೇಳೆ “ಪ್ರಜಾಪ್ರಭುತ್ವ ಅಂದ್ಮೇಲೆ ಅಭಿಪ್ರಾಯ ಭೇದ ಇರಲೇಬೇಕು” ಅಂತಾ ಸಿದ್ದರಾಮಯ್ಯ ಹೇಳಿದ್ರು.

ಅದಕ್ಕೆ “ಅಷ್ಟು ಅರ್ಥವಾದರೆ ಸಾಕು” ಎಂದು ಸಿಎಂ ಬೊಮ್ಮಾಯಿ‌ ಹೇಳೀದ್ರು. ಬಳಿಕ ಸಿದ್ದರಾಮಯ್ಯ ಮತ್ತೆ ದೆಹಲಿ ವಿಚಾರ ಮಾತನಾಡಿ.. ನಾನು ದೆಹಲಿಗೆ ಹೋಗಬೇಕು ಎಂದು ಎರಡು ಬಾರಿ ಲೋಕಸಭೆಗೆ ನಿಂತಿದ್ದೆ. ಕೊಪ್ಪಳದಲ್ಲಿ ಕಡಿಮೆ ಅಂತರದಲ್ಲಿ ಸೋತೆ ಎಂದ್ರು. ‘ಹೌದು ರಾಜೀವ್ ಗಾಂಧಿ ಅವರ ಸಾವು ಆಗದಿದ್ರೆ ನೀವು ಲೋಕಸಭೆಗೆ ಹೋಗ್ತಿದ್ರಿ, ಅವತ್ತು ಅನುಕಂಪದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ರು, ನಾವು ನೀವು ಜತೆಯಲ್ಲಿ ಇದ್ವಿ ಎಂದ ಮಧುಸ್ವಾಮಿ ಸಿದ್ದರಾಮಯ್ಯರ ಹೇಳಿಕೆಗೆ ಸಾಥ್ ನೀಡಿದ್ರು.

Source: newsfirstlive.com Source link