ಸಿಎಂ ಅಧಿಕೃತ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ಬುಡಕಟ್ಟು ಜನಾಂಗದ ನಾಲ್ವರು

ಭೋಪಾಲ್: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ತಹಸಿಲ್‍ನ ಬುಡಕಟ್ಟು ಜನಾಂಗದ ನಾಲ್ವರು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧಿಕೃತ ಹೆಲಿಕಾಪ್ಟರ್ ಪ್ರಯಾಣ ಮಾಡಿದ್ದಾರೆ.

ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ ಜಿಲ್ಲೆಯ ರಣಬೈಡಾದಿಂದ ಸೇಜವಾಡದವರೆಗೆ ಸಿಎಂ ಹೆಲಿಕಾಪ್ಟರ್‍ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣಿಸಿದ್ದಾರೆ. ಆದರೆ ಸಿಎಂ ಚೌಹಾಣ್ ಅವರು ತಮ್ಮ ಜನ ದರ್ಶನ ಯಾತ್ರೆಯ ಭಾಗವಾಗಿ ವಿಧಾನಸಭೆ ಉಪ ಚುನಾವಣೆ ಎದುರಿಸಲಿರುವ ಜೋಬತ್ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದ್ದರಿಂದ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಆಪ್ತ ಸ್ನೇಹಿತ, ಸಂಬಂಧಿ ಸಾವು

ನಾಲ್ಕು ಆದಿವಾಸಿಗಳಿಗೆ ಸಿಎಂ ಇಲ್ಲದೆ ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಯಿತು. ಏಕೆಂದರೆ ಅವರು ಚೌಹಾಣ್ ಅವರು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಸ್ತೆಯ ಮೂಲಕ ಪ್ರಯಾಣಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಬುಡಕಟ್ಟು ಜನಾಂಗದ ದರಿಯವ್ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್ ಅವರು ಹೆಲಿಕಾಪ್ಟರ್‍ನಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಿ ಕಲಾವತಿ ಭೂರಿಯಾ ನಿಧನದಿಂದ ತೆರವಾದ ಜೋಬತ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

Source: publictv.in Source link