ಕೊರೊನಾ ಎರಡನೇ ಅಲೆಯ ಕಾರಣ ಎಲ್ಲೆಡೆ ಆಸ್ಪತ್ರೆಗಳು ಭರ್ತಿಯಾಗಿವೆ ಹಾಗೇ ಆಕ್ಸಿಜನ್​ ಅಭಾವ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಸ್ಯಾಂಡಲ್​ವುಡ್ ಕೊರೊನಾ ವಾರಿಯರ್ಸ್ ಉಸಿರು ತಂಡ ರೋಗಿಗಳ ಮನೆಗೆ ಆಕ್ಸಿಜನ್ ಪೂರೈಕೆ ಮಾಡ್ತಿದ್ದಾರೆ. ಹೌದು.. ​ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಮನೆಯಲ್ಲಿಯೇ ಆಕ್ಸಿಜನ್​ ಕಾನ್ಸಂಟ್ರೇಟರ್​​​ ಯಂತ್ರಗಳ ಮೂಲಕ ಆಕ್ಸಿಜನ್​ ಪೂರೈಕೆ ಮಾಡಲಾಗ್ತಿದೆ. ಇದೀಗ ಉಸಿರು ತಂಡಕ್ಕೆ ಗಜ ಬಲ ಸಿಕ್ಕಿದೆ ಅಂತ ನ್ಯೂಸ್​ ಫಸ್ಟ್​​ಗೆ ಎಕ್ಸ್​​ಕ್ಲೂಸಿವ್​ ಆಗಿ ಮಾಹಿತಿ ಲಭ್ಯವಾಗಿದೆ.

ಕೊರೊನಾ ಕಷ್ಟದಲ್ಲಿರುವ ಸೋಂಕಿತರಿಗೆ ಇನ್ನೂ ದೊಡ್ಡ ಮಟ್ಟದಲ್ಲಿ ಸೇವೆ ಮಾಡಲು ಸಜ್ಜಾಗಿರೋ ಉಸಿರು ತಂಡದ ಜೊತೆ ಚಾಲೆಂಜಿಂಗ್​ ಸ್ಟಾರ್​ ಕೈ ಜೋಡಿಸಿದ್ದಾರೆ. ಉಸಿರು ತಂಡದ ಮಾನವೀಯ ಕೆಲಸಕ್ಕೆ ಮನಸೋತು ಸ್ಯಾಂಡಲ್​ವುಡ್​ ಗಜ ಈ ತಂಡ ಕೂಡಿಕೊಳ್ಳಲು ನಿರ್ಧರಿಸಿರೋದು ಅಂತ ಹೇಳಲಾಗ್ತಿದೆ. ಸದ್ಯ ಮೈಸೂರಿನಲ್ಲಿರುವ ಚಾಲೆಂಜಿಂಗ್​ ಸ್ಟಾರ್​ ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಬರಲಿದ್ದು, ಬೆಂಗಳೂರಿಗೆ ಬಂದ ನಂತರ ಉಸಿರು ಟೀಂ ಅಧಿಕೃತವಾಗಿ ಈ ಬಗ್ಗೆ ಅನೌನ್ಸ್ ಮಾಡಲಿದೆ.

ಅಂದ್ಹಾಗೇ, ಉಸಿರು ಟೀಮ್​ನಿಂದ ಕೊರೊನಾ ಫ್ರಂಟ್​ಲೈನ್ ವಾರಿಯರ್ಸ್​​ಗಾಗಿ ವಿಶೇಷ ಹಾಡೊಂದು ಸಿದ್ದವಾಗ್ತಿದೆ. ಈ ಹಾಡನ್ನು ಉಸಿರು ಟೀಂ ಸದಸ್ಯ ಸಂಗೀತ ನಿರ್ದೇಶಕ ಡಾ ಕಿರಣ್ ತೋಂಟಂಬೈಲು ಕಂಪೋಸ್ ಮಾಡಿದ್ರೆ, ಸಾಹಿತಿ ಕವಿರಾಜ್ ಈ ಹಾಡಿಗೆ ಪದಗಳನ್ನ ಪೋಣಿಸಿದ್ದಾರೆ. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್​ ಕಾಣಿಸಕೊಳ್ಳಲಿದ್ದಾರೆ ಅನ್ನೋ ಮಾಹಿತಿ ನ್ಯೂಸ್ ಫಸ್ಟ್​​ಗೆ ಲಭ್ಯವಾಗಿದೆ.

The post NEWSFIRST exclusive: ‘ಉಸಿರು’ ತಂಡಕ್ಕೆ ಗಜ ಬಲ; ಕೊರೊನಾಗೇ ಬಿಗ್ ಚಾಲೆಂಗ್​ appeared first on News First Kannada.

Source: newsfirstlive.com

Source link