NHAI Recruitment 2022: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ | NHAI RECRUITMENT 2022 FOR 80 MANAGERIAL POSTS CHECK SALARY AND ELIGIBILITY


NHAI Recruitment 2022: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ

NHAI Recruitment 2022

NHAI Recruitment 2022: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದಲ್ಲಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟೇಶನ್ ಮೇಲೆ ಮಾಡಲಾಗುತ್ತಿದೆ. ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನಾಂಕ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಂಜೆ 6 ಗಂಟೆಯವರೆಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ಕಳುಹಿಸಲು ಕೊನೆಯ ದಿನಾಂಕ ಮೇ 23, 2022. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

NHAI Recruitment 2022: ಹುದ್ದೆಯ ವಿವರಗಳು
ಜನರಲ್ ಮ್ಯಾನೇಜರ್ ಟೆಕ್ನಿಕಲ್ – 23 ಹುದ್ದೆಗಳು
ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್ – 26 ಹುದ್ದೆಗಳು
ಮ್ಯಾನೇಜರ್ ಟೆಕ್ನಿಕಲ್ – 31 ಹುದ್ದೆಗಳು

NHAI Recruitment 2022: ವೇತನ
ಜನರಲ್ ಮ್ಯಾನೇಜರ್ ಟೆಕ್ನಿಕಲ್- 1 ಲಕ್ಷದಿಂದ 2 ಲಕ್ಷ 15 ಸಾವಿರವದವರೆಗೆ ವೇತನ ನೀಡಲಾಗುತ್ತದೆ.
ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್- 78 ಸಾವಿರದಿಂದ 2.20 ಲಕ್ಷದವರೆಗೆ ವೇತನ ನೀಡಲಾಗುತ್ತದೆ.
ಮ್ಯಾನೇಜರ್ ಟೆಕ್ನಿಕಲ್- 67 ಸಾವಿರದಿಂದ 2 ಲಕ್ಷದವರೆಗೆ ವೇತನ ನೀಡಲಾಗುತ್ತದೆ.

NHAI Recruitment 2022: ಶೈಕ್ಷಣಿಕ ಅರ್ಹತೆ:
ಜನರಲ್ ಮ್ಯಾನೇಜರ್ ಟೆಕ್ನಿಕಲ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಅಲ್ಲದೆ ಗ್ರೂಪ್ ಎ ಸೇವೆಯಲ್ಲಿ 14 ವರ್ಷಗಳ ಅನುಭವ ಹೊಂದಿರಬೇಕು.
ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಹೆದ್ದಾರಿಗಳು, ರಸ್ತೆಗಳು ಮತ್ತು ಸೇತುವೆಗಳಿಗೆ ಸಂಬಂಧಿಸಿದ ಮೂಲಸೌಕರ್ಯ ವಲಯದ ಯೋಜನೆಯ ಅನುಷ್ಠಾನದಲ್ಲಿ ಆರು ವರ್ಷಗಳ ಅನುಭವವನ್ನು ಹೊಂದಿರಬೇಕು.

ಅರ್ಜಿಯ ಪ್ರಿಂಟ್ ಔಟ್ ಕಳುಹಿಸಬೇಕಾದ ವಿಳಾಸ:
“DGM (HR & Admn)-IA/ IB, National Highways Authority of India Plot No.G5-&6, Sector-10, Dwarka, New Delhi-110075.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published.