Nidhhi Agerwal: ಕಾಂಡೋಮ್ ಜಾಹೀರಾತು ಶೇರ್​ ಮಾಡಿ ಟ್ರೋಲ್ ಆದ ಖ್ಯಾತ ನಟಿ | Nidhhi Agerwal Heavily trolled After shared in Durex Condom Advertisement


Nidhhi Agerwal: ಕಾಂಡೋಮ್ ಜಾಹೀರಾತು ಶೇರ್​ ಮಾಡಿ ಟ್ರೋಲ್ ಆದ ಖ್ಯಾತ ನಟಿ

ನಿಧಿ

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ನಟ/ನಟಿಯರಿಗೆ ಜಾಹೀರಾತುಗಳಲ್ಲಿ ನಟಿಸೋಕೆ ಸಾಕಷ್ಟು ಆಫರ್​ಗಳು ಬರುತ್ತವೆ. ಸಾಕಷ್ಟು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗುತ್ತಾರೆ. ಆದರೆ, ಹಣಕ್ಕಾಗಿ ಮಾಡುವ ಈ ಜಾಹೀರಾತುಗಳಿಂದ (Advertisement) ಕೆಲವರು ಸಾಕಷ್ಟು ಟ್ರೋಲ್ ಆದ ಉದಾಹರಣೆ ಕೂಡ ಇದೆ. ನಟಿ ನಿಧಿ ಅಗರ್​ವಾಲ್ (Nidhi Agerwal)​ ಇದೇ ರೀತಿಯ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಮೊದಲಿನಿಂದಲೂ ಬೋಲ್ಡ್​ ಲುಕ್​ನಲ್ಲಿ ನಿಧಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕಾಂಡೋಮ್ ಜಾಹೀರಾತು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಕಾಂಡೋಮ್​ ಜಾಹೀರಾತು ವಿಚಾರದಲ್ಲಿ ಮಡಿವಂತಿಕೆ ತೋರಿಸುತ್ತಾರೆ. ಆದರೆ, ನಿಧಿ ಅಗರ್​ವಾಲ್​ ಆ ರೀತಿ ಅಲ್ಲ. ಅವರು ಕಾಂಡೋಮ್ ಜಾಹೀರಾತು ಶೇರ್ ಮಾಡಿಕೊಂಡಿದ್ದಾರೆ.  ಅವರ ಅಭಿಮಾನಿಗಳೇ ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ನಿಧಿ ಬಣ್ಣದ ಲೋಕದ ಪ್ರಯಾಣವನ್ನು 2017ರಲ್ಲಿ ಆರಂಭಿಸಿದರು. ಇತ್ತೀಚಿನ ವರ್ಷಗಳಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ನಿಧಿ ಹುಟ್ಟಿ ಬೆಳೆದಿದ್ದು ಹೈದರಾಬಾದ್​ನಲ್ಲಿ. ತಮಿಳು, ತೆಲುಗು, ಕನ್ನಡ ಹಾಗೂ ಇತರ ಭಾಷೆಗಳನ್ನು ಅವರು ಮಾತನಾಡುತ್ತಾರೆ. ಈ ಮೊದಲು ಕ್ರಿಕೆಟರ್​ ಕೆ.ಎಲ್​. ರಾಹುಲ್​ ಜತೆ ನಿಧಿ ಡೇಟಿಂಗ್​ ನಡೆಸುತ್ತಿದ್ದರು ಎನ್ನುವ ಮಾತಿದೆ.

ಇತ್ತೀಚೆಗೆ ತಮಿಳು ನಟ ಸಿಂಬು ಜತೆ ಅವರ ಹೆಸರು ಸೇರಿಕೊಂಡಿತ್ತು. ಸಿಂಬು ಹಾಗೂ ನಿಧಿ ಪರಸ್ಪರ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಆದರೆ, ಇದನ್ನು ಇವರು ಖಚಿತಪಡಿಸಿಲ್ಲ. ಕೆಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ಸುದ್ದಿ ಹರಿದಾಡಲು ಕಾರಣ ಎನ್ನಲಾಗಿದೆ. ಇಬ್ಬರೂ ಮದುವೆ ಆಗುತ್ತಿದ್ದಾರೆ ಎನ್ನುವ ವದಂತಿ ಕೂಡ ಹರಿದಾಡಿತ್ತು. ಆದರೆ, ಅವರ ಆಪ್ತರು ಇದನ್ನು ಅಲ್ಲಗಳೆದಿದ್ದರು. ಈಗ ನಿಧಿ ಅವರು ಜಾಹೀರಾತಿನ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.

ಈ ಮೊದಲು ರಶ್ಮಿಕಾ ಮಂದಣ್ಣ ಕೂಡ ಜಾಹೀರಾತಿನ ವಿಚಾರಕ್ಕೆ ಸುದ್ದಿಯಾಗಿದ್ದರು. ಪುರುಷರ ಒಳಉಡುಪಿನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಆ್ಯಡ್​ ಕೆಟ್ಟದಾಗಿದೆ ಎಂದು ಫ್ಯಾನ್ಸ್ ಆರೋಪಿಸಿದ್ದರು. ಅಲ್ಲದೆ, ರಶ್ಮಿಕಾ ಅವರನ್ನು ಟ್ರೋಲ್ ಮಾಡಲಾಗಿತ್ತು.

TV9 Kannada


Leave a Reply

Your email address will not be published.