Nikhat Zareen: ವಿಶ್ವ ಮಹಿಳಾ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ನಿಖತ್ ಜರೀನ್ | Nikhat Zareen cripts history 5 0 victory over Thailands and clinches gold at Womens World Boxing Championships


ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖತ್ ಜರೀನ್, ಫೈನಲ್‌ನಲ್ಲಿ ಥಾಯ್ಲೆಂಡ್‌ ಎದುರಾಳಿ ವಿರುದ್ಧ ಅಮೋಘ ಹೋರಾಟ ನಡೆಸಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಭಾರತದ ನಿಖಿತ್ ಜರೀನ್ (Nikhat Zareen) ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್​​ನಲ್ಲಿ (Womens World Boxing Championships) ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಟರ್ಕಿಯ ಇಸ್ತಾಂಬುಲ್​​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಎದುರಾಳಿ ವಿರುದ್ಧ ಭರ್ಜರಿ ಜಯ ಸಾಧಿಸಿ, ಹೊಸದೊಂದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್​​​ ಎದುರಾಳಿ ವಿರುದ್ಧ ಭರ್ಜರಿ 5-0 ಅಂತರದಿಂದ ಗೆಲುವು ಸಾಧಿಸಿ ವಿಶ್ವ ಬಾಕ್ಸಿಂಗ್ ಚಾಂಪಿಯನ್​​ಶಿಪ್​​ನಲ್ಲಿ ಚಿನ್ನದ (Gold) ಪದಕ ಗೆದ್ದ ಮೇರಿ ಕೋಮ್​, ಸರಿತಾ ದೇವಿ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಐದನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಿಖಿತ್ ಅವರ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಕೊಂಡಾಡಿದ್ದಾರೆ.

ಈ ಟೂರ್ನಿಯುದ್ದಕ್ಕೂ ನಿಖಿತ್ ತಮ್ಮ ಎಲ್ಲ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಫೈನಲ್ ತಲುಪಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಅವರು 30-27, 29-28, 29-28, 30-27, 29-28 ರಿಂದ ಥಾಯ್ಲೆಂಡ್ ಬಾಕ್ಸರ್‌ ಎದುರು ಮೇಲುಗೈ ಸಾಧಿಸಿದರು. ಮೇರಿ ಕೋಮ್ ಆರು ಸಲ (2002, 2005, 2006, 2008, 2010 ಮತ್ತು 2018) ಚಿನ್ನದ ಜಯಿಸಿದ್ದರು. ಸರಿತಾ ದೇವಿ (2006), ಆರ್‌.ಎಲ್. ಜೆನಿ (2006) ಮತ್ತು ಕೆ.ಸಿ. ಲೇಖಾ (2006) ತಲಾ ಒಂದು ಬಾರಿ ಈ ಟೂರ್ನಿಯಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಇದೀಗ ನಿಖತ್ ಅವರ ಸಾಲಿಗೆ ಸೇರಿದ್ದಾರೆ.

ಇದಕ್ಕೂ ಮುನ್ನ ತೆಲಂಗಾಣ ಬಾಕ್ಸರ್ ಬುಧವಾರ ನಡೆದಿದ್ದ ಸೆಮಿಫೈನಲ್​ನಲ್ಲಿ ಬ್ರೆಜಿಲ್‌ನ ಕ್ಯಾರೊಲಿನ್ ಡಿ ಅಲ್ಮೇಡಾ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಇದೀಗ ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖತ್ ಜರೀನ್, ಫೈನಲ್‌ನಲ್ಲಿ ಥಾಯ್ಲೆಂಡ್‌ ಎದುರಾಳಿ ವಿರುದ್ಧ ಅಮೋಘ ಹೋರಾಟ ನಡೆಸಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ನಿಖತ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ ಬಾಕ್ಸರ್‌ ಗಿಂತ ಹೆಚ್ಚು ಪಂಚ್‌ಗಳನ್ನು ಹೊಡೆದಿದ್ದರಿಂದ ಎಲ್ಲಾ ತೀರ್ಪುಗಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಜಿಟ್‌ಪಾಂಗ್ 3-2 ರಿಂದ ಮುನ್ನಡೆ ಸಾಧಿಸಿದ್ದರು. ಅಂತಿಮ ಸುತ್ತಿನಲ್ಲಿ, ನಿಖಾತ್ ತನ್ನ ಎದುರಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, 5-0 ಅಂತರದೊಂದಿಗೆ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.

Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು!

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಹೋದ ಫೆಬ್ರುವರಿಯಲ್ಲಿ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ ದಾಖಲೆ ಮಾಡಿದ್ದರು. ನಿಖತ್ ಜರೀನ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಈ ಚಾಂಪಿಯನ್‍ಶಿಪ್‍ನಲ್ಲಿ 1 ಚಿನ್ನದ ಪದಕದೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದ್ದಾರೆ. ಮನೀಶಾ ಮೌನ್ 57 ಕೆಜಿಯಲ್ಲಿ ಕಂಚು ಗೆದ್ದಿದ್ದರೆ, ಪರ್ವೀನ್ ಹೂಡಾ ಕೂಡ 63 ಕೆಜಿಯಲ್ಲಿ ಭಾರತಕ್ಕೆ ಎರಡನೇ ಕಂಚಿನ ಪದಕವನ್ನು ಗೆದ್ದಿದ್ದಾರೆ.

TV9 Kannada


Leave a Reply

Your email address will not be published. Required fields are marked *