Nirmala Sitharaman: ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಸ್ವಾವಲಂಬಿಗಳಾಗಲು ಸಚಿವೆ ನಿರ್ಮಲಾ ಕರೆ | FM Nirnmala Sitharaman Suggests To Reduce Import Dependency Of Essential Goods And Become More Reliant


Nirmala Sitharaman: ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಸ್ವಾವಲಂಬಿಗಳಾಗಲು ಸಚಿವೆ ನಿರ್ಮಲಾ ಕರೆ

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

ಆಮದು ವಸ್ತುಗಳು, ಅದರಲ್ಲೂ ವಿಶೇಷವಾಗಿ ಅಗತ್ಯ ವಸ್ತುಗಳಿಗಾಗಿ ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು ಹಾಗೂ ಹೆಚ್ಚು ಸ್ವಾವಲಂಬಿಗಳಾಗಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಪೂರೈಕೆಗೆ ಸಮಸ್ಯೆ ಆದ ಮೇಲೆ ಇದು ಹೆಚ್ಚಾಗಿದೆ. ಸಿಐಐ ಬುಧವಾರದಂದು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ನಿರ್ಮಲಾ, ದೇಶವು ಜಾಗತಿಕ ಮೌಲ್ಯದ ಸರಣಿಯ ಜತೆಗೆ ಜೋಡಣೆ ಆಗಲು ಬಯಸುತ್ತಿದ್ದರೂ ಅವುಗಳಿಂದ ಎದುರಾಗುವ ಅಪಾಯವನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಆರ್ಥಿಕತೆ ಬಗ್ಗೆ ಮಾತನಾಡಿದ ಸಚಿವೆ, ಕೊರೊನಾ ಬಿಕ್ಕಟ್ಟಿನಿಂದ ಅದು ತೀಕ್ಷ್ಣವಾಗಿ ಚೇತರಿಕೆ ಕಂಡಿರುವುದರಿಂದಲೇ ಪಾರಮ್ಯವನ್ನು ಅಂದಾಜು ಮಾಡಬಹುದು ಎಂದಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹೊರತಾಗಿಯೂ ಈಗಲೂ ಭಾರತದ ಆರ್ಥಿಕತೆಯು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಿದೆ ಎಂದು ಹೇಳಿದ್ದಾರೆ. ಬೆಳೆಯುತ್ತಿರುವ ಆರ್ಥಿಕ ಚಟುವಟಿಕೆಗೆ ವಾಹನಗಳ ಮಾರಾಟ ಸಹ ಒಂದು ಪ್ರಮುಖ ಸೂಚಕ. ಅದು ಇಳಿಕೆಯಲ್ಲಿ ಇದ್ದರೂ ಅದಕ್ಕೆ ಕಾರಣ ಸೆಮಿಕಂಡಕ್ಟರ್​ನ ಕೊರತೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

“ಸೆಮಿಕಂಡಕ್ಟರ್ ಕೊರತೆ ಮತ್ತು ಶಿಪ್ಪಿಂಗ್ ಕಂಟೇನರ್ ಕೊರತೆ ಇರದಿದ್ದಲ್ಲಿ ಭಾರತದಲ್ಲಿ ವಾಹನ ಮಾರಾಟವು ಉತ್ತಮವಾಗಿರುತ್ತಿತ್ತು,” ಎಂದು ನಿರ್ಮಲಾ ಹೇಳಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಸಚಿವೆ, ಮೂಲಸೌಕರ್ಯದ ಮೇಲಿನ ಖರ್ಚು ಪ್ರಮುಖ ವಿಚಾರ ಆಗಿದ್ದು, ಸರ್ಕಾರದ ಎಲ್ಲ ಇಲಾಖೆಗಳು ಆ ಬಗ್ಗೆ ಗಮನ ಹರಿಸುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ: Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ

TV9 Kannada


Leave a Reply

Your email address will not be published. Required fields are marked *