Nisha Dahiya: ನನಗೆ ಯಾರೂ ಶೂಟ್ ಮಾಡಿಲ್ಲ, ಸುರಕ್ಷಿತವಾಗಿದ್ದೇನೆ; ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ | Nisha Dahiya Murder Not True National Level Wrestler Nisha Dahiya Clarifies After Reports Of Her Being Shot Dead


Nisha Dahiya: ನನಗೆ ಯಾರೂ ಶೂಟ್ ಮಾಡಿಲ್ಲ, ಸುರಕ್ಷಿತವಾಗಿದ್ದೇನೆ; ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

ನಿಶಾ ದಹಿಯಾ

ನವದೆಹಲಿ: 5 ದಿನಗಳ ಹಿಂದಷ್ಟೇ ವಿಶ್ವ ಚಾಂಪಿಯನ್​ಶಿಪ್​ನಲ್ಲಿ (World Championship)  ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ (Nisha Dahiya) ಅವರಿಗೆ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂಬ ಸುದ್ದಿಗಳು ಸಂಜೆಯಿಂದ ಹರಿದಾಡಿದ್ದವು. ಸೋನಿಪತ್​ನಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ತರಬೇತಿ ಅಕಾಡೆಮಿಯಲ್ಲಿ ನಿಶಾ ದಹಿಯಾ ಮತ್ತು ಆಕೆಯ ಸಹೋದರ ಸೂರಜ್​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಖುದ್ದು ನಿಶಾ ದಹಿಯಾ ಅವರೇ ಸ್ಪಷ್ಟನೆ ನೀಡಿದ್ದು, ನಾನು ಸುರಕ್ಷಿತವಾಗಿದ್ದೇನೆ. ನನಗೇನೂ ಆಗಿಲ್ಲ. ಗುಂಡೇಟಿನಿಂದ ಮೃತಪಟ್ಟಿರುವುದು ನಾನಲ್ಲ ಎಂದಿದ್ದಾರೆ.

ನಿಶಾ ದಹಿಯಾ ಅವರಿಗೆ ಶೂಟ್ ಮಾಡಿ ಕೊಂದ ಸುದ್ದಿ ಹರಡುತ್ತಿದ್ದಂತೆ ಆಕೆ ಕೊಲೆಯಾದ ಹರಿಯಾಣದ ಸೋನಿಪತ್​ನಲ್ಲಿರುವ ಸುಶೀಲ್ ಕುಮಾರ್ ಅಕಾಡೆಮಿಗೆ ಬೆಂಕಿ ಹಚ್ಚಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹರ್ಯಾಣದ ಸೋನೆಪತ್‌ನ ಹಲಾಲ್‌ಪುರದಲ್ಲಿರುವ ಸುಶೀಲ್ ಕುಮಾರ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಆಕೆಯ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಂದು ಸಂಜೆ ಅಪರಿಚಿತ ದುಷ್ಕರ್ಮಿಗಳು ಅವರಿಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನಿಶಾ ದಹಿಯಾ ಅವರ ತಾಯಿಗೂ ಗಾಯವಾಗಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆಕೆಯನ್ನು ರೋಹ್ಟಕ್‌ನ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ನಿಶಾ ದಹಿಯಾ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ತಾನು ಸುರಕ್ಷಿತವಾಗಿರುವುದಾಗಿ ವಿಡಿಯೋ ರಿಲೀಸ್ ಮಾಡಿರುವ ನಿಶಾ ದಹಿಯಾ, ನಾನು ಸೀನಿಯರ್ ನ್ಯಾಷನಲ್ ಮೀಟ್​ಗಾಗಿ ಉತ್ತರ ಪ್ರದೇಶದ ಗೊಂಡಾಗೆ ಬಂದಿದ್ದೇನೆ ಎಂದಿದ್ದಾರೆ. ತಮ್ಮ ಪಕ್ಕದಲ್ಲಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರನ್ನು ನಿಲ್ಲಿಸಿಕೊಂಡೇ ನಿಶಾ ದಹಿಯಾ ವಿಡಿಯೋ ಮಾಡಿದ್ದಾರೆ.

ಸಾಕ್ಷಿ ಮಲಿಕ್ ಕೂಡ ನಿಶಾ ದಹಿಯಾ ಜೊತೆಗಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಆಕೆ ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ಕುಸ್ತಿ U-23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ವಿಭಾಗದಲ್ಲಿ ನಿಶಾ ದಹಿಯಾ ಕಂಚಿನ ಪದಕವನ್ನು ಪಡೆದಿದ್ದರು. ಆಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ: World Championship: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಅನ್ಶು ಮಲಿಕ್

Chhatrasal Stadium Murder Case ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಣೆ

TV9 Kannada


Leave a Reply

Your email address will not be published. Required fields are marked *