Niveditha Gowda: ‘ವಿಕ್ರಾಂತ್ ರೋಣ’ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ ನಿವೇದಿತಾ ಗೌಡ-ಚಂದನ್ | Niveditha Gowda And Chandan Shetty Dance for Ra Ra Rakkamma Song


Niveditha Gowda: ‘ವಿಕ್ರಾಂತ್ ರೋಣ’ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ ನಿವೇದಿತಾ ಗೌಡ-ಚಂದನ್

ನಿವೇದಿತಾ-ಚಂದನ್

ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ನಿವೇದಿತಾ ಅವರು ನಾನಾ ರೀತಿಯ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾ (Vikrant Rona Movie) ರಿಲೀಸ್​ಗೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಆಗಲೇ ಸಿನಿಮಾದ ಕ್ರೇಜ್ ಜೋರಾಗಿದೆ. ಎಲ್ಲ ಕಡೆಗಳಲ್ಲೂ ಸಿನಿಮಾ ಬಗ್ಗೆ ಟಾಕ್ ಶುರುವಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ‘ರಾ ರಾ ರಕ್ಕಮ್ಮಾ’ ಹಾಡು (Ra Ra Rakkamma Song) ಯೂಟ್ಯೂಬ್​ನಲ್ಲಿ ಲಕ್ಷಲಕ್ಷ ವೀವ್ಸ್​ ಪಡೆಯುತ್ತಿದೆ. ಪರ ಭಾಷೆಗಳಲ್ಲೂ ಹಾಡಿಗೆ ಮೈಲೇಜ್ ಸಿಕ್ಕಿದೆ. ಈ ಹಾಡಿಗೆ ಅನೇಕ ಸೆಲೆಬ್ರಿಟಿಗಳು ರೀಲ್ಸ್ ಮಾಡುತ್ತಿದ್ದಾರೆ. ಈಗ ನಿವೇದಿತಾ ಗೌಡ  ಹಾಗೂ ಚಂದನ್ ಗೌಡ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳ ಬಳಿ ಈ ಹಾಡಿನ ಸ್ಟೆಪ್ಸ್​ ಪ್ರಯತ್ನಿಸುವಂತೆ ಕೋರಿದ್ದಾರೆ ಚಂದನ್.

ಚಂದನ್ ಹಾಗೂ ನಿವೇದಿತಾ ಗೌಡ ಇಬ್ಬರೂ ‘ಬಿಗ್ ಬಾಸ್’​ ಮನೆಯಲ್ಲಿ ಭೇಟಿ ಆದವರು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಿತು. ನಂತರ ಪರಸ್ಪರ ಪ್ರೀತಿಸೋಕೆ ಶುರು ಮಾಡಿದರು. ಈಗ ಮದುವೆ ಆಗಿ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ನಿವೇದಿತಾ ಅವರು ನಾನಾ ರೀತಿಯ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳನ್ನು ಖುಷಿಪಡಿಸಲು ವಿವಿಧ ಫೋಟೋ ಹಾಗೂ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ.

‘ವಿಕ್ರಾಂತ್​ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮಾ’ ಹಾಡಿಗೆ ಚಂದನ್ ಹಾಗೂ ನಿವೇದಿತಾ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ‘ಈ ಸ್ಟೆಪ್ ಪ್ರಯತ್ನಿಸಿ. ಸಖತ್ ಫನ್ ಆಗಿದೆ’ ಎಂದು ಬರೆದುಕೊಂಡಿದ್ದಾರೆ ಚಂದನ್. ಈ ಡ್ಯಾನ್ಸ್​ಗೆ ಫ್ಯಾನ್ಸ್ ಖುಷ್ ಆಗಿದ್ದಾರೆ. ‘ಡ್ಯಾನ್ಸ್​​ ಸಖತ್ ಆಗಿ ಮಾಡುತ್ತಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಕ್ಯೂಟ್ ಕಪಲ್’ ಎಂದು ಬರೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *