No Money for Terror: ಭಯೋತ್ಪಾದನೆಯಿಂದ ಸಾವಿರಾರು ಅಮೂಲ್ಯ ಜೀವ ಕಳೆದುಕೊಂಡಿದ್ದೇವೆ; ಮೋದಿ – PM Narendra Modi speech in No Money for Terror global meet in Kannada said All Terror Attacks Deserve Equal Outrage kannada latest news


ಭಯೋತ್ಪಾದನೆಯಿಂದಾಗಿ ನಾವು ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದನೆಯು ಇಡೀ ಮಾನವೀಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿ: ಭಯೋತ್ಪಾದನೆಯಿಂದಾಗಿ (Terrorism) ನಾವು ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದನೆಯು ಇಡೀ ಮಾನವೀಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ನವದೆಹಲಿಯಲ್ಲಿ ನಡೆಯುತ್ತಿರುವ ‘ಭಯೋತ್ಪಾದನೆಗೆ ಹಣಕಾಸು ಬೇಡ’ (NMFT) ಕುರಿತ ಮೂರನೇ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಒಬ್ಬ ಭಯೋತ್ಪಾದಕನನ್ನು ಶಸ್ತ್ರಾಸ್ತ್ರಗಳ ಮೂಲಕ ನಾಶಗೊಳಿಸಬಹುದು. ಆದರೆ, ಇದು ಕೇವಲ ತಾತ್ಕಾಲಿಕ ಕ್ರಮವಾಗಬಹುದಷ್ಟೆ. ಇದರಿಂದ ಭಯೋತ್ಪಾದನೆಯ ಸಂಪೂರ್ಣ ನಾಶ ಅಸಾಧ್ಯ. ಭಯೋತ್ಪಾದನೆಗೆ ನೀಡುವ ಹಣಕಾಸು ನೆರವಿಗೆ ತಡೆಯೊಡ್ಡಬೇಕು. ಅವರ ಹಣಕಾಸಿನ ಮೂಲಕ್ಕೆ ಅಡ್ಡಿ ಮಾಡಬೇಕು ಎಂದು ಮೋದಿ ಕರೆ ನೀಡಿದರು.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

ತಾಜಾ ಸುದ್ದಿ

TV9 Kannada


Leave a Reply

Your email address will not be published.