Nokia 2660 Flip: ನೋಕಿಯಾ 2660 ಫ್ಲಿಪ್ ಬಿಡುಗಡೆ: ಡಿಸೈನ್​ನಿಂದಲೇ ಗಮನ ಸೆಳೆಯುತ್ತಿದೆ ಈ ಫೋನ್ | Nokia 2660 Flip feature phone was launched in multiple markets check price and specs


ನೋಕಿಯಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ.

ನೋಕಿಯಾ (Nokia) ಕಂಪನಿಯ ಫೋನ್​ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ, ಒನ್​ಪ್ಲಸ್​ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್​​ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ನೋಕಿಯಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

  1. ನೋಕಿಯಾ 2660 ಫ್ಲಿಪ್ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದೆ. ಯುರೋಪ್​ನಲ್ಲಿ ರಿಲೀಸ್ ಆಗಿರುವ ಈ ಫೋನಿನ ಬೆಲೆ EUR 64.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 5,000 ರೂ. ಎನ್ನಬಹುದು.
  2. ಈ ಫೋನ್ ಕ್ಲಾಮ್‌ಶೆಲ್ ತರಹದ ವಿನ್ಯಾಸವನ್ನು ಹೊಂದಿದ್ದು ಡ್ಯುಯಲ್ಸಿಮ್ ಬೆಂಬಲದೊಂದಿಗೆ ಬರುತ್ತದೆ. ಹ್ಯಾಂಡ್ಸೆಟ್ ಎರಡು ಡಿಸ್ ಪ್ಲೇಗಳನ್ನು ಹೊಂದಿದೆ. ಇದರ ಒಳಭಾಗದಲ್ಲಿ 2.8-ಇಂಚಿನ QVGA ಡಿಸ್ ಪ್ಲೇ ಮತ್ತು ಹಿಂಭಾಗದಲ್ಲಿ 1.77-ಇಂಚಿನ QQVGA ಡಿಸ್ ಪ್ಲೇ ನೀಡಲಾಗಿದೆ.
  3. ನೋಕಿಯಾ 2660 ಫ್ಲಿಪ್ ಫೋನಿನ ಅದ್ಭುತ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ. ಈ ಸಾಧನವು 1,450mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು ಸ್ಟ್ಯಾಂಡ್‌ಬೈನಲ್ಲಿ 20 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
  4. Unisoc T107 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128MB ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 32ಜಿಬಿ ಸಂಗ್ರಹಣೆಯನ್ನು ವಿಸ್ತರಿಸಬಹುದು.
  5. ಇದು ಇಯರ್‌ಫೋನ್‌ಗಳನ್ನು ಪ್ಲಗ್ ಮಾಡದೆಯೇ ಕಾರ್ಯನಿರ್ವಹಿಸುವ ಎಫ್‌ಎಂ ರೇಡಿಯೊವನ್ನು ಹೊಂದಿದೆ. ಫೋನ್ MP3 ಪ್ಲೇಯರ್ ಮತ್ತು VGA ಕ್ಯಾಮೆರಾವನ್ನು ಸಹ ಹೊಂದಿದೆ. 0.3 ಮೆಗಾಫಿಕ್ಸೆಲ್​ನ ರಿಯರ್ ಕ್ಯಾಮೆರಾದೊಂದಿಗೆ ಎಲ್​ಇಡಿ ಫ್ಲ್ಯಾಶ್ ನೀಡಲಾಗಿದೆ.

ನೋಕಿಯಾ 8210 4G ಬಿಡುಗಡೆ:

TV9 Kannada


Leave a Reply

Your email address will not be published. Required fields are marked *