Nokia G21: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬಜೆಟ್ ಬೆಲೆಯ ನೋಕಿಯಾದ ಹೊಸ ಸ್ಮಾರ್ಟ್​ಫೋನ್: ಏನು ವಿಶೇಷತೆ? | Nokia G21 has been launched in two memory and two colour configurations


Nokia G21: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬಜೆಟ್ ಬೆಲೆಯ ನೋಕಿಯಾದ ಹೊಸ ಸ್ಮಾರ್ಟ್​ಫೋನ್: ಏನು ವಿಶೇಷತೆ?

Nokia G21

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆ ಇಂದು ತುಂಬಾನೆ ವಿಶಾಲವಾಗಿದೆ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ ಹೀಗೆ ಅನೇಕ ಬ್ರ್ಯಾಂಡ್​ಗಳು ಹುಟ್ಟುಕೊಂಡಿದ್ದು ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿವೆ. ಹೀಗಿರುವಾಗ ಚೀನಾ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳ ನಡುವೆ ತನ್ನದೇ ಆದ ವಿಶೇಷ ಸ್ಥಾನ ಉಳಿಸಿಕೊಂಡಿರುವ ನೋಕಿಯಾ ಕಂಪನಿ ಆಗಾಗ ವಿಶೇಷ ಫೋನ್​ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ನೋಕಿಯಾ ಕಂಪನಿ ಹೊಸ ನೋಕಿಯಾ ಜಿ21 (Nokia G21) ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.5-ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಯುನಿಸೊಕ್ T606 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಬಲಿಷ್ಠವಾದ 5050mAh ಸಾಮರ್ಥ್ಯದ ಬ್ಯಾಟರಿ ಪವರ್ ನೀಡಲಾಗಿದೆ. ಇದು ಬಜೆಟ್ ಬೆಲೆಗೆ ಸಿಗುತ್ತಿದೆ ಎಂಬುವು ವಿಶೇಷ.

ನೋಕಿಯಾ G21 ಸ್ಮಾರ್ಟ್‌ಫೋನ್‌ ಬೆಲೆ EUR 170, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 14,577 ರೂ. ಎನ್ನಬಹುದು. ಇದು ನಾರ್ಡಿಕ್ ಬ್ಲೂ ಮತ್ತು ಡಸ್ಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ, ಈ ಫೋನ್ ವಿದೇಶದಲ್ಲಿ ಬಿಡುಗಡೆ ಆಗಿದ್ದು ಸದ್ಯದಲ್ಲೇ ಭಾರತದಲ್ಲೂ ಈ ಸ್ಮಾರ್ಟ್​ಫೋನ್ ಅನಾವರಣಗೊಳ್ಳಲಿದೆಯಂತೆ.

ಈ ಸ್ಮಾರ್ಟ್‌ಫೋನ್‌ 1,600×720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.  ಯುನಿಸೊಕ್ T606 ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ವಿಶೇಷವಾಗಿ ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡು ಮತ್ತು ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ನೋಕಿಯಾ G21 ಸ್ಮಾರ್ಟ್‌ಫೋನ್‌ 5,050mAh ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, 4G, ಬ್ಲೂಟೂತ್ v5, GPS, A-GPS, Beidou, ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ

Laptops under 30000: 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

TV9 Kannada


Leave a Reply

Your email address will not be published. Required fields are marked *