Notorious Rowdy Silent Sunil advises people to stay away from rowdyism and settle issues through dialogue! video story in Kannada | Pigeon Tournament: ಜಗಳ-ತಂಟೆ ಬೇಡ ಕಣ್ರಯ್ಯ, ಪರಸ್ಪರ ಮಾತುಕತೆ ಮೂಲಕ ಜಗಳ ಬಗೆಹರಿಸಿಕೊಳ್ಳಿ ಅಂತ ಸಲಹೆ ನೀಡಿದ್ದು ಕುಖ್ಯಾತ ರೌಡಿ ಸೈಲೆಂಟ್ ಸುನೀಲ!


ಸ್ವರ್ಗಸ್ಥ ಡಾನ್ ಗಳಾದ ಕೊತ್ವಾಲ ರಾಮಚಂದ್ರ ಮತ್ತು ಜಯರಾಜ್ ಮೊದಲಾದವರ ಜಮಾನಾದಲ್ಲೂ ಅವುಗಳನ್ನು ಆಯೋಸಿಲಾಗುತಿತ್ತು ಮತ್ತು ಆ ಮಹಾನುಭಾವರು ಕೂಡ ಭಾಗವಹಿಸುತ್ತಿದ್ದರಂತೆ.

ಬೆಂಗಳೂರು:  ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಅಂತ ಕನ್ನಡದಲ್ಲಿ ಮಾತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿದ್ದ ಪಾರಿವಾಳ ಟೂರ್ನಮೆಂಟ್ (pigeon Tournament) ಒಂದರಲ್ಲಿ ಪ್ರಾಯಶಃ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಖ್ಯಾತ ರೌಡಿ ಸೈಲೆಂಟ ಸುನೀಲ (Silent Sunil) ಅಲ್ಲಿದ್ದ ಜನರಿಗೆ ಯಾವುದೆ ಜಗಳ-ತಂಟೆ ಅಂತ ಮಾಡಿಕೊಳ್ಳಬೇಡಿ, ಯಾವುದೇ ತಕರಾರಿದ್ದರೂ ಮುಖಾಮುಖಿಯಾಗಿ ಕೂತು ಮಾತುಕತೆಯ (dialogue) ಮೂಲಕ ಪರಿಹರಿಸಿಕೊಳ್ಳಬಹುದು ಅಂತ ಹೇಳುತ್ತಿದ್ದಾನೆ! ಬೆಂಗಳೂರು ಮಹಾನಗರದಲ್ಲಿ ಅಂದಕಾಲತ್ತಿಲ್ ಪಾರಿವಾಳ ಟೂರ್ನಮೆಂಟ್ ಗಳನ್ನು ಆಯೋಜಿಸಲಾಗುತ್ತದೆ. ಸ್ವರ್ಗಸ್ಥ ಡಾನ್ ಗಳಾದ ಕೊತ್ವಾಲ ರಾಮಚಂದ್ರ ಮತ್ತು ಜಯರಾಜ್ ಮೊದಲಾದವರ ಜಮಾನಾದಲ್ಲೂ ಅವುಗಳನ್ನು ಆಯೋಸಿಲಾಗುತಿತ್ತು ಮತ್ತು ಆ ಮಹಾನುಭಾವರು ಕೂಡ ಭಾಗವಹಿಸುತ್ತಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *