NSE ಮಾಜಿ ಎಂಡಿಗೂ ಬಾಬಾಗೂ ಸಂಬಂಧವೇನು..? ಚೈತ್ರ ಸೀಕ್ರೇಟ್​​ ಮಾಹಿತಿ ರವಾನಿಸಿದ್ದೇಕೆ?


ಯಾವುದೇ ಕಥೆಯಾದ್ರೂ ಅದಕ್ಕೆ ಟ್ವಿಸ್ಟ್‌ಗಳು ಇರಬೇಕು. ಹಾಗೇ ಇದ್ರೆ ಮಾತ್ರ ರೋಚಕತೆ ಇರುತ್ತೆ. ನೋಡುಗರನ್ನು ತುದಿಗಾಲಿನ ಮೇಲೆ ನಿಲ್ಲಿಸುತ್ತೆ. ಇಲ್ಲಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಮಾಜಿ ಎಂಡಿಯ ರಿಯಲ್‌ ಕಥೆಯಲ್ಲಿಯೂ ಟ್ವಿಸ್ಟ್‌ಗಳು ಸಿಕ್ಕಿವೆ, ಹಾಗೇ ಆತಂಕವನ್ನು ಸೃಷ್ಟಿಸಿದೆ. ಅದು ಎಲ್ಲಿ ಅಂದ್ರೆ ನಿಗೂಢ ಬಾಬಾ ಯಾರು ಅನ್ನೋದ್ರಲ್ಲಿ. ಹೌದು, ಆಷ್ಟಕ್ಕೂ ಆ ಇ-ಮೇಲ್‌ ಬಾಬಾ ಯಾರು? ಆತ ತನ್ನ ಅಣತಿಯಂತೆ ಎನ್ಎಸ್‌ಇ ಅಲ್ಲಿ ಗಿರ್‌ಗಿಟ್ಲೆ ಹೊಡೆಸಿದ್ದು ಹೇಗೆ? ಹೇಳ್ತೀವಿ ಓದಿ.

ಸುಮಾರು ವರ್ಷಗಳಿಂದ ಬ್ಯಾಂಕಿಂಗ್​​ ಮತ್ತು ಫೈನಾನ್ಸ್​​ ಸೆಕ್ಟರ್​​ನಲ್ಲಿ ಒಂದಲ್ಲ ಒಂದು ಸ್ಕ್ಯಾಮ್​​ ನಡೆಯುತ್ತಲೇ ಇದೆ. ಐಸಿಐಸಿ ಬ್ಯಾಂಕ್​​​​​ ಚಂದ ಕೊಚ್ಚರ್ ಸ್ಕ್ಯಾಮ್​​​, ಉದ್ಯಮಿ ನೀರವ್​​ ಮೋದಿ 11 ಸಾವಿರ ಕೋಟಿ ಹಗರಣ, ಈಗ ಎಬಿಜಿ ಶಿಪ್​​ಯಾರ್ಡ್​​ 22 ಸಾವಿರ ಕೋಟಿ ಸ್ಕ್ಯಾಮ್​​ನದ್ದೇ ಸುದ್ದಿ. ಈ ಮೂರು ಹಗರಣಗಳಲ್ಲಿ ಕೇವಲ ಕಂಪನಿ ಅಧಿಕಾರಿಗಳು ಮಾತ್ರವಲ್ಲ, ಜತೆಗೆ ಹಿಮಾಲಯದ ಒಬ್ಬ ಯೋಗಿಯ ಹೆಸರೂ ಕೇಳಿ ಬಂದಿದೆ.

Oh.. Wait.. ಹೆಸರಾ? ಇಲ್ಲರಿ ಅವರಿಗೆ ಹೆಸರೇ ಇಲ್ಲ.. ಅವರು ಎಲ್ಲಿರ್ತಾರೆ? ಅವರಿಗೆ ಅಡ್ರೆಸ್ಸೇ ಇಲ್ಲ.. ಹೋಗ್ಲಿ ಅವರ ನಂಬರ್? ಅಯ್ಯೋ ಅವರೇ ಬೇಕಿದ್ರೂ ಫೋನ್ ಆಗಿ ಬಿಡ್ತಾರೆ..! ಅವರಿಗ್ಯಾಕೆ ನಂಬರ್? ಮತ್ತೆ ಅವರನ್ನು ಸಂಪರ್ಕಿಸೋದು ಹೇಗೆ? ಕೇವಲ ಇಮೇಲ್ ಮಾಡ್ಬಹುದು.. ಅವರು ಪರಮಹಂಸ.. ಅವರಿಗೆ ರೂಪ ಇಲ್ಲ.. ಆದ್ರೆ ಯಾವ ರೂಪ ಬೇಕಾದ್ರೂ ಆಗಬಹುದು.. ಎಸ್ ಇಂಥದ್ದೊಬ್ಬ ನಿಗೂಢ ವ್ಯಕ್ತಿ.. ಭಾರತದ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟಿನ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಅನ್ನ ಬರೋಬ್ಬರಿ 20 ವರ್ಷದಿಂದ ನಡೆಸ್ತಿದ್ದಾರಂತೆ.. ನಿಜಾ ರೀ.. ನಾವು ಕಾಮಿಡಿ ಮಾಡ್ತಿಲ್ಲ.. ಸದ್ಯ ಇಂಥದ್ದೊಂದು ಪ್ರಕರಣ ಈಗ ಬಯಲಿಗೆ ಬಂದಿದ್ದು ಸಿಬಿಐ ತನಿಖೆ ನಡೆಸ್ತಿದೆ.

ಇದೊಂಥರ ಥ್ರಿಲಿಂಗ್‌ ಸಿನಿಮಾಗಳಿಗೂ ಕಿಕ್ ಕೊಡೋ ಕಥೆ..ನೀವು ನಿಮ್ಮ ಜೀನದಲ್ಲಿ ನೋಡಿರೋ ಮೋಸ್ಟ್​​ ಥ್ರಿಲ್ಲಿಂಗ್ ವೆಬ್​ಸೀರೀಸ್​​​ನೇ ಬಚ್ಚಾ ಅನಿಸುವಂಥ ಕಥೆ. ನೀವು ಓದಿರಬಹುದಾದ ಅದ್ಭುತ ಎನಿಸುವಂಥ ಸೈಕಾಲಜಿಕಲ್ ಕಾದಂಬರಿಗಳನ್ನೇ ಕ್ಲೀನ್ ಬೌಲ್ಡ್ ಮಾಡಿಬಿಡಬಹುದಾದಂಥ ವಾಸ್ತವ.. ಹೌದು.. ನಿಮಗೆ ಡೌಟ್ ಬರೋದು ಸಹಜವೇ..? ಇವರು ಹೇಳ್ತಿರೋದಾದ್ರೂ ಏನಪ್ಪ ಅಂತ.

ಯಾಕಂದ್ರೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಸಂಸ್ಥೆಯ ಸಿಇಒ ಆಗಿದ್ದಂಥ ಪ್ರಬುದ್ಧ ಮಹಿಳೆಯೊಬ್ಬರ ಅದೃಶ್ಯ ಗುರುವಿನ ಅನಂತ ವಾಸ್ತವದ ಕಥನ. ಇದು ನಡೆದಿದ್ದು ಯಾವುದೋ ಯುಗದಲ್ಲಿ ಅಲ್ಲ. ಬದಲಿಗೆ ಜಸ್ಟ್​ ನಡಿತಿರೋವಂಥದ್ದು. ತನಿಖೆಗೆ ಆಹಾರವಾಗಿರೋವಂಥದ್ದು. ಎಸ್.. ಇದು ನಿಗೂಢ ಬಾಬಾನ ರಹಸ್ಯಮಯ ಉಪಸ್ಥಿತಿಯ. ವಿಚಿತ್ರ ಕಥನ.. ಎನ್‌ಎಸ್‌ಇ ಚೀಫ್‌ ಆಗಿದ್ದ. ಸದ್ಯ ಸಿಬಿಐ ತನಿಖೆ ಎದುರಿಸುತ್ತಿರೋ ಚೈತ್ರಾ ಸುಬ್ರಮಣಿಯನ್ ಅವರ ಇಮೇಲ್ ಬಿಟ್ಟುಕೊಟ್ಟ ನಂಬಲು ಅಸಾಧ್ಯವಾಗಿರೋ ಘಟನಾವೃತ್ತ.

ನಿಗೂಢ ಬಾಬಾ ಬಗ್ಗೆ ಚೈತ್ರಾ ಹೇಳಿದ್ದು ಏನು?

ಹಿಮಾಲಯದಲ್ಲಿರೋ ನಿಗೂಢ ಬಾಬಾ ಏನು ಆದೇಶ ಕೊಡ್ತಾರೋ ಅದನ್ನು ಎನ್‌ಎಸ್‌ಇ ಚೀಫ್‌ ಚೈತ್ರಾ ಚಾಚುತಪ್ಪದೇ ಜಾರಿಗೆ ತರ್ತಾ ಇದ್ರಂತೆ. ಹಾಗಂತ ಬಾಬಾನೇ ಪ್ರತ್ಯಕ್ಷವಾಗಿ ಚೈತ್ರಾಗೆ ಸಲಹೆ ಕೊಡ್ತಾ ಇರಲಿಲ್ಲ. ಬದಲಾಗಿ ಚೈತ್ರಾನೇ ಸಮಸ್ಯೆಗಳ ಮೂಟೆಯನ್ನು ಬಾಬಾ ಅಂಗಳಕ್ಕೆ ಎಸೆಯುತ್ತಿದ್ರು. ಅದರಲ್ಲಿ ಎನ್‌ಎಸ್‌ಇ ಗೌಪ್ಯ ವಿಚಾರಗಳಿಂದ ಹಿಡಿದು ವೈಯಕ್ತಿಕ ವಿಚಾರಗಳು ಸೇರಿದ್ವು. ವಾಸ್ತವದಲ್ಲಿ ಆ ಬಾಬಾಗೆ ಯಾವುದೇ ಅಡ್ರೇಸ್ ಆಗಲಿ, ಫೋನ್ ನಂಬರ್ ಆಗಲೀ ಇರಲಿಲ್ಲ..ಕೇವಲ ಮತ್ತು ಕೇವಲ ಒಂದು ಇಮೇಲ್ ಐಡಿಯೇ ಲಿಂಕ್ ಆಗಿತ್ತು.

ಆಧ್ಯಾತ್ಮಿಕ ಗುರು ಆಗಿರೋ ಅವರು ತನಗೆ ಕಳೆದ 20 ವರ್ಷಗಳಿಂದ ಪರಿಚಯ. ಅಂದಿನಿಂದಲೂ ನನಗೆ ಸಲಹೆ ನೀಡುತ್ತಾ ಮಾರ್ಗದರ್ಶನ ಮಾಡುತ್ತಾ ಬರ್ತಾ ಇದ್ದಾರೆ. ಹಿಮಾಲಯದಲ್ಲಿ ನೆಲೆಸಿರೋ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಅಪಾರ ಶಕ್ತಿಯನ್ನು ಹೊಂದಿರೋ ಆಧಾತ್ಮಿಕ ಗುರುವಾಗಿದ್ದಾರೆ.

-ಚೈತ್ರಾ ರಾಮಕೃಷ್ಣ, ಎನ್‌ಎಸ್‌ಇ ಮಾಜಿ ಎಂಡಿ

ಅದು, ಯಾವಾಗ ಎನ್‌ಎಸ್‌ಇ ಅಲ್ಲಿ ಅವ್ಯವಹಾರ ಆಗಿದೆ ಅನ್ನೋದು ಗೊತ್ತಾಗಿತ್ತೋ ಆವಾಗಲೇ ಸೆಬಿ ಅಧಿಕಾರಿಗಳು ತನಿಖೆಗೆ ಇಳಿದಿದ್ರು. ಅಂತಹ ಸಂದರ್ಭದಲ್ಲಿ ನಿಗೂಢ ಬಾಬಾ ಬಗ್ಗೆ ಚೈತ್ರಾ ಈ ರೀತಿಯಾಗಿ ಹೇಳಿಕೊಂಡಿದ್ರು. ಯೆಸ್‌, ಚಿತ್ರಾ ಪ್ರಕಾರ ಅವರು ಬರೀ ಬಾಬಾ ಅಲ್ಲ ಬದಲಿಗೆ ಪರಮಹಂಸ.. ದೇವರ ರೂಪ.. ಎನ್‌ಎಸ್‌ಇ ವಿಚಾರದಲ್ಲಿ ಸಲಹೆ ನೀಡಿದ್ದು ಅಷ್ಟೇ ಅಲ್ಲದೇ, ವೈಯಕ್ತಿಕ ವಿಚಾರದಲ್ಲಿಯೂ ಸಲಹೆ ನೀಡುತ್ತಾ ಬಂದಿದ್ದರಂತೆ ಆ ಬಾಬ. ಆಫೀಸ್‌ಗೆ ಹೇಗೆ ಬರಬೇಕು, ಆಫೀಸ್‌ನಲ್ಲಿ ಯಾವ ಅಧಿಕಾರಿಗೆ ಉನ್ನತ ಸ್ಥಾನ ನೀಡಬೇಕು…ಅನ್ನೋದರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲಿಯೂ ಬಾಬಾ ಮಾತೇ ಚಿತ್ರಾಗೆ ವೇದವಾಕ್ಯ.

ಅಲ್ಲೋಲ ಕಲ್ಲೋಲ ಸೃಷ್ಟಿಸಿರೋ ಬಾಬಾ ಯಾರು?
ನಿಜಕ್ಕೂ ಆತ ಹಿಮಾಲಯದ ಬಾಬಾನಾ?

ಹಿಮಾಲಯದಲ್ಲಿ ನಿಗೂಢ ಬಾಬಾಗಳು ಇದ್ದಾರೆ. ಅವರಿಗೆ ಅಪಾರ ಅಗೋಚರ ಶಕ್ತಿ ಇರುತ್ತೆ. ಭೂತ ಪ್ರೇತಗಳನ್ನು ಓಡಿಸುವ ಶಕ್ತಿ ಅವರಿಗೆ ಕರಗತವಾಗಿದೆ. ಅನ್ನ ಆಹಾರ ಇಲ್ಲದೇ ಹಿಮಾಲಯದಲ್ಲಿ ನೆಲೆ ನಿಂತಿದ್ದಾರೆ ಅನ್ನೋ ನಂಬಿಕೆ ಬಹುತೇಕರಲ್ಲಿ ಇದೆ. ಕೆಲವರ ಅನುಭವದ ಮಾತುಗಳನ್ನು ನಂಬುವುದಾದರೆ ಈ ಮಾತುಗಳು ಸುಳ್ಳಂತೂ ಅಲ್ಲ..ಅದು ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ, ಹಿಮಾಲಯದ ಯೋಗಿಗಳು ಮುಂತಾದ ಪುಸ್ತಕಗಳಲ್ಲೂ ಸಾಕಷ್ಟು ಕಾಣಸಿಗುತ್ತೆ.. ಬಟ್‌ ಎನ್‌ಎಸ್‌ಇ ಮಾಜಿ ಚೀಫ್‌ಗೆ ಅತಹದ್ದೆ ಒಬ್ಬ ಬಾಬಾ ಮಾರ್ಗದರ್ಶ ಮಾಡಿದ್ರಾ? ಚೈತ್ರಾ ಅವರ ಮಾತುಗಳನ್ನು ಕೇಳಿದ್ರೆ ಪಕ್ಕಾ ಹೌದು ಅನಿಸುತ್ತೆ. ಆದ್ರೆ, ಅಲ್ಲಿ ಆಗಿರೋದೇ ಬೇರೆ.. ಚಿತ್ರಾರ ನಂಬಿಕೆಯನ್ನೇ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿರೋ ಬಗ್ಗೆಯೂ ವಾಸನೆ ಬಡಿಯುತ್ತಿದೆ.

ಬಾಬಾ ಇ-ಮೇಲ್‌ನಲ್ಲಿ ಮಾಹಿತಿ ಪಡೆದಿದ್ದು ಏಕೆ?
ಎನ್‌ಎಸ್‌ಇ ಅಲ್ಲಿ ಕೆಲವರಿಗೆ ಬಡ್ತಿ ನೀಡಿಸಿದ್ದು ಯಾಕೆ?
ಒಬ್ಬ ಅಧಿಕಾರಿಗೆ ₹1.38 ಲಕ್ಷ ಸ್ಯಾಲರಿ ಕೊಡಿಸಿದ್ದೇಕೆ?
ವೈಯಕ್ತಿಕ ವಿಚಾರದಲ್ಲಿಯೂ ಸಲಹೆ ಕೊಡ್ತಾ ಇದ್ದಿದ್ದೇಕೆ?

ಯೋಗಿಗಳ ಬಗ್ಗೆ ವಿವರಿಸುತ್ತ ಸ್ವತಃ ಶ್ರೀ ಕೃಷ್ಣ ಪರಮಾತ್ಮ.. ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ- ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ಅಂದ್ರೆ ಯಾವುದನ್ನು ಸಂನ್ಯಾಸವೆನ್ನುವರೋ ಅದನ್ನೆ ಯೋಗವೆಂದು ತಿಳಿ ಪಾಂಡವ. ಬಯಕೆಗಳ ‘ಸಂನ್ಯಾಸ’ ಮಾಡದ ಯಾವನೂ ಮರ್ಮವರಿತ ಕರ್ಮಯೋಗಿಯಾಗಲಾರ ಅಂತ ಭಗವದ್ಗೀತೆಯಲ್ಲಿ ವಿವರಿಸುತ್ತಾನೆ.. ಅಷ್ಟೇ ಅಲ್ಲ.. ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ । ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ.. ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ । ಸರ್ವ ಸಂಕಲ್ಪ ಸಂನ್ಯಾಸೀ ಯೋಗಾರೂಢ ತದಾ ಉಚ್ಯತೇ ಅಂದರೆ–ಎಲ್ಲ ಕರ್ಮದ ಹೊಣೆಯನ್ನೂ ಭಗವಂತನಿಗರ್ಪಿಸಿ, ಇಂದ್ರಿಯ ವಿಷಯಗಳಲ್ಲಿ ಮತ್ತು ಕರ್ಮಗಳಲ್ಲಿ ಬಗೆಯ ನಂಟು ಕಳೆದುಕೊಂಡಾಗ ಸಾಧನೆಯ ಗುರಿ ಸೇರಿದವನೆನಿಸುತ್ತಾನೆ ಅಂತ ಕೂಡ ಕೃಷ್ಣ ಹೇಳುತ್ತಾನೆ.. ಹಾಗಿದ್ದಾಗ.. ಒಬ್ಬ ಹಿಮಾಲಯದ ಯೋಗಿ.. ಚಿತ್ರಾರಿಗೆ ಇಮೇಲ್​​ನಲ್ಲಿ ಸಲಹೆ ಕೋಡೋಕೆ ಹೇಗೆ ಸಾಧ್ಯ? ಯಾರಿಗೋ ಬಡ್ತಿ ಕೊಡಿಸೋದು.. ಸ್ಯಾಲರಿ ಹೆಚ್ಚಿಸೋಕೆ ಹೇಗೆ ಸಾಧ್ಯ? ಈ ಪ್ರಶ್ನೆಗಳನ್ನ ಅವರು ಕೇಳಿಕೊಂಡಿದ್ದರೆ ಬಹುಶಃ ಇಂಥ ಸ್ಥಿತಿ ಬರ್ತಿರಲಿಲ್ಲ ಎನಿಸುತ್ತೆ.

ಯೆಸ್‌, ನಿಗೂಢ ಬಾಬಾ ಬಗ್ಗೆ ಈ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದನ್ನು ಕೇಳಿದವರಿಗೆ ಈ ಕಥೆಯಲ್ಲಿ ಪಕ್ಕಾ ಬಿಗ್‌ ಟ್ವಿಸ್ಟ್‌ ಇದೆ ಅನ್ನೋದು ಯಾರಿಗಾದ್ರೂ ಅರಿವಾಗಿ ಬಿಡುತ್ತೆ. ಹಿಮಾಲಯದ ಬಾಬಾ ವೇಷದಲ್ಲಿ ಯಾರೋ ಯಾಮಾರಿಸಿದ್ದಾರೆ ಅನ್ನೋದು ಗೊತ್ತಾಗುತ್ತೆ. ಯೆಸ್‌, ಡೌಟೇ ಬೇಡ, ಇಲ್ಲಿ ಆತ ಹಿಮಾಲಯದ ನಿಗೂಢ ಬಾಬಾ ಅಲ್ಲವೇ ಅಲ್ಲ. ಹಾಗಾದ್ರೆ, ಬಾಬಾ ಯಾರು? ಇದೊಂದು ಬಿಲಯನ್‌ ಡಾಲರ್‌ ಪ್ರಶ್ನೆ.

ನಿಗೂಢ ಯೋಗಿ ಏನೆಲ್ಲಾ ಮಾಡ್ತಿದ್ದರು ಗೊತ್ತಾ?
ಆಧ್ಯಾತ್ಮಿಕ ಗುರು ಯೋಗಿಗೆ ರವಾನೆಯಾಗುತ್ತಿತ್ತು ರಹಸ್ಯ ಮಾಹಿತಿ

ಇತ್ತೀಚೆಗೆ ಫೆಬ್ರವರಿ 17ನೇ ತಾರೀಕಿನಂದು ಐಟಿ ಅಧಿಕಾರಿಗಳು NSE ಮಾಜಿ ಮುಖ್ಯಸ್ಥೆ ಮತ್ತ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣನ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ  ಮುಖ್ಯಸ್ಥೆ ಆಗಿದ್ದ ಚಿತ್ರಾ ರಾಮಕೃಷ್ಣನ್, ಯಾವಾಗಲೂ ಆಧ್ಯಾತ್ಮಿಕ ಗುರು ಎಂದೇ ಕರೆಯುವ ಹಿಮಾಲಯದ ಯೋಗಿ ಬಾಬಾ ಜತೆ ಸ್ಟಾಕ್ ಎಕ್ಸ್​ಚೇಂಜ್​​​​​​​ನ ಹಣಕಾಸು ಸಂಬಂಧ ರಹಸ್ಯ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಇದರ ವಾಣಿಜ್ಯ ಯೋಜನೆ ಮತ್ತು ಆಡಳಿತ ಮಂಡಳಿಯ ಅಜೆಂಡಾಗಳ ಕುರಿತು ಎಲ್ಲಾ ಮಾಹಿತಿ ಶೇರ್​​ ಮಾಡಿದ್ದರು ಎನ್ನಲಾಗಿದೆ.

ಷೇರು ವಿನಿಮಯ ಕೇಂದ್ರವನ್ನೇ ನಿಯಂತ್ರಿಸುತ್ತಿದ್ದ ಯೋಗಿ?

ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ಆಗುತ್ತಿದ್ದ ಷೇರು ವಿನಿಮಯ ಕೇಂದ್ರವನ್ನು ನಿಯಂತ್ರಣ ಮಾಡುತ್ತಿದ್ದದ್ದು ಬೇಱರು ಅಲ್ಲ ಬದಲಿಗೆ ಈ ಹಿಮಾಲಯದ ಯೋಗಿ. ಈ ಯೋಗಿ ಕೈಗೊಂಬೆ ಆಗಿದ್ದ ಚಿತ್ರಾ ರಾಮಕೃಷ್ಣನ್​​​​ ಆತ ಹೇಳಿದಂಗೆ ಕೇಳುತ್ತಿದ್ದರು.

ಅನುಭವ ಇಲ್ಲದ ವ್ಯಕ್ತಿ ಸಲಹೆಗಾರನಾಗಿ ನೇಮಕ

ಹಿಮಾಲಯದ ಯೋಗಿಯ ಪ್ರಭಾವ ಚಿತ್ರ ರಾಮಕೃಷ್ಣನ್ ಮೇಲೆ ಭಾರೀ ಇತ್ತು. ಹೀಗಾಗಿ ಷೇರುಪೇಟೆಯ ಬಗ್ಗೆ ಯಾವುದೇ ಅನುಭವ ಇಲ್ಲದ ಆನಂದ್​​​​ ಸುಬ್ರಮಣಿಯನ್​​ ಎಂಬಾತನನ್ನು NSE ಅಡ್ವೈಸರ್​​ ಆಗಿ ನೇಮಿಸಿದ್ದರು. ಈ ವ್ಯಕ್ತಿಗೆ ಪ್ರತಿ ವರ್ಷ ಸಂಬಳ ಜಾಸ್ತಿ ಮಾಡುತ್ತಿದ್ದರು. ಕೆಲಸ ಮಾಡದಿದ್ದರೂ ಇವರಿಗೆ ಎ ಗ್ರೇಡ್​​ ಸಿಗುತ್ತಿತ್ತು.

ಚೈತ್ರಾ ರಾಮಕೃಷ್ಣನ್​​ಗೆ ಭಾರೀ ದಂಡ

ಷೇರು ವಿನಿಮಯ ಕೇಂದ್ರದ ಹಣಕಾಸು ಡೇಟಾ, ಡೆವಿಡೆಂಡ್, ಆರ್ಥಿಕ ಪ್ರಗತಿ ಸೇರಿ ಪ್ರತಿಯೊಂದು ಮಾಹಿತಿಯೂ ಯೋಗಿಗೆ ಗೊತ್ತಿತ್ತು. ಇಲ್ಲಿ ವಿಹಿವಾಟಾಗೋ ಹಣಕಾಸು ಬಗ್ಗೆ ಊಹಿಸಲು ಸಾಧ್ಯವಿಲ್ಲ. ಆದರೆ, ಈ ಯೋಗಿ ಸ್ಕ್ಯಾಮ್​​ ಮತ್ರ ಇಡೀ ಷೇರುಮಾರುಕಟ್ಟೆಯ ತಳಹದಿಯನ್ನೇ ಅಲುಗಾಡಿಸಿದೆ. ಎಷ್ಟೋ ಸಾವಿರ ಕೋಟಿ ಸ್ಕ್ಯಾಮ್​​ ನಡೆದಿದ್ದು, ಈಗ ಚಿತ್ರ ರಾಮಕೃಷ್ಣನ್​​ಗೆ ಭಾರೀ ದಂಡ ವಿಧಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆ ಬೃಹತ್ ಮೊತ್ತದ ದಂಡ ಹಾಕಲಾಗಿದೆ. ಸೆಕ್ಯುರಿಟೀಸ್ ಆಂಡ್​​ ಎಕ್ಸ್​​ಚೇಂಜ್​​​​ ಬೋರ್ಡ್ ಆಫ್ ಇಂಡಿಯಾ NSE ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್​​​ಗೆ 3 ಕೋಟಿ ಮತ್ತು ಆನಂದ್​ ಸುಬ್ರಮಣಿಯನ್​​ಗೆ 2 ಕೋಟಿ ರೂಪಾಯಿ ದಂಡ ವಿಧಿಸಿದೆ.

ಚೈತ್ರಾ ರಾಮಕೃಷ್ಣನ್ NSE ಎಂಡಿ ಆಗಿದ್ದು ಯಾವಾಗ?

ಚಿತ್ರಾ ರಾಮಕೃಷ್ಣನ್ 2013- 2016 ಮಧ್ಯೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​​​ ಆಡಳಿತ ನಿರ್ದೇಶಕಿಯಾಗಿದ್ದರು. ನಂತರ ಸಿಇಒ ಆಗಿ ಕಾರ್ಯನಿರ್ವಹಿಸಿದರು. ಬಳಿಕ ವೈಯಕ್ತಿಕ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.

ಸಿಬಿಐ ಎಂಟ್ರಿಯಿಂದ ತನಿಖೆಗೆ ಬಂತು ಬಲ
ನಿಗೂಢ ಬಾಬಾ ಯಾರು ಅನ್ನೋದು ಶೀಘ್ರವೇ ಬಯಲು

ಈ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಶೇರ್‌ ಮಾರುಕಟ್ಟೆಯಲ್ಲಿರೋ ಕಂಪನಿಗಳಿಗೆ, ಗ್ರಾಹಕರಿಗೆ ಚಿಂತೆಯನ್ನು ಉಂಟುಮಾಡಿದೆ. ಇದೀಗ ಈ ವಿಚಾರದಲ್ಲಿ ಸಿಬಿಐ ಎಂಟ್ರಿಯಾಗಿದೆ. ಎನ್‌ಎಸ್‌ಇ ಮಾಜಿ ಎಂಡಿ ಚೈತ್ರಾ ವಿಚಾರಣೆ ನಡೆಸಿ ಮಾಹಿತಿಯನ್ನು ಕಲೆಹಾಕಿದ್ದಾರೆ. ಹೀಗಾಗಿ ಈ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ನಿಗೂಢ ಬಾಬಾ ಯಾರು ಅನ್ನೋದನ್ನು ಶೀಘ್ರವೇ ಬಯಲಾಗುವ ಸಾಧ್ಯತೆಯೂ ಇದೆ. ಆದಷ್ಟು ಬೇಗ ಆ ಕೆಲಸ ಆಗಬೇಕು ಅನ್ನೋದೆ ಎಲ್ಲರ ಆಶಯ

ದೇಶ ವಿರೋಧಿಗಳ ಕೈಗೆ ಮಾಹಿತಿ ಸಿಕ್ಕಿದ್ದರೆ ಏನು ಗತಿ?

303 ಲಕ್ಷ ಕೋಟಿ ಮೌಲ್ಯದ ಎನ್‌ಎಸ್‌ಇ. ಸುಮಾರು 2 ಸಾವಿರಕ್ಕೂ ಹೆಚ್ಚು ಕಂಪನಿಗಳು ಶೇರು ಹೊಂದಿವೆ. ಹೀಗಾಗಿದ್ದಾಗ ಯಾವುದೋ ನಿಗೂಢ ಬಾಬಾ ಗೌಪ್ಯ ಮಾಹಿತಿಯನ್ನು ಪಡೆಯುತ್ತಾನೆ ಅಂದ್ರೆ ಏನು ಅರ್ಥ? ಚೈತ್ರಾ ಅವರು ಅಧಿಕಾರದ ಅವಧಿಯಲ್ಲಿ ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದಾರೆ. ಅದನ್ನು ಸೆಬಿ ಅಧಿಕಾರಿಗಳ ತಂಡವೇ ಹೇಳಿದೆ. ಒಮ್ಮೆ ಆ ಮಾಹಿತಿ ದೇಶವಿರೋಧಿಗಳಿಗೆ, ವಿದೇಶದ ದುಷ್ಟ ಶಕ್ತಿಗಳಿಗೆ ಸಿಕ್ಕರೇ ಏನಾಗಬೇಡ? ಹೌದು, ದುಷ್ಟ ಶಕ್ತಿಗಳು ಅಂತಹವೊಂದು ಸನ್ನಿವೇಶವನ್ನೇ ಎದುರು ನಾಡ್ತಾ ಇರ್ತಾರೆ. ಒಮ್ಮೆ ಅವರ ಕೈಗೆ ಮಾಹಿತಿ ಸಿಕ್ಕರೇ ಶೇರು ಮಾರುಕಟ್ಟೆಯನ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡ್ತಾರೆ. ಇನ್ನು 2013 ರಿಂದ 2016 ಅವಧಿಯಲ್ಲಿ ಹಾಗೇ ಆಗಿರೋ ಸಾಧ್ಯತೆ ಇದೆಯಾ? ಅಂಥ ಪ್ರಶ್ನೆ ಕೂಡ ಹಲವರಲ್ಲಿ ಮೂಡುತ್ತಿದೆ.

ಆಫೀಸ್‌ನಲ್ಲೇ ಇದ್ರಾ ನಿಗೂಢ ಬಾಬಾ?
ಆನಂದ್‌ ನಾರಾಯಣ್ ಆಗಿದ್ನಾ ನಿಗೂಢ ಬಾಬಾ?

ಹಲವು ಸಿನಿಮಾಗಳಲ್ಲಿ ಹೀರೋ ವಿಲನ್ ಬೇಟೆಗೆ ಊರೆಲ್ಲಾ ಸುತ್ತಾಡುತ್ತಾನೆ. ಕೊನೆಗೆ ನೋಡಿದ್ರೆ ಹೀರೋ ಮನೆಯಲ್ಲಿಯೇ ವಿಲನ್‌ ಇರ್ತಾನೆ. ಅಂತಹ ಸಿನಿಮಾಗಳು ತೆರೆಯಲ್ಲಿ ನೋಡೋದಕ್ಕೆ ರೋಚಕ. ಬಟ್‌, ಎನ್‌ಎಸ್‌ಇ ಮಾಜಿ ಚೀಫ್‌ ಅಧಿಕಾರಿಯ ವಿಚಾರದಲ್ಲಿಯೂ ಹಾಗೇ ಆಯ್ತಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ಹೌದು, ಚೈತ್ರಾ 2013 ರಲ್ಲಿ ಎಂಡಿ ಆಗೋದಕ್ಕೂ ಮನ್ನ ಆನಂದ್‌ ನಾರಾಯಣ್‌ ಎಂಬ ವ್ಯಕ್ತಿ ಸಾಮಾನ್ಯ ಅಧಿಕಾರಿಯಾಗಿ ಇರ್ತಾನೆ. ಆದ್ರೆ, 2013 ರಲ್ಲಿ ಜೈತ್ರಾ ಅವರಿಗೆ ಸಹಾಯಕ ಅಧಿಕಾರಿಯಾಗಿ ನೇಮಕವಾಗಿ ಬಿಡ್ತಾನೆ. ಆತನ ಸ್ಯಾಲರಿ ಕೂಡ 1.38 ಲಕ್ಷ ರೂಪಾಯಿಗೆ ಏರಿಕೆಯಾಗುತ್ತೆ. ಯೆಸ್‌, ಇದೇ ವಿಚಾರ ನೋಡಿ ಈಗ ಅನುಮಾನ ಹುಟ್ಟಿಸಿದ್ದು. ಹಾಗಾದ್ರೆ ಆ ನಿಗೂಢ ಬಾಬಾ ಆಗಿ ಆನಂದ್‌ ಕಾರ್ಯನಿರ್ವಿಸಿದ್ದಾನಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದ್ರೆ, ನಿಷ್ಪಕ್ಷಪಾತ ತನಿಖೆಯ ನಂತರವೇ ಸತ್ಯ ಹೊರ ಬರಲು ಸಾಧ್ಯ.

ಈ ಪ್ರಕರಣವನ್ನು ನೋಡ್ತಾ ಇದ್ರೆ ಯಾವ ಹಾಲಿವುಡ್‌ ಥ್ರಿಲಿಂಗ್‌ ಮೂವಿಗೂ ಕಮ್ಮಿ ಇಲ್ಲ ಅನ್ನೋದು ಗೊತ್ತಾಗುತ್ತೆ. ಇದರಲ್ಲಿ ದೊಡ್ಡ ಮಟ್ಟದ ಗೋಲ್‌ಮಾಲ್‌ ನಡೆದಿರೋದು ಸತ್ಯ. ಅದೇನು ಅಂತ ಹೊರ ಬರಬೇಕು ಅಂದ್ರೆ ನಿಗೂಢ ಬಾಬಾ ಯಾರು ಅನ್ನೋದು ಗೊತ್ತಾಗ ಬೇಕು. ಆದಷ್ಟು ಬೇಗ ತನಿಖೆ ಪೂರ್ಣಗೊಂಡು ಬಾಬಾ ರಹಸ್ಯ ಹೊರಬರುವಂತೆ ಆಗ್ಲಿ.

News First Live Kannada


Leave a Reply

Your email address will not be published. Required fields are marked *