NTR​ ಸಾಹಸಕ್ಕೆ ಭೇಷ್ ಎಂದ ರಾಜಮೌಳಿ.. ಬಲ್ಗೇರಿಯಾದಲ್ಲಿ ಯಂಗ್ ಟೈಗರ್ ಮಾಡಿದ್ದೇನು?


ರಾಮ್ ಚರಣ್ ಒಂದು ರೀತಿ ಚಂಡಮಾರುತ ಇದ್ದಂತೆ, ಎನ್​ಟಿಆರ್ ಹುಲಿ ಇದ್ದಂತೆ ಎಂದು ಜಕ್ಕಣ್ಣ ಹೊಗಳಿದ್ದೇ ಹೊಗಳಿದ್ದು. ತ್ರಿಬಲ್ ಆರ್​​ ಚಿತ್ರದ ಹೀರೋಗಳ ಬಗ್ಗೆ ರಾಜಮೌಳಿ ಹೀಗೆ ಸುಮ್ಮನೆ ಹೇಳಿಲ್ಲ. ಅವರ ಹಾರ್ಡ್​ವರ್ಕ್​, ಡೆಡಿಕೇಷನ್ ನೋಡಿ ಕೊಂಡಾಡಿದ್ದಾರೆ. ಬಲ್ಗೇರಿಯಾದಲ್ಲಿ ಯಂಗ್ ಟೈಗರ್ ಸಾಹಸ ಕಂಡು ಶಾಕ್ ಆದ್ರಂತೆ, ರಾಮ್ ಚರಣ್ ಡೆಡಿಕೇಷನ್​ಗೆ ಕ್ಲೀನ್ ಬೋಲ್ಡ್ ಆದ್ರಂತೆ. ಅಷ್ಟಕ್ಕೂ ಎನ್​ಟಿಆರ್ ಮಾಡಿದ ಸಾಹಸವೇನು? ರಾಜಮೌಳಿ ಹೇಳಿದ ಆ ಘಟನೆ ಯಾವುದು?

ಬಾಹುಬಲಿ ನಿರ್ದೇಶಕ ರಾಜಮೌಳಿ ಡೈರೆಕ್ಟ್ ಮಾಡಿರುವ ಆರ್​ಆರ್​ಆರ್​ ಸಿನಿಮಾ ಕೊನೆಗೂ ತೆರೆಮೇಲೆ ಬರೋಕೆ ರೆಡಿಯಾಗಿದೆ. ಕೋವಿಡ್ ಕಾರಣದಿಂದ ಪದೇ ಪದೇ ಮುಂದಕ್ಕೆ ಹೋಗುತ್ತಿದ್ದ ಪ್ಯಾನ್ ಇಂಡಿಯಾ ಚಿತ್ರ ಮಾರ್ಚ್ 24 ರಂದು ವರ್ಲ್ಡ್​ವೈಡ್ ರಿಲೀಸ್ ಆಗುತ್ತಿದೆ. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್​ಟಿಆರ್ ಮೊಟ್ಟ ಮೊದಲ ಸಲ ಒಟ್ಟಿಗೆ ತೆರೆಹಂಚಿಕೊಂಡಿರುವುದು ಫ್ಯಾನ್ಸ್​ಗೆ ಯುಗಾದಿ, ದೀಪಾವಳಿ ಹಬ್ಬವೆಲ್ಲಾ ಒಟ್ಟೊಟ್ಟಿಗೆ ಬರೋತರ ಸಂಭ್ರಮಿಸುತ್ತಿದ್ದಾರೆ.

ನಾಟು ನಾಟು ಸಾಂಗ್​ಗೆ ಭಾಯಿಜಾನ್ ಫಿದಾ
ಆರ್​ಆರ್​ಆರ್​ ಮುಂದಿನ ತಿಂಗಳು ತೆರೆಕಾಣುತ್ತಿರುವ ಹಿನ್ನೆಲೆ ರಾಜಮೌಳಿ ಅಂಡ್ ಟೀಂ ಪ್ರಚಾರ ಶುರು ಮಾಡಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ತ್ರಿಬಲ್ ಆರ್ ಪ್ರಮೋಷನ್ ಮಾಡಲಾಗಿದ್ದು, ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಚೀಫ್ ಗೆಸ್ಟ್ ಆಗಿದ್ದರು. ಈ ಮೆಗಾ ಚಿತ್ರಕ್ಕೆ ಸಲ್ಲು ಭಾಯ್ ಸಾಥ್ ಕೊಟ್ಟಿದ್ದಕ್ಕೆ ಖುಷಿಯಾದ ರಾಜಮೌಳಿ, ಸುಲ್ತಾನ್​ಗೆ ಆಭಾರಿ ಎಂದರು.

ಎನ್​ಟಿಆರ್​ ಸಾಹಸಕ್ಕೆ ಭೇಷ್ ಎಂದ ರಾಜಮೌಳಿ
ಕೊಮ್ಮರನ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೂನಿಯರ್ ಎನ್​ಟಿಆರ್ ಡೆಡಿಕೇಷನ್​ಗೆ ರಾಜಮೌಳಿ ಫುಲ್​ಮಾರ್ಕ್ಸ್​ ಕೊಟ್ಟಿದ್ದಾರೆ. ಎನ್​ಟಿಆರ್ ಇಂಟ್ರೋಡಕ್ಷನ್ ದೃಶ್ಯವನ್ನು ಬಲ್ಗೇರಿಯಾದಲ್ಲಿ ಶೂಟಿಂಗ್ ಮಾಡಲಾಯಿತು. ಆ ದಟ್ಟ ಅರಣ್ಯದಲ್ಲಿ ಎನ್​ಟಿಆರ್ ಬರಿಗಾಲಿನಲ್ಲಿ ಓಡಬೇಕಿತ್ತು. ಕಲ್ಲು, ಮುಳ್ಳು ಲೆಕ್ಕಿಸದ ಯಂಗ್ ಟೈಗರ್ ಹುಲಿಯಂತೆ ಓಡಿದ್ದರು ಎಂದು ರಾಜಮೌಳಿ ಎದೆ ತಟ್ಟಿ ಹೇಳಿಕೊಂಡರು.

2000 ಜನರ ನಡುವೆ ಅಬ್ಬರಿಸಿದ್ದ ರಾಮ್ ಚರಣ್
ಮೆಗಾಪುತ್ರನ ಹಾರ್ಡ್​ವರ್ಕ್​ಗೆ ಜಕ್ಕಣ್ಣ ಶರಣು

ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸಿರುವ ರಾಮ್ ಚರಣ್ ತೇಜ ಅವರ ಇಂಟ್ರಡಕ್ಷನ್ ದೃಶ್ಯವೂ ಬಹಳ ಸಾಹಸಮಯವಾಗಿತ್ತಂತೆ. ಸುಮಾರು 2000 ಜನರ ನಡುವೆ ಆ ದೃಶ್ಯ ಸೆರೆಹಿಡಿಯಬೇಕಿತ್ತು. ಅಷ್ಟು ದೊಡ್ಡ ಜನಜಂಗುಳಿ, ಧೂಳು, ಮಣ್ಣು ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ರಾಮ್ ಚರಣ್ ರಕ್ತ ಸುರಿಯುತ್ತಿದ್ದರು ಚಂಡಮಾರುತದಂತೆ ನಿಂತು ಕೆಲಸ ಮಾಡಿದರು ಎಂದು ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್​ಆರ್​ಆರ್​ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಆದರೆ, ಇದ್ಯಾವುದರಲ್ಲೂ ಇರದ ದೃಶ್ಯವೊಂದು ಸಿನಿಮಾದ ಸೆಕೆಂಡ್ ಹಾಫ್​ನಲ್ಲಿ ಬರುತ್ತಂತೆ. ಆ ಸೀನ್ ನೋಡಬೇಕಾದರೆ ಒಂದು ಕ್ಷಣ ಉಸಿರಾಟ ನಿಲ್ಲಬಹುದು, ಹೃದಯ ಬಡಿತವೂ ದಿಢೀರ್ ಹೆಚ್ಚುತ್ತೆ ಎಂದು ಜಕ್ಕಣ್ಣ ಆತ್ಮವಿಶ್ವಾಸದ ಮಾತುಗಳನ್ನಾಡಿ ಇನ್ನಷ್ಟು ರೋಚಕತೆ ಉಂಟು ಮಾಡಿದ್ದಾರೆ.

ಎನ್​ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಸಿನಿಮಾ ಬಾಹುಬಲಿ ದಾಖಲೆ ಬ್ರೇಕ್ ಮಾಡಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ನಿಜಕ್ಕೂ ಆರ್​ಆರ್​ಆರ್ ರೆಕಾರ್ಡ್ ಬ್ರೇಕ್ ಮಾಡುತ್ತಾ ಅಥವಾ ಹೊಸ ಚರಿತ್ರೆ ಸೃಷ್ಟಿಸುತ್ತಾ ನೋಡೋಣ.

News First Live Kannada


Leave a Reply

Your email address will not be published.