NTR31: ಜ್ಯೂ.ಎನ್​ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ; ನೀಲ್-ತಾರಕ್ ಕಾಂಬಿನೇಷನ್​ನ ಹೊಸ ಚಿತ್ರ ಅನೌನ್ಸ್​​​ | Prashanth Neel and Jr NTR movie NTR31 announced backed by Mythri Movie Makers see first look


NTR31: ಜ್ಯೂ.ಎನ್​ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ; ನೀಲ್-ತಾರಕ್ ಕಾಂಬಿನೇಷನ್​ನ ಹೊಸ ಚಿತ್ರ ಅನೌನ್ಸ್​​​

‘ಎನ್​ಟಿಆರ್​31’ ಫಸ್ಟ್​​ ಲುಕ್ (ಎಡ ಚಿತ್ರ), ಪ್ರಶಾಂತ್ ನೀಲ್-ಜ್ಯೂ.ಎನ್​ಟಿಆರ್ (ಬಲ ಚಿತ್ರ)

Jr NTR Birthday | Prashanth Neel: ಜ್ಯೂ.ಎನ್​ಟಿಆರ್ ಜನ್ಮದಿನದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ 3 ಉಡುಗೊರೆಗಳು ಸಿಕ್ಕಿವೆ. ಗುರುವಾರ ‘ಎನ್​ಟಿಆರ್ 30’ ಅನೌನ್ಸ್ ಆಗಿತ್ತು. ಇಂದು ಪ್ರಶಾಂತ್ ನೀಲ್- ತಾರಕ್ ಕಾಂಬಿನೇಷನ್​ನ ‘ಎನ್​ಟಿಆರ್31’ ಫಸ್ಟ್​ ಲುಕ್ ಬಿಡುಗಡೆಯಾಗಿದೆ. ಇದಲ್ಲದೇ ‘ಆರ್​ಆರ್​ಆರ್​’ ಚಿತ್ರ ಇಂದಿನಿಂದ ಓಟಿಟಿಯಲ್ಲಿ ಬಿತ್ತರವಾಗಲಿದೆ.

ಟಾಲಿವುಡ್​ನ ಖ್ಯಾತ ನಟ ಜ್ಯೂ.ಎನ್​ಟಿಆರ್ (JR NTR Birthday) ಇಂದು (ಮೇ.20) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜ್ಯೂ.ಎನ್​ಟಿಆರ್​ ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹತ್ತಿಸುವಂತೆ ಪ್ರಶಾಂತ್ ನೀಲ್ ಕಾಂಬಿನೇಷನ್​ನ ಹೊಸ ಚಿತ್ರ ಘೋಷಣೆಯಾಗಿದೆ. ‘ಎನ್​ಟಿಆರ್​31’ ಎಂದು ಚಿತ್ರವನ್ನು ಗುರುತಿಸಲಾಗುತ್ತಿದ್ದು, ಮೊದಲ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಪುಷ್ಪ’ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ‘ಮೈತ್ರಿ ಮೂವಿ ಮೇಕರ್ಸ್​’ ನೀಲ್-ತಾರಕ್ ಕಾಂಬಿನೇಷನ್​ನ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಮೊದಲ ಪೋಸ್ಟರ್​ನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿರುವ ಜ್ಯೂ.ಎನ್​ಟಿಆರ್​ ಕಣ್ಣಿನಲ್ಲೇ ಅಬ್ಬರಿಸಿದ್ದಾರೆ. ಪ್ರಶಾಂತ್ ನೀಲ್ ಟ್ರೇಡ್​ ಮಾರ್ಕ್​ ಮಾದರಿಯಲ್ಲಿ ಕಪ್ಪು-ಬಿಳುಪಿನ ಪೋಸ್ಟರ್​ ರಿಲೀಸ್ ಮಾಡಲಾಗಿದೆ. ಅದಕ್ಕೆ ‘‘ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ. ಅವನ ಮಣ್ಣು, ಅವನ ಆಳ್ವಿಕೆ.. ಆದರೆ ರಕ್ತ ಮಾತ್ರ ಅವನದ್ದಲ್ಲ’’ ಎಂದು ಪವರ್​ಫುಲ್ ಕ್ಯಾಪ್ಶನ್ ನೀಡಲಾಗಿದೆ. ಚಿತ್ರದ ಪೋಸ್ಟರ್ ಇಲ್ಲಿದೆ.

ಮೈತ್ರಿ ಮೂವಿ ಮೇಕರ್ಸ್​ ಹಂಚಿಕೊಂಡ ಟ್ವೀಟ್:

ಜ್ಯೂ.ಎನ್​ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ:

ನಿನ್ನೆಯಷ್ಟೇ ಕೊರಟಾಲ ಶಿವ ಹಾಗೂ ಜ್ಯೂ.ಎನ್​ಟಿಆರ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಿತ್ತು. ಅದನ್ನು ‘ಎನ್​ಟಿಆರ್30’ ಹೆಸರಿನಿಂದ ಗುರುತಿಸಲಾಗುತ್ತಿದೆ. ಅದರ ಸಣ್ಣ ಟೀಸರ್​ ಕೂಡ ಬಿಡುಗಡೆ ಮಾಡಲಾಗಿತ್ತು. ಪಕ್ಕಾ ಆಕ್ಷನ್​ ಚಿತ್ರದ ಸೂಚನೆ ನೀಡಿರುವ ಅದು ವೈರಲ್ ಆಗಿತ್ತು.

ಎರಡು ಹೊಸ ಚಿತ್ರಗಳು ಅನೌನ್ಸ್​ ಆದ ಖುಷಿಯಲ್ಲಿ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯೂ ಸಿಕ್ಕಿದೆ. ಹೌದು. ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಆರ್​ಆರ್​ಆರ್​’ ಇಂದಿನಿಂದ ಓಟಿಟಿಯಲ್ಲಿ ಬಿತ್ತರವಾಗುತ್ತಿದೆ. ಈ ಮೂಲಕ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ ಸಿಕ್ಕಿದಂತಾಗಿದ್ದು, ನೆಚ್ಚಿನ ನಟನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *