OLECTRA: ಅಸ್ಸಾಂನಿಂದ 151 ಕೋಟಿ ರೂ. ಮೌಲ್ಯದ 100 ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​ಗಳಿಗೆ ಆರ್ಡರ್ | OLECTRA bags ordered from Assam The Electric Bus order value is Rs 151 crore


ಇನ್ನು 9 ತಿಂಗಳ ಅವಧಿಯಲ್ಲಿ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​​ಗಳನ್ನು ವಿತರಿಸಲಾಗುವುದು. ಮುಂದಿನ 5 ವರ್ಷಗಳ ಅವಧಿಗೆ ಈ ಬಸ್‌ಗಳ ನಿರ್ವಹಣೆಗೆ ಈ ಕಂಪನಿಯೇ ಜವಾಬ್ದಾರರಾಗಿರುತ್ತದೆ.

OLECTRA: ಅಸ್ಸಾಂನಿಂದ 151 ಕೋಟಿ ರೂ. ಮೌಲ್ಯದ 100 ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​ಗಳಿಗೆ ಆರ್ಡರ್

ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್‌

ಹೈದರಾಬಾದ್: ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ (OLECTRA) 100 ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದೆ. ಈಶಾನ್ಯ ರಾಜ್ಯಗಳಿಂದ ಬಂದ ಮೊದಲ ಆರ್ಡರ್ ಇದಾಗಿದೆ. ಇನ್ನು 9 ತಿಂಗಳ ಅವಧಿಯಲ್ಲಿ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​​ಗಳನ್ನು (Electric Buses) ವಿತರಿಸಲಾಗುವುದು. ಮುಂದಿನ 5 ವರ್ಷಗಳ ಅವಧಿಗೆ ಈ ಬಸ್‌ಗಳ ನಿರ್ವಹಣೆಗೆ ಈ ಕಂಪನಿಯೇ ಜವಾಬ್ದಾರರಾಗಿರುತ್ತದೆ.

ಅಂದಹಾಗೆ, ಈ 100 ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಯ ಮೌಲ್ಯವು ಅಂದಾಜು 151 ಕೋಟಿ ರೂ. ಆಗಿದೆ. ಈ ಬಗ್ಗೆ ಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ.ವಿ ಪ್ರದೀಪ್ ಮಾತನಾಡಿ, “ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂನಿಂದ ಮೊದಲ ಆರ್ಡರ್ ಸಿಕ್ಕಿರುವುದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಈ ಆದೇಶದೊಂದಿಗೆ, ನಮ್ಮ ಬಸ್ಸುಗಳು ಭಾರತದ ಎಲ್ಲಾ ಮೂಲೆಗಳಲ್ಲಿ ಸಂಚರಿಸುತ್ತಿವೆ. ಇಂಗಾಲದ ಹೊರಸೂಸುವಿಕೆಯನ್ನು ಈ ಬಸ್​ಗಳು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published.