
ಮೈಸೂರಿನ ಒಲಂಪಿಯಾ ಚಿತ್ರಮಂದಿರ
Mysuru | Sandalwood: ಪ್ರೇಕ್ಷಕರ ಕೊರತೆಯ ಕಾರಣದಿಂದ ರಾಜ್ಯದಲ್ಲಿ ಒಂದೊಂದೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ಬಂದ್ ಆಗಿದೆ. 1949ರಲ್ಲಿ ಸ್ಥಾಪನೆಯಾಗಿದ್ದ ಒಲಂಪಿಯಾ ಚಿತ್ರಮಂದಿರವನ್ನು ಪ್ರೇಕ್ಷಕರ ಕೊರತೆಯ ಕಾರಣದಿಂದ ಮುಚ್ಚಲಾಗುತ್ತಿದೆ.
ಮೈಸೂರು: ಪ್ರೇಕ್ಷಕರ ಕೊರತೆಯ ಕಾರಣದಿಂದ ರಾಜ್ಯದಲ್ಲಿ ಒಂದೊಂದೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಕೊರೊನಾ ಕಾಲಘಟ್ಟದ ನಂತರವಂತೂ ಚಿತ್ರಮಂದಿರಗಳು ನಷ್ಟಕ್ಕೆ ತುತ್ತಾಗಿವೆ. ಈಗಲೂ ಸ್ಟಾರ್ ಚಿತ್ರಗಳ ಹೊರತಾಗಿ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಸುಳಿಯುವುದು ಅಪರೂಪ. ಹೀಗಾಗಿ ಚಿತ್ರಮಂದಿರವನ್ನು ನಿರ್ವಹಿಸುವುದು ಸವಾಲಾಗಿದೆ. ಈ ಎಲ್ಲಾ ಅನಿವಾರ್ಯ ಕಾರಣಗಳಿಂದ ಮಾಲಿಕರು ಥಿಯೇಟರ್ ಮುಚ್ಚಲು ಮುಂದಾಗುತ್ತಿದ್ದಾರೆ. ಈ ಪಟ್ಟಿಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರ (Olympia Theatre Mysuru) ಸೇರ್ಪಡೆಯಾಗಿದೆ. ಗಾಂಧಿ ವೃತ್ತದ ಬಳಿಯಿರುವ ಒಲಿಂಪಿಯಾ ಚಿತ್ರಮಂದಿರವು ಇತಿಹಾಸದ ಪುಟ ಸೇರಲಿದೆ. ಪ್ರೇಕ್ಷಕರ ಕೊರತೆಯ ಕಾರಣದಿಂದ ಚಿತ್ರಮಂದಿರವನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ. 1949ರಲ್ಲಿ ಒಲಂಪಿಯಾ ಚಿತ್ರಮಂದಿರವು ನಿರ್ಮಾಣವಾಗಿತ್ತು.
ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಉಳಿದಿರೋದು 10 ಮಾತ್ರ!
ಮೈಸೂರಿನಲ್ಲಿ ಕಳೆದ ಕೆಲವು ಸಮಯಗಳಲ್ಲಿ ಹಲವು ಥಿಯೇಟರ್ಗಳು ಬಂದ್ ಆಗಿವೆ. ಪ್ರಖ್ಯಾತ ಚಿತ್ರಮಂದಿರಗಳಾದ ಲಕ್ಷ್ಮಿ, ಸರಸ್ವತಿ, ಶಾಂತಲಾಗಳು ಇತ್ತೀಚೆಗೆ ಬಂದ್ ಆಗಿದ್ದವು. ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಈಗ 10 ಚಿತ್ರಮಂದಿರಗಳಷ್ಟೇ ಉಳಿದಿವೆ. ಇದು ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ತಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ಚಿತ್ರಮಂದಿರಗಳನ್ನು ಮುಚ್ಚಲು ಮಾಲಿಕರು ಮುಂದಾಗುತ್ತಿದ್ದಾರೆ.