Omicron in Karnataka: ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊವಿಡ್ ದೃಢ; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ | Omicron in Karnataka BBMP Commissioner Gaurav Gupta said 2 Omicron Infected Persons Treating in Bangalore Hospital


Omicron in Karnataka: ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊವಿಡ್ ದೃಢ; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ

ಗೌರವ್ ಗುಪ್ತ

ಬೆಂಗಳೂರು: ಕರ್ನಾಟಕದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಇಬ್ಬರಿಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್​​ ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದ 66 ವರ್ಷದ ವೃದ್ಧನಿಗೆ ಒಮಿಕ್ರಾನ್​​ ದೃಢ ಪಟ್ಟಿದೆ. ಪ್ರಾಥಮಿಕ 24, ದ್ವಿತೀಯ ಸಂಪರ್ಕಿತ 240 ಜನರ ಪತ್ತೆ ಮಾಡಲಾಗಿದೆ. ಬೆಂಗಳೂರಿನ ಕೋಣನಕುಂಟೆಯ 46 ವರ್ಷದ ವ್ಯಕ್ತಿಗೆ ದೃಢವಾಗಿದೆ. ಅವರ ಪ್ರಾಥಮಿಕ 13, ದ್ವಿತೀಯ ಸಂಪರ್ಕಿತ 205 ಜನರ ಪತ್ತೆ ಮಾಡಲಾಗಿದ್ದು, ಅವರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಪ್ರಾಥಮಿಕ, ದ್ವಿತೀಯ​​ ಸಂಪರ್ಕಿತರ ಪೈಕಿ ಐವರಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ಗೌರವ್ ಗುಪ್ತ ಹೇಳಿದ್ದಾರೆ.

46 ವರ್ಷದ ವ್ಯಕ್ತಿಗೆ ನ. 25ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ಜಿನೋಮಿಕ್ ಸೀಕ್ವೆನ್ಸಿಂಗ್ ರಿಪೋರ್ಟ್​ನಲ್ಲಿ ಒಮಿಕ್ರಾನ್ ಸೋಂಕು ದೃಢ ಪಟ್ಟಿದೆ. ಅವರನ್ನು ಹೋಮ್ ಐಸೋಲೇಷನ್​ನಲ್ಲಿಟ್ಟು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಸೋಂಕಿತನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಐಸೋಲೇಷನ್ ಮಾಡಲಾಗಿದೆ. ಪ್ರಾಥಮಿಕ, ದ್ವಿತೀಯ​​ ಸಂಪರ್ಕಿತರ ಪೈಕಿ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕಿತ ಮೂವರಿಗೆ ಪಾಸಿಟಿವ್​ ಬಂದಿದೆ. ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ ಎಂದು ಗೌರವ್ ಗುಪ್ತ ಹೇಳಿದ್ದಾರೆ.

46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ದೃಢಪಟ್ಟಿದೆ. 46 ವರ್ಷದ ವ್ಯಕ್ತಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನ. 20, ನ. 22ರಂದು ಟೆಸ್ಟ್ ವೇಳೆ ಪಾಸಿಟಿವ್ ಬಂದಿತ್ತು. ನ.24ರಂದು ಜಿನೋಮಿಕ್ ಸೀಕ್ವೆನ್ಸಿಂಗ್​​ಗೆ ಕಳುಹಿಸಿದ್ದೆವು. ಇಂದು ಬಂದ ರಿಪೋರ್ಟ್​ನಲ್ಲಿ ಒಮಿಕ್ರಾನ್​​ ದೃಢಪಟ್ಟಿದೆ. ಐಸೋಲೇಷನ್​​ನಲ್ಲಿ ಇಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್​​ ದೃಢಪಟ್ಟಿದೆ. ಒಮಿಕ್ರಾನ್​​ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಇನ್ನೋರ್ವ ಸೋಂಕಿತನ ಟ್ರಾವೆಲ್ ಹಿಸ್ಟರಿ ಬಗ್ಗೆಯೂ ಮಾಹಿತಿ ನೀಡಿರುವ ಗೌರವ್ ಗುಪ್ತ, ದಕ್ಷಿಣ ಆಫ್ರಿಕಾದಿಂದ 66 ವರ್ಷದ ವೃದ್ಧ ನ. 20ಕ್ಕೆ ಬಂದಿದ್ದರು. ಅವರಿಗೆ ಏರ್​ಪೋರ್ಟ್​ನಲ್ಲಿ ಪರೀಕ್ಷೆ ನಡೆಸಿದಾಗ ಕೊವಿಡ್ ನೆಗೆಟಿವ್ ಬಂದಿತ್ತು. ಇಂದು ಜಿನೋಮಿಕ್ ಸೀಕ್ವೆನ್ಸಿಂಗ್ ರಿಪೋರ್ಟ್​ನಲ್ಲಿ ಪಾಸಿಟಿವ್ ಬಂದಿತ್ತು. ಈವರೆಗೆ ನಡೆಸಿದ ಎಲ್ಲ ಪರೀಕ್ಷೆಯಲ್ಲಿ ನೆಗೆಟಿವ್​​ ವರದಿ ಬಂದಿತ್ತು. ನೆಗೆಟಿವ್​​ ರಿಪೋರ್ಟ್ ಬಳಿಕ ನ. 27ರಂದು ಅವರು ದುಬೈಗೆ ವಾಪಸ್​ ತೆರಳಿದ್ದರು ಎಂದು ತಿಳಿಸಿದ್ದಾರೆ.

ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಆರ್​ಬಿಐ ಲೇಔಟ್​ನಲ್ಲಿರುವ 46 ವರ್ಷದ ವೈದ್ಯನ ಮನೆ ಸುತ್ತಮುತ್ತ ಬಿಬಿಎಂಪಿ ಬ್ಯಾರಿಕೇಡ್​ ಅಳವಡಿಸಿದೆ.

TV9 Kannada


Leave a Reply

Your email address will not be published. Required fields are marked *