Onam 2022: ಓಣಂ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ, ಮುಂಗಡ ಬುಕ್ಕಿಂಗ್ ಸೌಲಭ್ಯ | Onam 2022 on September 8 KSRTC to arrange special bus facilities to Kerala


KSRTC: ಕೆಎಸ್​ಆರ್​ಟಿಸಿ ವೆಬ್​​ಸೈಟ್​ನಲ್ಲಿ ಬುಕ್ಕಿಂಗ್​ಗೆ ಅವಕಾಶವಿದೆ. 4 ಕ್ಕಿಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಮತ್ತು ಎರಡೂ ಕಡೆ ಸಂಚರಿಸುವ ಟಿಕೆಟ್​ ಕಾಯ್ದಿರಿಸಿದರೆ ಶೇ. 10ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ.

Onam 2022: ಓಣಂ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ, ಮುಂಗಡ ಬುಕ್ಕಿಂಗ್ ಸೌಲಭ್ಯ

ಓಣಂ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ, ಮುಂಗಡ ಬುಕ್ಕಿಂಗ್ ಸೌಲಭ್ಯವಿದೆ

ಬೆಂಗಳೂರು: ಮುಂದಿನ ವಾರ ಬರುವ ಓಣಂ ಹಬ್ಬಕ್ಕೆ (Onam 2022) ರಾಜ್ಯ ಸಾರಿಗೆ ಸಂಸ್ಥೆ ಕೆಎಸ್​ಆರ್​ಟಿಸಿಯಿಂದ (KSRTC) ಕೇರಳಕ್ಕೆ (Kerala) ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 6 ಹಾಗೂ ಸೆಪ್ಟೆಂಬರ್ 7ರಂದು (ಮಂಗಳವಾರ-ಬುಧವಾರ) ಬೆಂಗಳೂರಿನಿಂದ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 8ರಂದು ಓಣಂ ಹಬ್ಬವಿದೆ. ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿ ನಗರದಿಂದ ಈ ವಿಶೇಷ ಬಸ್‌ಗಳು ಸಂಚರಿಸಲಿವೆ.

ಕೇರಳದ ಕಣ್ಣೂರು, ಕೋಯಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ಶಿರೂರ್​, ಕೊಟ್ಟಾಯಂ ಮತ್ತು ತಿರುವಂತಪುರಂಗೆ ಈ ವಿಶೇಷ ಬಸ್​​ಗಳು ತೆರಳಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. www.ksrtc.karnataka.gov.in ವೆಬ್​​ಸೈಟ್​ನಲ್ಲಿ ಬುಕ್ಕಿಂಗ್​ಗೆ ಅವಕಾಶವಿದೆ. 4 ಕ್ಕಿಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಮತ್ತು ಎರಡೂ ಕಡೆ ಸಂಚರಿಸುವ ಟಿಕೆಟ್​ ಕಾಯ್ದಿರಿಸಿದರೆ ಶೇ. 10ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.