ಒನ್‌ಪ್ಲಸ್ ಮತ್ತೊಂದು ಹೊಸ ಫೋನನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ. ಅದುವೇ ಒನ್‌ಪ್ಲಸ್ ನಾರ್ಡ್ 2ಟಿ 5ಜಿ (OnePlus Nord 2T 5G) ಸ್ಮಾರ್ಟ್‌ಫೋನ್.
ಕಳೆದ ಎರಡು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿರುವ ಪ್ರಸಿದ್ಧ ಒನ್‌ಪ್ಲಸ್ (OnePlus) ಕಂಪನಿ ಉತ್ತುಂಗದತ್ತ ಸಾಗುತ್ತಿದೆ. ಭಿನ್ನ ಮಾದರಿಯ ಮೊಬೈಲ್ಗಳನ್ನು ಪರಿಚಯಿಸಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಒನ್‌ಪ್ಲಸ್ ಮತ್ತೊಂದು ಹೊಸ ಫೋನನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ. ಅದುವೇ ಒನ್‌ಪ್ಲಸ್ ನಾರ್ಡ್ 2ಟಿ 5ಜಿ (OnePlus Nord 2T 5G) ಸ್ಮಾರ್ಟ್‌ಫೋನ್. ಬಂಪರ್ ಫೀಚರ್ಗಳಿಂದ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಫೋನ್ನಲ್ಲಿ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. 4,500mAh ಬ್ಯಾಟರಿ ಬ್ಯಾಕ್ಅಪ್ಗೆ ಸೂಕ್ತವೆನಿಸುವ 65W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಉಳಿದಂತೆ ಇದರ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.