Oppo A16K Price Drop: ಈ ವರ್ಷದ ಆರಂಭದಲ್ಲಿ ಒಪ್ಪೋ ಸಂಸ್ಥೆ ಒಪ್ಪೋ ಎ16ಕೆ (Oppo A16K) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಫೋನ್ ದರದಲ್ಲಿ ಇದೀಗ ಭರ್ಜರಿ ಇಳಿಕೆ ಕಂಡು ಬಂದಿದೆ.
ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗೂ ಸೈ ಮಿಡ್ ರೇಂಜ್ ಮೊಬೈಲ್ಗೂ ರೆಡಿ ಎಂಬಂತೆ ಆಕರ್ಷಕ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ಒಪ್ಪೋ (Oppo) ಸಂಸ್ಥೆಗೆ A ಸರಣಿಯ ಫೋನ್ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಇದೇ ಸರಣಿಯಲ್ಲಿ ಈ ವರ್ಷದ ಆರಂಭದಲ್ಲಿ ಒಪ್ಪೋ ಸಂಸ್ಥೆ ಒಪ್ಪೋ ಎ16ಕೆ (Oppo A16K) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಫೋನ್ ದರದಲ್ಲಿ ಇದೀಗ ಭರ್ಜರಿ ಇಳಿಕೆ ಕಂಡು ಬಂದಿದೆ. ಈ ಸ್ಮಾರ್ಟ್ಫೋನ್ (Smartphone) ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಹಾಗಾದ್ರೆ ಇದರ ನೂತನ ಬೆಲೆ ಎಷ್ಟು?, ಏನೆಲ್ಲ ಫೀಚರ್ಗಳಿವೆ ಎಂಬುದನ್ನು ನೋಡೋಣ.