
Oppo Reno 8 Series
Oppo Reno 8, the Oppo Reno 8 Pro, Reno 8 Pro+: ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ.
ಬಿಡುಗಡೆಗೂ ಮುನ್ನವೇ ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ್ದ ಒಪ್ಪೋ ರೆನೋ 8 ಸರಣಿ (Oppo Reno 8 Series) ಇದೀಗ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ. ಈ ಸ್ಮಾರ್ಟ್ಫೋನ್ ಸುಧಾರಿತ ವಿನ್ಯಾಸ, ಅಪ್ಡೇಟ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಕಾಣಿಸಿಕೊಂಡಿವೆ. ವಿಶೇಷ ಎಂದರೆ ಒಪ್ಪೋ ರೆನೋ 8 ಪ್ರೊ ಅತ್ಯಂತ ಬಲಿಷ್ಠವಾದ ಸ್ನ್ಯಾಪ್ಡ್ರಾಗನ್ 7 ಜೆನ್ 1 SoC ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.