ORS ಸರಳ, ಅಗ್ಗದ ಮತ್ತು ಪರಿಣಾಮಕಾರಿ ಔಷಧಿ. ಇದರ ಬಳಕೆಯಿಂದಾಗಿ ಅತಿಸಾರ, ಕಾಲರಾ ಮತ್ತು ನಿರ್ಜಲೀಕರಣದ ಕಾರಣದಿಂದಾಗಿ ಜಾಗತಿಕವಾಗಿ ಸಾವುಗಳು ಶೇ93 ರಷ್ಟು ಕಡಿಮೆಯಾಗಿದೆ.

ಪದ್ಮ ಪ್ರಶಸ್ತಿ ವಿಜೇತರಾದ ದಿಲೀಪ್ ಮಹಲನಾಬಿಸ್,ಮೋವಾ ಸುಬಾಂಗ್, ಅಪ್ಪುಕುಟ್ಟ ಪೊದುವಾಳ್
ದೆಹಲಿ: ಓಆರ್ಎಸ್ (ORS) ಸಂಶೋಧಕ ದಿಲೀಪ್ ಮಹಲನಾಬಿಸ್ (Dilip Mahalanabis) ಅವರು ವೈದ್ಯಕೀಯ (ಪೀಡಿಯಾಟ್ರಿಕ್ಸ್) ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪದ್ಮವಿಭೂಷಣ (ಮರಣೋತ್ತರ) (Padma Vibhushan) ನೀಡಿ ಗೌರವಿಸಲಾಗುವುದು. ಕೇಂದ್ರ ಸರ್ಕಾರ ಬುಧವಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ORS ಸರಳ, ಅಗ್ಗದ ಮತ್ತು ಪರಿಣಾಮಕಾರಿ ಔಷಧಿ. ಇದರ ಬಳಕೆಯಿಂದಾಗಿ ಅತಿಸಾರ, ಕಾಲರಾ ಮತ್ತು ನಿರ್ಜಲೀಕರಣದ ಕಾರಣದಿಂದಾಗಿ ಜಾಗತಿಕವಾಗಿ ಸಾವುಗಳು ಶೇ93 ರಷ್ಟು ಕಡಿಮೆಯಾಗಿದೆ. ಓಆರ್ಎಸ್ ಜಾಗತಿಕವಾಗಿ 5 ಕೋಟಿ ಜೀವಗಳನ್ನು ಉಳಿಸಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದಿಂದ ಹಿಂದುರುಗಿದ್ದ ಅವರು 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮಹಲನಾಬಿಸ್ ಓಆರ್ಎಸ್ನ ಪರಿಣಾಮಕಾರಿತ್ವವನ್ನು ತೋರಿಸಿದ್ದರು.
ಪದ್ಮಶ್ರೀ ಪುರಸ್ಕೃತರ ಕಿರುಪರಿಚಯ
- ಉತ್ತರ ಸೆಂಟಿನೆಲ್ ದ್ವೀಪದಿಂದ 48 ಕಿಮೀ ದೂರದಲ್ಲಿರುವ ದ್ವೀಪವೊಂದರಲ್ಲಿ ವಾಸವಾಗಿರುವ ಜರಾವಾ ಬುಡಕಟ್ಟಿನೊಂದಿಗೆ ಕೆಲಸ ಮಾಡುತ್ತಿರುವ ಅಂಡಮಾನ್ನ ನಿವೃತ್ತ ಸರ್ಕಾರಿ ವೈದ್ಯ ರತನ್ ಚಂದ್ರ ಕರ್ ಅವರಿಗೆ ವೈದ್ಯಕೀಯ (ಫಿಸಿಶಿಯನ್) ಕ್ಷೇತ್ರದಲ್ಲಿ ಪದ್ಮಶ್ರೀ.
- ಗುಜರಾತ್ನಲ್ಲಿ ಸಿದ್ದಿ ಸಮುದಾಯದ ಅಭ್ಯುದಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಿದ್ದಿ ಬುಡಕಟ್ಟು ಸಮಾಜ ಸೇವಕಿ ಮತ್ತು ನಾಯಕಿ ಹೀರಾಬಾಯಿ ಲೋಬಿಗೆ ಸಮಾಜಕಾರ್ಯ (ಬುಡಕಟ್ಟು) ಕ್ಷೇತ್ರದಲ್ಲಿ ಪದ್ಮಶ್ರೀ.
- ಕಳೆದ 50 ವರ್ಷಗಳಿಂದ ಹಿಂದುಳಿದ ಜನರಿಗೆ ಚಿಕಿತ್ಸೆ ನೀಡುತ್ತಿರುವ ಜಬಲ್ಪುರದ ಮಾಜಿ ಯೋಧ ಮತ್ತು ವೈದ್ಯ ಮುನೀಶ್ವರ್ ಚಂದರ್ ದಾವರ್ ಅವರಿಗೆ ವೈದ್ಯಕೀಯ ( ಆರೋಗ್ಯ ರಕ್ಷಣೆ) ಕ್ಷೇತ್ರದಲ್ಲಿ ಪದ್ಮಶ್ರೀ.
- ದಿಮಾ ಹಸಾವೊದ ನಾಗಾ ಸಮಾಜ ಸೇವಕ, ಹೆರಕಾ ಧರ್ಮದ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ರಾಮ್ಕುಯಿವಾಂಗ್ಬೆ ನ್ಯೂಮ್ ಅವರಿಗೆ ಸಾಮಾಜಿಕ ಕಾರ್ಯ (ಸಂಸ್ಕೃತಿ) ಕ್ಷೇತ್ರದಲ್ಲಿ ಪದ್ಮಶ್ರೀ.
- ಗಾಂಧಿವಾದಿ ಮತ್ತು ಕೇರಳದ ಪಯ್ಯನ್ನೂರಿನ ಸ್ವಾತಂತ್ರ್ಯ ಹೋರಾಟಗಾರ ವಿ ಪಿ ಅಪ್ಪುಕುಟ್ಟ ಪೊದುವಾಳ್ ಅವರಿಗೆ ಸಮಾಜಕಾರ್ಯ (ಗಾಂಧಿವಾದಿ) ಕ್ಷೇತ್ರದಲ್ಲಿ ಪದ್ಮಶ್ರೀ.
ತಾಜಾ ಸುದ್ದಿ
ತಾಜಾ ಸುದ್ದಿ