ಪದ್ಮ ಪ್ರಶಸ್ತಿ 2023: ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಎರಡು ವಿಭಾಗಗಳಲ್ಲಿ ಒಟ್ಟು 26 ವ್ಯಕ್ತಿಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ORS ಸಂಶೋಧಕ ದಿಲೀಪ್ ಮಹಾಲನಾಬಿಸ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ನೀಡಲಾಗುವುದು

ದಿಲೀಪ್ ಮಹಾಲನಾಬಿಸ್
ಈ ವರ್ಷದ ಪದ್ಮ ಪ್ರಶಸ್ತಿ (Padma Awards) ಪ್ರಕಟವಾಗಿದೆ. ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಎರಡು ವಿಭಾಗಗಳಲ್ಲಿ ಒಟ್ಟು 26 ವ್ಯಕ್ತಿಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ORS ಸಂಶೋಧಕ ದಿಲೀಪ್ ಮಹಲನಾಬಿಸ್ (Dilip Mahalanabis) ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ) (Padma Vibhushan) ಪ್ರಶಸ್ತಿ ನೀಡಲಾಗುವುದು. 74 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಸರ್ಕಾರ ಅತ್ಯುನ್ನತ ಸಾಗರಿಕ ಪ್ರಶಸ್ತಿ ಪ್ರಕಟಿಸಿದ್ದು ಮಹಲನಾಬಿಸ್ ಅವರ ಪ್ರಯತ್ನಗಳು ಓಆರ್ಎಸ್ ಅನ್ನು ವ್ಯಾಪಕವಾಗಿ ಬಳಸುವುದಕ್ಕೆ ಕಾರಣವಾಯಿತು, ಇದು ಜಾಗತಿಕವಾಗಿ ಐದು ಕೋಟಿಗೂ ಹೆಚ್ಚು ಜೀವಗಳನ್ನು ಉಳಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿಕಯಲ್ಲಿ ತಿಳಸಿದೆ. ಪಶ್ಚಿಮ ಬಂಗಾಳದವರಾಗಿದ್ದಾರೆ ಮಹಲನಾಬಿಸ್.
ಬುಡಕಟ್ಟು ಹೋ ಭಾಷಾ ವಿದ್ವಾಂಸರಾದ ಜನುಮ್ ಸಿಂಗ್ ಸೋಯ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿಗೌರವಿಸಲಾಗುವುದು. ಟೊಟೊ (ಡೆಂಗ್ಕಾ) ಭಾಷಾ ಸಂರಕ್ಷಕ, ಧನಿರಾಮ್ ಟೊಟೊ, ಮಂಡಿಯ ಸಾವಯವ ಕೃಷಿಕರಾದ ನೆಕ್ರಮ್ ಶರ್ಮಾ, ತೆಲಂಗಾಣದ ಭಾಷಾಶಾಸ್ತ್ರ ಪ್ರಾಧ್ಯಾಪಕರಾದ ಬಿ ರಾಮಕೃಷ್ಣ ರೆಡ್ಡಿ ಅವರಿಗೆ ಪದ್ಮಶ್ರೀ ಲಭಿಸಿದೆ.
ತಾಜಾ ಸುದ್ದಿ
ಪದ್ಮವಿಭೂಷಣ ಪ್ರಶಸ್ತಿ
ದಿಲೀಪ್ ಮಹಲನಾಬಿಸ್
ಪದ್ಮಶ್ರೀ ಪ್ರಶಸ್ತಿ
ರತನ್ ಚಂದ್ರ ಕರ್ , ಹೀರಾಬಾಯಿ ಲೋಬಿ, ಮುನೀಶ್ವರ್ ಚಂದರ್ ದಾವರ್, ರಾಮ್ಕುಯಿವಾಂಗ್ಬೆ ನ್ಯೂಮ್,ವಿ ಪಿ ಅಪ್ಪುಕುಟ್ಟನ್ ಪೊದುವಾಲ್
ಸಂಕುರಾತ್ರಿ ಚಂದ್ರಶೇಖರ್,ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್,ತುಲಾ ರಾಮ್ ಉಪ್ರೇತಿ,ನೆಕ್ರಮ್ ಶರ್ಮಾ
ಜನುಮ್ ಸಿಂಗ್ ಸೋಯ್,ಧನಿರಾಮ್ ಟೊಟೊ,ಬಿ ರಾಮಕೃಷ್ಣ ರೆಡ್ಡಿ, ಅಜಯ್ ಕುಮಾರ್ ಮಾಂಡವಿ,ರಾಣಿ ಮಾಚಯ್ಯ,ಕೆ ಸಿ ರನ್ನರಸಂಗಿ
ರೈಸಿಂಗ್ಬೋರ್ ಕುರ್ಕಲಾಂಗ್,ಮಂಗಳಾ ಕಾಂತಿ ರಾಯ್,ಮೋವಾ ಸುಬಾಂಗ್,ಮುನಿವೆಂಕಟಪ್ಪ,ದೋಮರ್ ಸಿಂಗ್ ಕುನ್ವರ್,
ಪರಶುರಾಮ ಕೊಮಾಜಿ ಖುನೆ, ಗುಲಾಮ್ ಮುಹಮ್ಮದ್ ಝಾಝ್, ಭಾನುಭಾಯಿ ಚಿತಾರಾ, ಪರೇಶ್ ರಾತ್ವಾ, ಕಪಿಲ್ ದೇವ್ ಪ್ರಸಾದ್.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ