ಫೇಸ್ಬುಕ್ನ ಸಹಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರ ಭದ್ರತೆಗಾಗಿ ಫೇಸ್ಬುಕ್ ಪ್ರತಿದಿನ ಬರೋಬ್ಬರಿ 46 ಲಕ್ಷ ಹಣವನ್ನ ಖರ್ಚು ಮಾಡುತ್ತಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ. ಏಪ್ರಿಲ್ 11 ರಂದು ಫೇಸ್ಬುಲ್ 2020 ರಲ್ಲಿ ಜುಕರ್ಬರ್ಗ್ ಅವರ ಭದ್ರತೆಗಾಗಿಯೇ ಒಟ್ಟು 171 ಕೋಟಿ ರೂಗಳನ್ನ ವ್ಯಯಿಸಿರೋದಾಗಿ ಹೇಳಿದೆ.
ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಜೊತೆಗೆ ಫೇಸ್ಬುಕ್ ನಡೆಸಿದ ವಾರ್ಷಿಕ ವಿಮರ್ಶಾ ಭೇಟಿಯಲ್ಲಿ ಈ ವಿಚಾರವನ್ನು ಫೇಸ್ಬುಕ್ ಬಹಿರಂಗಗೊಳಿಸಿದೆ ಎನ್ನಲಾಗಿದೆ. ಈ ಹಿಂದಿಗಿಂತಲೂ 2020 ರಲ್ಲಿ ಜುಕರ್ಬರ್ಗ್ ಅವರ ಭದ್ರತೆಗಾಗಿ ಹೆಚ್ಚಿನ ಭದ್ರತಾ ವೆಚ್ಚವನ್ನು ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಜುಕರ್ ಬರ್ಗ್ ಅವರಿಗೆ ಬೆದರಿಕೆ ಇದ್ದು ಅವರ ನಿವಾಸ, ಅವರ ಕುಟುಂಬದ ಪ್ರಯಾಣದ ಖರ್ಚು ಸೇರಿ ಒಟ್ಟು 171 ಕೋಟಿ ವೆಚ್ಚವಾಗಿದೆ ಎಂದು ಫೇಸ್ಬುಕ್ ಹೇಳಿದೆ.
ಮತ್ತೊಂದು ಅಚ್ಚರಿಯ ವಿಚಾರವೆಂದರೆ ಜುಕರ್ಬರ್ಗ್ ತಾವೇ ಹುಟ್ಟುಹಾಕಿದ ಸಂಸ್ಥೆಯಿಂದ ವಾರ್ಷಿಕವಾಗಿ ಕೇವಲ 1 ಡಾಲರ್ ಸಂಬಳವನ್ನಷ್ಟೇ ಪಡೆಯುತ್ತಿದ್ದಾರೆ. ಇದರ ಹೊರತಾಗಿ ಬೋನಸ್ನ್ನೂ ಕೂಡ ಅವರು ಪಡೆಯುತ್ತಿಲ್ಲ ಎಂದು ಫೇಸ್ಬುಕ್ ಹೇಳಿಕೊಂಡಿದೆ.
The post ಜುಕರ್ಬರ್ಗ್ ಭದ್ರತೆಗಾಗಿಯೇ ಫೇಸ್ಬುಕ್ನಿಂದ ದಿನಕ್ಕೆ 46 ಲಕ್ಷ; ವರ್ಷಕ್ಕೆ 171 ಕೋಟಿ ಖರ್ಚು appeared first on News First Kannada.
Source: News First Kannada
Read More