Pakistan police entered Ex PM Imran Khan’s Home Hours After He Leaves For Court | ವಿಚಾರಣೆಗಾಗಿ ಕೋರ್ಟ್​​ಗೆ ತೆರಳಿದ ಕೂಡಲೇ ಇಮ್ರಾನ್ ಖಾನ್ ಮನೆಗೆ ನುಗ್ಗಿದ ಪಾಕ್ ಪೊಲೀಸ್


ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಅವರ ಮನೆಗೆ ನುಗ್ಗಿದಾಗ ಖಾನ್ ಅವರ ಪತ್ನಿ ಬುಶ್ರಾ ಬೇಗಂ ಅವರು ಮನೆಯಲ್ಲಿದ್ದರು. ಪೊಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ, ಕನಿಷ್ಠ 10 ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ವಿಚಾರಣೆಗಾಗಿ ಕೋರ್ಟ್​​ಗೆ ತೆರಳಿದ ಕೂಡಲೇ ಇಮ್ರಾನ್ ಖಾನ್ ಮನೆಗೆ ನುಗ್ಗಿದ ಪಾಕ್ ಪೊಲೀಸ್

ಇಮ್ರಾನ್ ಖಾನ್ ಮನೆಗೆ ನುಗ್ಗಿದ ಪೊಲೀಸ್

ಲಾಹೋರ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್  (Imran khan) ಇಸ್ಲಾಮಾಬಾದ್‌ಗೆ (Islamabad) ತೆರಳುತ್ತಿದ್ದಂತೆ ಅವರ ಲಾಹೋರ್‌ನಲ್ಲಿರುವ ಮನೆಗೆ ಪಾಕಿಸ್ತಾನ (Pakistan) ಪೊಲೀಸರು ಪ್ರವೇಶಿಸಿದ್ದಾರೆ ಎಂದು ಪಿಟಿಐ ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಅವರ ಮನೆಗೆ ನುಗ್ಗಿದಾಗ ಖಾನ್ ಅವರ ಪತ್ನಿ ಬುಶ್ರಾ ಬೇಗಂ ಅವರು ಮನೆಯಲ್ಲಿದ್ದರು. ಪೊಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ, ಕನಿಷ್ಠ 10 ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. 30 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಖಾನ್ ಅವರ ಮನೆಯಲ್ಲಿ ಅವರ ಬೆಂಬಲಿಗರನ್ನು ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವ ವಿಡಿಯೊವನ್ನು ಪಿಟಿಐ ಪಕ್ಷ ಟ್ವೀಟ್ ಮಾಡಿದೆ. ಜಮಾನ್ ಪಾರ್ಕ್‌ನಲ್ಲಿ ಇದೀಗ ಅತ್ಯಂತ ಕೆಟ್ಟ ಚಿತ್ರಹಿಂಸೆ. ಏನಾದರೂ ಸಂಭವಿಸಿದರೆ ಮತ್ತೆ ಅಪಘಾತ ಎಂದು ಬಣ್ಣಿಸುತ್ತೀರಾ!? ಎಂಬ ಬರಹದೊಂದಿಗೆ ಈ ವಿಡಿಯೊವನ್ನು ಟ್ವೀಟ್ ಮಾಡಲಾಗಿದೆ.

ಏತನ್ಮಧ್ಯೆ ಬುಶ್ರಾ ಬೇಗಂ ಒಬ್ಬರೇ ಇರುವ ಜಮಾನ್ ಪಾರ್ಕ್‌ನಲ್ಲಿರುವ ನನ್ನ ಮನೆಯ ಮೇಲೆ ಪಂಜಾಬ್ ಪೊಲೀಸರು ದಾಳಿ ನಡೆಸಿದ್ದಾರೆ. ಅವರು ಯಾವ ಕಾನೂನಿನ ಅಡಿಯಲ್ಲಿ ಇದನ್ನು ಮಾಡುತ್ತಿದ್ದಾರೆ? ಇದು ಲಂಡನ್ ಯೋಜನೆಯ ಭಾಗವಾಗಿದ್ದು, ಪರಾರಿಯಾಗಿರುವ ನವಾಜ್ ಷರೀಫ್ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಮಾಡಿದ ಉಪಕಾರ ಕಾರ್ಯವಾಗಿದೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *