ಕಳೆದ ಐದು ತಿಂಗಳಿಂದ ಇಕ್ರಾ ತನ್ನ ಪ್ರಿಯಕರನ ಜೊತೆ ಇದ್ದರು. ನೇಪಾಳದಲ್ಲಿ ಮದುವೆಯಾಗಿ, ಭಾರತಕ್ಕೆ ಎಂಟ್ರಿ ಆಗುತಿದ್ದಂತೆ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಯಾರ ಗಮನಕ್ಕೂ ಬಾರದಂತೆ ದೇಶದಲ್ಲಿ ಸೆಟಲ್ ಆಗಿದ್ದಾರೆ.

ಇಕ್ರಾ-ಮುಲಾಯಂ
ಬೆಂಗಳೂರು: ಪ್ರೀತಿಯಲ್ಲಿ ಬಿದ್ದ ಯುವತಿ ಪಾಕಿಸ್ತಾನ ಗಡಿ ಪಾರು ಮಾಡಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರೀತಿಯೇ ಒಂದು ಮಾಯೆ. ಇದು ಯಾವಾಗ ಯಾರನ್ನು ಬೇಕಾದ್ರು ಯಾವ ಹಂತಕ್ಕೆ ಬೇಕಾದ್ರು ಕಳಿಸುತ್ತೆ. ಒಂದ್ ಸಾರಿ ಪ್ರೇಮಿಗಳು ಕಮಿಟ್ ಆದ್ರೆ. ಪ್ರಪಂಚವೇ ತಲೆಕೆಳಗಾದ್ರೂ ಪ್ರೇಮಿಗಳು ಮಾತ್ರ ಬೇರೆ ಆಗಲ್ಲ. ಸದ್ಯ ಈಗ ಅದೇ ಪ್ರೀತಿಯನ್ನು ನಂಬಿ ಭಾರತಕ್ಕೆ ಬಂದಿದ್ದ ಯುವತಿ ಈಗ ಪೊಲೀಸ ಬಲೆಗೆ ಬಿದ್ದಿದ್ದಾಳೆ.
ಇದು ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ. ಆದ್ರೆ ಈ ಜೋಡಿ ಹಕ್ಕಿಗಳು ಬಂಧಿ ಆಗಿರೋದು ಮಾತ್ರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಇಕ್ರಾ ಜಿವಾನಿ ಎಂಬ ಪಾಕಿಸ್ತಾನ ಮೂಲದ ಯುವತಿಗೆ ಆನ್ಲೈನ್ ಗೇಮ್ ಹುಚ್ಚು. ಹೀಗಿರುವಾಗ ಲುಡೋ ಗೇಮ್ ಆಡುವ ವೇಳೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಅನ್ನೋ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಅಂತಿಮವಾಗಿ ಇಬ್ಬರೂ ಮದ್ವೆಯಾಗ್ಬೇಕು ಅಂತಾ ನಿರ್ಧರಿಸಿದ್ದಾರೆ. ಆಗ ಜಿವಾನಿ, ಟೂರಿಸ್ಟ್ ವೀಸಾದಲ್ಲಿ ನೇಪಾಳಕ್ಕೆ ಬಂದಿದ್ದಾಳೆ. ನೇಪಾಳಕ್ಕೆ ಬಂದಿದ್ದ ಈಕೆಯನ್ನ, ಪ್ರಿಯಕರ ಮುಲಾಯಂ ಸಿಂಗ್ ರಹಸ್ಯವಾಗಿ ಭಾರತದ ಗಡಿವರೆಗೂ ಕರೆತಂದಿದ್ದಾನೆ. ಬಳಿಕ ಬಿಹಾರದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬಂದು ಸೆಟ್ಲ್ ಆಗಿದ್ದಾನೆ. ಅಷ್ಟೇ ಅಲ್ಲ , ಇಕ್ರಾ ಜಿವಾನಿಗೆ ರವಾ ಯಾದವ್ ಎನ್ನುವ ಹೆಸರಲ್ಲಿ ನಕಲಿ ಅಧಾರ್ ಮಾಡಿಸಿ, ಜುನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದಾನೆ. ಆದ್ರೆ ಯುವತಿ ಇಕ್ರಾ, ಪಾಕಿಸ್ತಾನದ ಹೈದ್ರಾಬಾದ್ನಲ್ಲಿರೋ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ವೇಳೆ ಗುಪ್ತಚರ ಇಲಾಖೆ ಅಲರ್ಟ್ ಆಗಿ, ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಬೆಳ್ಳಂದೂರು ಪೊಲೀಸರು ಟೀಮ್ ರಚನೆ ಮಾಡಿ ಯುವತಿಯನ್ನ ಪತ್ತೆ ಹಚ್ಚಿದ್ದಾರೆ. ಇದೀಗ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿ